Hampesha Haragolu to be given strict punishment for Gausi Dappa’s murder charges

ಗಂಗಾವತಿ ನಗರದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ। ಬಿ. ಕೃಷ್ಣಪ್ಪಸ್ಥಾಪಿತ ಸಂಘಟನೆಯ ಹಂಪೇಶ ಹರಿಗೋಲ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮುಖಾಂತರ ತಸಿಲ್ದಾರರಿಗೆ ಮನವಿ ಸಲ್ಲಿಸಲಾಯಿತು ತದನಂತರ ಮಾತನಾಡಿದ ಹಂಪೇಶ ಹರಿಗೋಲ. ಕೊಪ್ಪಳದಲ್ಲಿ ಜರುಗಿದ ಗವಿದ್ದಪ್ಪ ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ, ಕರ್ನಾಟಕ ರಾಜ್ಯದಲ್ಲಿ ಎಸ್.ಸಿ/ಎಸ್.ಟಿ ಗಳ ಮೇಲಿನ ದೌರ್ಜನ್ಯ ತಡೆಹಿಡಿಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುತ್ತದೆ.ಬಾನುವಾರ ರಾತ್ರಿ ಸಮಯದಲ್ಲಿ ಕೊಪ್ಪಳ ನಗರದ ಬಹದ್ದೂರ್ ಬಂಡಿ ರಸ್ತೆಯಲ್ಲಿ ಗವಿಸಿದ್ದಪ್ಪ ನಾಯಕ ಎಂಬುವ ಯುವಕನನ್ನು ಪ್ರೀತಿ ವಿಚಾರಕ್ಕೆ ಸಂಬಂದಿಸಿದಂತೆ ಮುಸ್ಲಿಂ ಸಮುದಾಯದ ನಾಲ್ಕು ಜನರು ಸೇರಿಕೊಂಡು ನಡು ರಸ್ತೆಯಲ್ಲಿ ಕೊಲೆ ಮಾಡಿರುವುದನ್ನು ಸಾಮಾನ್ಯ ಜನರ ಬೈಬೀತರಾಗಿ ನಮ್ಮ ಸಂಘಟನೆ ಖಂಡಿಸುತ್ತದೆ. ಸದರಿ ರಾಜ್ಯದಲ್ಲಿ ಇದೆ. ರೀತಿಯಾಗಿ ಎಸ್.ಸಿ/ಎಸ್.ಟಿ. ಮೇಲಿನ ದೌರ್ಜನ್ಯಗಳು ಪುನರಾವರ್ತನೆಯಾಗುತ್ತದೆ. ಪರಿಶಿಷ್ಟ ವರ್ಗ/ಪರಿಶಿಷ್ಟ ಜಾತಿಯವರ ಮೇಲಿನ ದೌರ್ಜನ್ಯ ದಬ್ಬಾಳಕೆಯನ್ನು ತಡೆಯಿಡಿಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು ರಾಜ್ಯಲ್ಲಿ ಗೃಹ ಇಲಾಖೆ ಕಣ್ಣು ಮುಚ್ಚಿಕೊಂಡು ಕೂತಿದೆ ಎಂದು ರಾಜ್ಯದಲ್ಲಿ ಯಾವುದೇ ಘಟನೆ ನಡೆಯಬಾರದೆಂದು ಕಠಿಣ ಕಾನೂನು ಕ್ರಮ ಕೈಗೊಂಡು ಕೊಲೆಗೈದವರನ್ನು ಗಲ್ಲುಶಿಕ್ಷೆಗೆ ಒಳಪಡಿಸಬೇಕು ಮರಣ ಹೊಂದಿದ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರವನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸುತ್ತದೆ. ಬೇಡಿಕೆಗಳು:- 1. ಗವಿಸಿದ್ದಪ್ಪ ನಾಯಕ ಕಗ್ಗೋಲೆ ಮಾಡಿದವರನ್ನು ಗಲ್ಲುಶಿಕ್ಷೆಗೆ ಒಳಪಡಿಸಬೇಕು. 2 ಇವರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು. 3. ಕುಟುಂಬಕ್ಕೆ ರೂ.50.00ಲಕ್ಷ ಪರಿಹಾರವನ್ನು ಸರ್ಕಾರ ನೀಡಬೇಕು. 4. ರಾಜ್ಯದಲ್ಲಿ ಎಸ್.ಟಿ.ಸಮಾಜದ ಮೇಲೆ ದೌರ್ಜನ್ಯ ದಬ್ಬಾಳಕೆ, ಅತ್ಯಾಚಾರ ಕೊಲೆ ಪ್ರಕರಣಗಳು ಸದಂಬಂದ ಪಟ್ಟ ಪೊಲೀಸ್ ಇಲಾಖೆ ಇವರುಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. 5. ಕರ್ನಾಟಕ ರಾಜ್ಯದಲ್ಲಿ ಪೋಲೀಸ್ ಇಲಾಖೆ ಇನ್ನುಮುಂದಾದರು ಇಂತಹ ಘಟನೆಗಳು – ಮುನ್ನೆಚ್ಚರಿಕೆಯನ್ನು ವಹಸಿಬೇಕು. ಎಂದು ಹೇಳಿದರು. ಈ ಸಂದರ್ಭದಲ್ಲಿ ಯಮನೂರಪ್ಪ ನಾಯಕ್ ಗೌವಿಸಿದ್ದಪ್ಪನ ಅವರ ಕುಟುಂಬಗಳಿಗೆ ನ್ಯಾಯ ಸಿಗಬೇಕು ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಹೇಳಿದರು .ಜಂಬಣ್ಣ ಗಂಗಾಮತಸ್ಥ ,ಹನುಮಂತಪ್ಪ ನಾಯಕ,ಬೆಟ್ಟಪ್ಪ ಹಿರೇ ಕುರುಬರು , ಈರಪ್ಪ ನಾಯಕ ,ಬಲರಾಮ ಬಂಡಿ,ದೇವರಾಜ ವಿಠಲಾಪೂರ, ದುರುಗಪ್ಪ, ರಾಮಪ್ಪ, ಉಪಸ್ಥಿತರಿದ್ದರು
Kalyanasiri Kannada News Live 24×7 | News Karnataka
