Appeal to the Governor of Sindh demanding the naming of Kishkindha district




ಗಂಗಾವತಿ: ಕೊಪ್ಪಳ ಲೋಕಸಭಾ ಕ್ಷೇತ್ರ ಹಾಗು ಕೊಪ್ಪಳ ಜಿಲ್ಲೆಗೆ ಕಿಷ್ಕಿಂಧ ಹೆಸರು ನಾಮಕರಣ ಮಾಡಬೇಕೆಂದು ಪರಿಸರ ಪ್ರೇಮಿ, ಕೇಂದ್ರೀಯ ವಿದ್ಯಾಲಯದ ೫ನೇ ತರಗತಿ ವಿದ್ಯಾರ್ಥಿನಿ ಕು.ಸಿಂಧು ಶ್ರೀ ಅಂಜನಾದ್ರಿ ದರುಶನಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರಚೆಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದರು. ರಾಮಾಯಣ ಕಾಲದಲ್ಲಿ ಕಿಷ್ಕಿಂಧ ಅಯೋಧ್ಯೆಯ ರಾಜ್ಯಧಾನಿಯಾಗಿತ್ತು, ಪೌರಾಣಿಕವಾಗಿ, ಬೌಗೋಳಿಕವಾಗಿ ಶ್ರೀಮಂತಿಗೆ ಹೊಂದಿರುವ ಕಿಷ್ಕಿಂದ ಸುಗ್ರೀವ ರಾಜ ಆಡಳಿತ ನಡೆಸುತ್ತಿದ್ದು, ಸಂಸತ್, ಸುಪ್ರೀಮ್ ಕೋರ್ಟ್, ಎಲ್ಲಾ ರಾಜ್ಯಗಳ ಹೈಕೋರ್ಟ್, ವಿಧಾನಸಭೆ ಮುಂದೆ ಸುಗ್ರೀವನ ಮೂರ್ತಿ ಪ್ರತಿಷ್ಠಾಪಿಸಬೇಕು, ಗಂಗಾವತಿ ಅಯೋಧ್ಯಾ ಹಾಗು ಗಂಗಾವತಿ ರಾಮೇಶ್ವರ ರೈಲುಗಳಿಗೆ ಕಿಷ್ಕಿಂಧ ಎಕ್ಸ್ಪ್ರೆಸ್ ಹೆಸರು ನಾಮಕರಣ ಮಾಡಬೇಕು, ಗಂಗಾವತಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಣಿಗಾರಿಕೆ ತಡೆದು ಹಸೀರು ಕರಣಕ್ಕೆ ಆದ್ಯತೆ ನೀಡುವ ಕುರಿತು ಸುಗ್ರೀವಾಜ್ಞೆ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.