New CPI of Kottur police station Durugappa reports for duty

ಕೊಟ್ಟೂರು: ಪಟ್ಟಣದ ಪೊಲೀಸ್ ಠಾಣೆಯ ನೂತನ ಸಿಪಿಐ ದುರುಗಪ್ಪ ಕರ್ತವ್ಯಕ್ಕೆ ಬುಧವಾರ ಹಾಜರಾದರು.
ಈ ಹಿಂದೆ ಸಿಪಿಐ ಆಗಿ ವೆಂಕಟ ಸ್ವಾಮಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ನಂತರ ವಿಕಾಸ್ ಲಂಮಣಿ ಹಾಗೂ ನಾರಾಯಣ ಅವರು ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳು ಗ್ರಾಮದವರಾದ ಇವರು 2003 ನೇ ಬ್ಯಾಚ್ ಆಯ್ಕೆಯಾಗಿ, 2012 ರಲ್ಲಿ సిపిఐ ಮುಂಬಡ್ತಿ ಹೊಂದಿ,
ಹೊಸಪೇಟೆ ಗ್ರಾಮೀಣ, ಹರಪ್ಪನಹಳ್ಳಿ,ಕಡೂರು, ಸಿಂಧನೂರು, ಠಾಣೆಗಳಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿ, ಕೊಟ್ಟೂರು ಠಾಣೆಗೆ ನೂತನ ಸಿಪಿಐ ಆಗಿ ಕರ್ತವ್ಯಕ್ಕೆ ಹಾಜರಾದರು