Breaking News

ಜಗತ್‌ಕಲ್ಯಾಣಕ್ಕಾಗಿಶ್ರೀ ತಾಯಮ್ಮದೇವಿಯ ಜಾತ್ರಾಮಹೋತ್ಸವ: ಬಿ.ಹುಸೇನಪ್ಪಸ್ವಾಮಿ ಮಾದಿಗ

Sri Thayamma Devi’s festival for the welfare of the world: B. Hussainappaswamy Madiga\

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ನಗರದ ಗಾಂಧಿನಗರದಲ್ಲಿರುವ ಶ್ರೀ ತಾಯಮ್ಮದೇವಿ ದೇವಸ್ಥಾನದ ಜಾತ್ರಾಮಹೋತ್ಸವವು ಇದೇ ಜುಲೈ ೨೪ ಮತ್ತು ೨೫ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಓಂ ಶ್ರೀ ತಾಯಮ್ಮದೇವಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾದ ಬಿ. ಹುಸೇನಪ್ಪಸ್ವಾಮಿ ಮಾದಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಜಾತ್ರಾಮಹೋತ್ಸವದಲ್ಲಿ ಸದ್ಗುರು ನಿರುಪಾದೀಶ್ವರ, ಅಂಕಲಿಮಠದ ದಾಸೋಹಮೂರ್ತಿ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು, ಆನೆಗೊಂದಿ ಕಿಷ್ಕಿಂದಾ ಕ್ಷೇತ್ರದ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದ ಸದ್ಗುರು ಸಚ್ಚಿದಾನಂದ ಬ್ರಹ್ಮಶ್ರೀ ಮಹಾಸ್ವಾಮಿ ಮಹಾರಾಜರುಗಳ ಅಮೃತ ಹಸ್ತದಿಂದ ಪೂಜಾ ಕೈಂಕರ್ಯಗಳನ್ನು ಜರುಗಲಿವೆ.
ಜಾತ್ರಾಮಹೋತ್ಸವದಲ್ಲಿ ಚಿತ್ರದುರ್ಗದ ಶಿವಶರಣ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮಿಗಳು, ಹಿರಿಯೂರು ಆದಿಜಾಂಬವಪೀಠ ಶಾಖಾಮಠದ ಶ್ರೀ ಷಡಕ್ಷರಯ್ಯ ಮಹಾಮುನಿ ಸ್ವಾಮಿಗಳು, ಹಂಪಿ ಮಾತಂಗ ಪರ್ವತದ ಶ್ರೀ ಪೂರ್ಣಾನಂದ ಭಾರತಿ ಸ್ವಾಮಿಗಳೂ, ಶಾರದಾಂಬೆ ಪೀಠದ ಶ್ರೀ ಸುಬ್ರಹ್ಮಣ್ಯ ಭಾರತೀ ಸ್ವಾಮೀಜಿ, ಕೊಪ್ಪಳ ಗವಿಮಠ ಮಹಾಸಂಸ್ಥಾನದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಗಂಗಾವತಿ ಕಲ್ಮಠದ ಡಾ. ಕೊಟ್ಟೂರೇಶ್ವರ ಮಹಸ್ವಾಮಿಗಳು, ಸುಳೇಕಲ್ ಬೃಹನ್ಮಠದ ಭುವನೇಶ್ವರಯ್ಯ ತಾತನವರು, ರಾಜೂರಿನ ಶರಣ ಹನುಮೇಶ್ವರ ಶೂನ್ಯ ಸಿಂಹಾಸನ ಫೀಠಾಧ್ಯಕ್ಷರಾದ ಸದ್ಗುರು ಶರಣ ಗುರುಮೂರ್ತಿ ಮಹಾಸ್ವಾಮಿಗಳು, ರಾಜೂರಿನ ಸದ್ಗುರು ಚಂದಲಿAಗಹನುಮೇಶ್ವರನ ಶೂನ್ಯ ಸಿಂಹಾಸನ ಅನುಭವ ಮಂಟಪದ ಶ್ರೀ ರಾಮಾನಂದ ರಾಜೂರು ರವರುಗಳು ಭಾಗವಹಿಸಲಿದ್ದಾರೆ.
ಜುಲೈ-೨೪ ಗುರುವಾರ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ತಾಯಮ್ಮದೇವಿಗೆ ಪೂಜಾ, ಅಭಿಷೇಕ, ಕುಂಕುಮಾರ್ಚನೆ, ಹೋಮ, ಯಜ್ಞ-ಯಾಗಾದಿಗಳು, ಸ್ವಷ್ಠವಾಚನ, ಗಂಗಾಪೂಜೆ, ಗಣಪತಿ ಪೂಜೆ, ನವಗ್ರಹ ಹೋಮ, ವಾಸ್ತುಹೋಮ, ಕಳಸ ಸ್ಥಾಪನೆ, ದೇವತಾ ಆಹ್ವಾನ, ನವಗ್ರಹಪೂಜೆ, ವಾಸ್ತುಪೂಜೆ, ಕಳಸಾರಾಧನೆ, ಮಹಾಮಂಗಳಾರತಿ ನೇರವೇರುವವು.
ಜುಲೈ-೨೫ ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ತಾಯಮ್ಮದೇವಿಗೆ ಪೂಜಾ, ಗಂಗಾಪೂಜೆ, ಗಣಪತಿ ಪೂಜೆ, ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ನೇರವೇರುವುವು,
ಎರಡೂ ದಿನಗಳು ಮದ್ಯಾಹ್ನ ೨ ಗಂಟೆಗೆ ಅನ್ನಸಂತರ್ಪಣೆ ಜರುಗುವುದು.
ಈ ಜಾತ್ರಾಮಹೋತ್ಸವದಲ್ಲಿ ಎಲ್ಲಾ ಸದ್ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಾಯಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಬಿ. ಹುಸೇನಪ್ಪಸ್ವಾಮಿ ಮಾದಿಗ ಅವರು ವಿನಂತಿಸಿದರು

About Mallikarjun

Check Also

screenshot 2025 09 06 17 53 55 14 6012fa4d4ddec268fc5c7112cbb265e7.jpg

ಲಿಂ ಹಾನಗಲ್ ಕುಮಾರಶಿವಯೋಗಿಗಳ 158ನೇ ಜಯಂತಿ  ಕಾರ್ಯಕ್ರಮದ ಆಹ್ವಾನ ಕರಪತ್ರ ಬಿಡುಗಡೆ

Invitation leaflet released for the 158th Jayanti program of Lim Hanagal Kumara Shivayogi   ಸೆ. …

Leave a Reply

Your email address will not be published. Required fields are marked *