The Little Hearts School laboratory and new building were inaugurated on the 17th by ISRO Senior Scientist, Smt. Roop. M. V.

ಗಂಗಾವತಿ: ಲಿಟಲ್ ಹಾರ್ಟ್ಸ್ ಶಾಲೆಯ STEM ಪ್ರಯೋಗಾಲಯ ಮತ್ತು ನೂತನ ಕಟ್ಟಡ ದಿ,17 ರಂದು ಇಸ್ರೋ ದ ಹಿರಿಯ ವಿಜ್ಞಾನಿ, ಶ್ರೀಮತಿ ರೂಪ. ಎಂ. ವಿ.ಯವರಿಂದ ಉದ್ಘಾಟಿಸಲಿದ್ದಾರೆ ಮಾಡಲೆದ್ದಾರೆ ಎಂದುನಿರ್ದೇಶಕರಾದ ಪ್ರಾಣೇಶ್ ಆಲಂಪಲ್ಲಿಯವರು ತಿಳಿಸಿದ್ದಾರೆ.
ನೂತನವಾಗಿ ನಿರ್ಮಿಸಲಾದ ನಮ್ಮ ಶಾಲೆಯ ಹೊಸ ಕಟ್ಟಡದಲ್ಲಿ ಅತ್ಯಂತ ಸುಸಜ್ಜಿತವಾದ, 1ನೇ ತರಗತಿಯಿಂದ ಕಾಲೇಜು ಮಕ್ಕಳ ವರೆಗೂ ಉಪಯೋಗವಾಗುವ ವಿಜ್ಞಾನ, ತಂತ್ರಜ್ಞಾನ, ಇಂಜಿನೀ ಯರಿಂಗ್ ಹಾಗೂ ಗಣಿತ ವಿಷಯಗಳಿಗೆ ಸಂಬಂಧಪಟ್ಟಂತಹ ಪ್ರಯೋಗಲಯವನ್ನು (STEM Laboratory) ದಿನಾಂಕ 17-08-2025 ರ ರವಿವಾರ ಬೆಳಿಗ್ಗೆ 9-30 ಕ್ಕೆ ಸರಿಯಾಗಿ ಉದ್ಘಾಟಿಸಲಾಗುತ್ತಿದೆ.
ಈ STEM ಪ್ರಯೋಗಾಲಯದ ಉದ್ಘಾಟನೆಯನ್ನು ಇಸ್ರೋ ದ ಹಿರಿಯ ವಿಜ್ಞಾನಿ, ಚಂದ್ರಯಾನ-3 ರ ಯೋಜನಾ ಉಪನಿರ್ದೇಶಕಿಯಾಗಿ ಯಶಸ್ವಿಯಾದ ಶ್ರೀಮತಿ ರೂಪ. ಎಂ. ವಿ.ಯವರು ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿರಿಯ ಪ್ರಾಧ್ಯಾಪಕರು ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀ ವೆಂಕಟೇಶ್ ಜಿ., ಕೊಪ್ಪಳ ಜಿಲ್ಲಾ ಶಾಲಾ ಶಿಕ್ಷಣದ ಉಪನಿರ್ದೇಶಕರಾದ ಶ್ರೀ ಸೋಮಶೇಖರ್ ಗೌಡ, ಗಂಗಾವತಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ನಟೇಶ್. ಹೆಚ್. ಬಿ., ಚಾಮರಾಜನಗರದ ಗ್ರಾವಿಟಿ ಸೈನ್ಸ್ ಫೌಂಡೇಶನ್ ನ ಕಾರ್ಯದರ್ಶಿಗಳು,ಭೌತಶಾಸ್ತ್ರದ ಉಪನ್ಯಾಸಕರಾದ ಶ್ರೀ ಅಭಿಷೇಕ್. ಎ. ಎಸ್., ಲಿಟಲ್ ಹಾರ್ಟ್ಸ್ ಸ್ಕೂಲ ನ ಖಜಾಂಚಿಗಳಾದ ಶ್ರೀ ಪ್ರಭಾಕರ್ ಚನ್ನುಪಾಟಿ, ನಿರ್ದೇಶಕರಾದ ಶ್ರೀ ಪ್ರಾಣೇಶ್ ಆಲಂಪಲ್ಲಿ ಇವರು ಉಪಸ್ಥಿತರಿರುವರು. ಎಂದು ತಿಳಿಸೀದ್ದಾರೆ.