Major Dhyan Chand’s Birthday: Essay Competition
ಕೊಪ್ಪಳ ಆಗಸ್ಟ್ 21 (ಕರ್ನಾಟಕ ವಾರ್ತೆ): ಮೇಜರ್ ಧ್ಯಾನಚಂದ್‌ರವರ ಜನ್ಮ ದಿನಾಚರಣೆ ಹಾಗೂ ರಾಷ್ಟಿçÃಯ ಕ್ರೀಡಾ ದಿನಾಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕ್ರೀಡೆಯಲ್ಲಿ ಭಾರತದ ಇತಿಹಾಸ, ವಾಸ್ತವ ಹಾಗೂ ಭವಿಷ್ಯತ್ತು. ಕ್ರೀಡಾ ಸಾಧಕರ ಪರಿಚಯದೊಂದಿಗೆ ಈಗಿನ ಯುವಕ, ಯುವತಿಯರಿಗೆ ಕ್ರೀಡಾಲೋಕದಲ್ಲಿ ಸಾಧನೆ ಮಾಡಲು ಪ್ರೇರೆಪಣೆ. ಈಗಿನ ಒತ್ತಡದ ಬದುಕು ಹಾಗೂ ಶಾರೀರಿಕ & ಮಾನಸಿಕ ಸ್ವಾಸ್ತö್ಯ ಮತ್ತು ಶಕ್ತಿಗೊಳಿಸಲು ಕ್ರೀಡೆಯ ಮಹತ್ವ. ಯುವ ಪಿಳೀಗೆಯನ್ನು ದುಶ್ಚಟಗಳಿಂದ ಮುಕ್ತಗೊಳಿಸುವಲ್ಲಿ ಕ್ರೀಡೆಯ ಪಾತ್ರ ಎಂಬ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದ್ದು, 15 ರಿಂದ 35 ವರ್ಷದೊಳಗಿನ ಯುವ ಪ್ರತಿಭೆಗಳಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಕೊಪ್ಪಳ ಜಿಲ್ಲೆಯವರಿಗೆ ಮಾತ್ರ ಅವಕಾಶವಿದ್ದು, ಪ್ರಬಂಧವು ಕನ್ನಡದಲ್ಲಿರಬೇಕು. 5000 ಪದಗಳ ಮಿತಿಯೊಳಗೆ ಬರೆಯಬೇಕು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ. 5 ಸಾವಿರ, ದ್ವಿತೀಯ ರೂ. 4 ಸಾವಿರ, ತೃತೀಯ ರೂ. 3 ಸಾವಿರ, ನಾಲ್ಕನೇ ಸ್ಥಾನಕ್ಕೆ ರೂ. 2 ಸಾವಿರ ಮತ್ತು ಐದನೇ ಸ್ಥಾನಕ್ಕೆ ರೂ. 1 ಸಾವಿರಗಳ ನಗದು ಬಹುಮಾನವಿದ್ದು, ಆ. 29 ರಂದು ನಡೆಯಲಿರುವ ಮೇಜರ್ ಧ್ಯಾನಚಂದ್‌ರವರ ಜನ್ಮ ದಿನದ ಕಾರ್ಯಕ್ರಮದಲ್ಲಿ ವಿಜೇತರಿಗೆ ನಗದು ಬಹುಮಾನಗಳನ್ನು ವಿತರಿಸಲಾಗುವುದು.
ಆಸಕ್ತರು ತಮ್ಮ ವಿಳಾಸ, ಫೋಟೋ ಹಾಗೂ ವಿವರಗಳನ್ನು ಲಕೋಟೆಯೊಂದಿಗೆ ಆಗಸ್ಟ್ 26ರ ಸಂಜೆ 4 ಗಂಟೆಯೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯಾಲಯ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಿಬ್ಬಂದಿ ತುಕಾರಾಂ ರಂಜಪಲ್ಲಿ ಮೊ.ಸಂ: 8197398600 ಅಥವಾ ಕಛೇರಿ ದೂರವಾಣಿ ಸಂಖ್ಯೆ 08539-230121 ಗೆ ಸಂಪರ್ಕಿಸಿ ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.