Breaking News

ಅ.೦೩ ಪತ್ರಕರ್ತರ ಗ್ರಂಥಾಲಯ ಲೋಕರ್ಪಣೆ, ಪತ್ರಿಕಾ ದಿನಾಚರಣೆ: ನಾಗರಾಜ್ ಇಂಗಳಗಿ





A.03 Journalists' Library inauguration, Press Day celebration: Nagaraj Ingalagi

ಗಂಗಾವತಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕು ಘಟಕದಿಂದ ನಗರದ ಮಂಥನ ಆವರಣದ ಪತ್ರಿಕಾಭವನದ ಬಳಿ ನೂತನವಾಗಿ ನಿರ್ಮಿಸಿರುವ ಪತ್ರಕರ್ತರ ಗ್ರಂಥಾಲಯ ಲೋಕರ್ಪಣೆ ಹಾಗು ಪತ್ರಿಕಾದಿನಾಚರಣೆಯನ್ನು ಅ.೦೩, ಭಾನುವಾರ, ಬೆಳಗ್ಗೆ ೧೦.೩೦ಕ್ಕೆ ನಗರದ ಮಂಥನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯ ಎಲ್ಲ ಸದಸ್ಯರ ಒಪ್ಪಿಗೆಯಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್. ಆರ್.ಶ್ರೀನಾಥ್. ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ ಸೇರಿದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್, ಕೊಪ್ಪಳ ಜಿಲ್ಲಾಧ್ಯಕ್ಷ ಹನುಮಂತಪ್ಪ ಹಳ್ಳಿಕೇರಿ ಹಾಗು ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೇಮಗುಡ್ಡ ಇವರನ್ನು ಆಹ್ವಾನಿಸಲಾಗುತ್ತಿದ್ದು, ಕಾರ್ಯಕ್ರಮ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗು ಮಾಜಿ ಶಾಸಕ ಪರಣ್ಣ ಮುನವಳ್ಳಿಯವರ ಅನುದಾನದಲ್ಲಿ ಪತ್ರಕರ್ತರಿಗಾಗಿ ನೂತನ ಗ್ರಂಥಲಾಯ ನಿರ್ಮಾಣ ಮಾಡಲಾಗಿದ್ದು, ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಸಿಗಲಿದೆ ಎಂದು ಇಂಗಳಗಿ ವಿವರಿಸಿದರು.
ವೇದಿಕೆಯಲ್ಲಿ ತಾಲೂಕಾ ಪ್ರಧಾನ ಕಾರ್ಯದರ್ಶಿ ದೇವರಾಜ್, ಉಪಾಧ್ಯಕ್ಷ ಹರಿಷ್ ಕುಲಕರ್ಣಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವೃಷಭೇಂದ್ರ ಸ್ವಾಮಿ ನವಲಿ ಹಿರೇಮಠ, ಪ್ರಸನ್ನ ದೇಸಾಯಿ, ಚಂದ್ರಶೇಖರ್ ಮುಕ್ಕುಂದಿ, ಶಿವಪ್ಪ ನಾಯಕ, ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಕುಲಕರ್ಣಿ ಇದ್ದರು.
ಸಭೆಯಲ್ಲಿ ಹಿರಿಯ ಪತ್ರಕರ್ತರಾದ ವಿ.ಎಸ್.ಪಾಟೀಲ್, ವೀರಾಪುರ ಕೃಷ್ಣ, ಸುದರ್ಶನ ವೈದ್ಯ, ವಸಂತ್ ಕುಮಾರ್, ಮಲ್ಲಿಕಾರ್ಜುನ ಗೋಟೂರ್, ಮಂಜುನಾಥ ಗುಡ್ಲಾನೂರು, ವೆಂಕಟೇಶ್ ಪಿ.ಹೊಸಳ್ಳಿ, ರಮೇಶ್ ಜೋಗಿನ್, ಶರಣಯ್ಯ ಸ್ವಾಮಿ, ಶರಣಪ್ಪ ಉಪ್ಪಾರ, ಅಕ್ಷಯ್ ಕುಮಾರ್, ದಿವಾಕರ ಚಂದ್ರಪ್ಪ ನಾಯಕ, ಟಾಕಪ್ಪ ಪಾಲ್ಗೊಂಡಿದ್ದರು.

About Mallikarjun

Check Also

ಗ್ಯಾರಂಟಿ ಮೂಲಕ ಬಡ ಮಧ್ಯಮ ವರ್ಗದ ಜನರಿಗೆ ಸಹಕಾರ : ರೇವಣ್ಣ

Cooperation for poor and middle class people through guarantees: Revanna ಕೊಪ್ಪಳ: ಸಿದ್ದರಾಮಯ್ಯ – ಡಿ.ಕೆ. ಶಿವಕುಮಾರ …

Leave a Reply

Your email address will not be published. Required fields are marked *