
79th Independence Day celebrations at BJP office

ಗಂಗಾವತಿ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿಯವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ನಗರ ಮಂಡಲ ಅಧ್ಯಕ್ಷರಾದ ಚಂದ್ರಶೇಖರ್ ಹಿರೂರ್, ಮುಖಂಡರುಗಳಾದ ಎಚ್ ಗಿರೇಗೌಡ್ರು, ವೀರಭದ್ರಪ್ಪ ನಾಯಕ್, ಎಚ್ ಎಮ್ ಸಿದ್ದರಾಮಯ್ಯ ಸ್ವಾಮಿ, ಹನುಮಂತಪ್ಪ ನಾಯಕ್, ಮಾಜಿ ಭಾಜಪ ಅಧ್ಯಕ್ಷ ಕಾಶಿನಾಥ್ ಚಿತ್ರಗಾರ, ದೇವಾನಂದ ದಾಸನಾಳ, ಸಂಗಯ್ಯ ಸ್ವಾಮಿ, ಶ್ರೀನಿವಾಸ್ ದೂಳು, ರೇಖಾ ರಾಯ್ಬಾಗಿ, ವಿಟ್ಟಪ್ಪ ತಳಕಲ್, ಅಕ್ಕಿ ಪ್ರಕಾಶ್, ಟಿ ಆರ್ ರಾಯಬಾಗಿ ಇನ್ನು ಮುಂತಾದವರು ಉಪಸ್ಥಿತರಿದ್ದರು.




