Breaking News

ಹೆಚ್.ಐ.ವಿ. ಮತ್ತುಏಡ್ಸ್ಅರಿವು: ಆ. 30 ರಂದುಜಿಲ್ಲಾಮಟ್ಟದಬೈಕ್ರ‍್ಯಾಲಿ

HIV and AIDS Awareness: District Level Bike Rally on Aug. 30

ಜಾಹೀರಾತು


ಕೊಪ್ಪಳ ಆಗಸ್ಟ್ 21 (ಕರ್ನಾಟಕ ವಾರ್ತೆ): ಇನ್ಟೆಂನ್ಸಿಫೈಯ್ಡ್ ಐ.ಇ.ಸಿ ಕ್ಯಾಂಪಿಂಗ್ ಅಂಗವಾಗಿ ಕೊಪ್ಪಳ ಜಿಲ್ಲಾ ಮಟ್ಟದ ಬೈಕ್ ರ‍್ಯಾಲಿಯನ್ನು ಆ. 30 ರಂದು ಹಮ್ಮಿಕೊಳ್ಳಲಾಗಿದೆ.
 ರಾಜ್ಯಾದ್ಯಂತ 2 ತಿಂಗಳ ಇನ್ಟೆಂನ್ಸಿಫೈಯ್ಡ್ ಐ.ಇ.ಸಿ ಕ್ಯಾಂಪಿಂಗ್ ಅನ್ನು ಆಗಸ್ಟ್ 12ರ “ಅಂತರಾಷ್ಟ್ರೀಯ ಯುವ ದಿನಾಚರಣೆ” ಯಂದು ಚಾಲನೆ ನೀಡಿದ್ದು, ವಿವಿಧ ಮಾಧ್ಯಮಗಳ ಮೂಲಕ ಜನರಲ್ಲಿ ಹೆಚ್.ಐ.ವಿ. ಮತ್ತು ಏಡ್ಸ್ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಅದರ ಅಂಗವಾಗಿ ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಬೈಕ್ ರ‍್ಯಾಲಿ ಏರ್ಪಡಿಸಲಾಗಿದೆ.
 ಕಾಲೇಜು ವಿದ್ಯಾರ್ಥಿಗಳು, ಡ್ಯಾಪ್ಕೋ ಸಿಬ್ಬಂದಿಗಳು, ಎನ್.ಜಿ.ಓ., ಟಿ.ಐ. ಸಿ.ಬಿ.ಓ ಸೇರಿದಂತೆ ಸಾರ್ವಜನಿಕರು ಸೇರಿ ಹೆಚ್.ಐ.ವಿ., ಏಡ್ಸ್ ಹಾಗೂ ಎಸ್.ಟಿ.ಐ, ಬಗ್ಗೆ ಅರಿವು ಮೂಡಿಸಲು ಪ್ಲೆಕಾರ್ಡ್ಸ್, ಬ್ಯಾನರ್‌ಗಳ ಸಮೇತ ಬೈಕ್ ರ‍್ಯಾಲಿಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಗಂಜ್ ಸರ್ಕಲ್, ಅಶೋಕ ಸರ್ಕಲ್, ಬಸ್‌ಸ್ಟ್ಯಾಂಡ್ ಮಾರ್ಗವಾಗಿ ಲೇಬರ್ ಸರ್ಕಲ್ ಮುಖಾಂತರ ಗಡಿಯಾರ ಕಂಬ ಹಾಗೂ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದಿಂದ ಪುನಃ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಲಿದೆ.
 ಈ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸುವವರು 18 ವರ್ಷ ಮೇಲ್ಪಟ್ಟವರಾಗಿರಬೇಕು. ಚಾಲ್ತಿಯಲ್ಲಿರುವ ವಾಹನ ಪರವಾನಗಿ ಹೊಂದಿರಬೇಕು. ಸಂಚಾರಿ ವಾಹನ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಯಾವುದೇ ನಿಯಮ ಉಲ್ಲಂಘನೆಯಾದಲ್ಲಿ ತಾವೇ ನೇರ ಜವಬ್ದಾರರಾಗಿರುತ್ತೀರಿ. ಇಂಧನ ಅಥವಾ ಇತರೆ ಯಾವುದೇ ವೆಚ್ಚವನ್ನು ಜಿಲ್ಲಾ ಏಡ್ಸ್ ನಿಯಂತ್ರಣಾ ಕಛೇರಿಯಿಂದ ಭರಿಸಲಾಗುವುದಿಲ್ಲ. ರ‍್ಯಾಲಿಯಲ್ಲಿ ಭಾಗವಹಿಸುವಿಕೆಯು ಸಂಪೂರ್ಣವಾಗಿ ಸ್ವ-ಇಚ್ಛೆಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆಗಿದ್ದು, ಈ “ಬೈಕ್ ರ‍್ಯಾಲಿ” ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೊಪ್ಪಳ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗ ಮನವಿ ಮಾಡಿದ್ದಾರೆ.
 ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮೇಲ್ವಿಚಾರಕ ಮಾಲತೇಶ್ ಎಂ. ಸಜ್ಜನರ್ ಮೊ.ಸಂ: 9449846981, ಕೊಪ್ಪಳ ಜಿಲ್ಲಾ ಆಪ್ತ ಸಮಾಲೋಚಕ ಕೃಷ್ಣ ಸಾಲ್ಮನಿ ಮೊ.ಸಂ: 9035112509, ಗಂಗಾವತಿ ಉಪವಿಭಾಗ ಆಸ್ಪತ್ರೆಯ ಆಪ್ತಸಮಾಲೋಚಕ ಶಿವಾನಂದ ಮೊ.ಸಂ: 9380806166, ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದ ಆಪ್ತಸಮಾಲೋಚಕ ಹನುಮಂತಪ್ಪ ಮೊ.ಸಂ: 9986435505, ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದ ಆಪ್ತಸಮಾಲೋಚಕ ಸಿದ್ದರಾಮಪ್ಪ ದೂರವಾಣಿ ಮೊ.ಸಂ: 9972038094, ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಚನ್ನಬಸಪ್ಪ ಮೊ.ಸಂ: 7259571355, ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದ ಆಪ್ತಸಮಾಲೋಚಕ ಅಮರೇಶ ಮೊ.ಸಂ: 9591355153 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳ ಕಛೇರಿಯ ಪ್ರಕಟಣೆ ತಿಳಿಸಿದೆ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.