Breaking News

ವಿಧಾನ ಪರಿಷತ್ತಿನ  ಸದಸ್ಯ ರವಿಕುಮಾರ್ ರವರು         ಮುಖ್ಯ ಕಾರ್ಯದರ್ಶಿಗಳ  ವಿರುದ್ಧ   ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರೋಷಿನಿ ಗೌಡರಿಂದ  ಖಂಡನೆ

All Karnataka Women Government Employees Association President Roshini Gowda condemns Legislative Council member Ravikumar's derogatory remarks against Chief Secretaries

Screenshot 2025 07 04 19 21 32 80 E307a3f9df9f380ebaf106e1dc980bb66985419040449344928 1024x987


     ಬೆಂಗಳೂರು:  ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಎನ್  ಸರ್ಕಾರದ ಮುಖ್ಯ ಕಾರ್ಯದರ್ಶಿ  ಶಾಲಿನಿ ರಜನೀಶ್ ಐ.ಎ.ಎಸ್, ಕರ್ನಾಟಕ ಸರ್ಕಾರ ಇವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ವಿವಿಧ ವಾರ್ತಾ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಬಿತ್ತರಿಸುವುದನ್ನು ಗಮನಿಸಲಾಗಿದೆ.

ಜಾಹೀರಾತು

ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಾಗಿ ಮುಖ್ಯ ಕಾರ್ಯದರ್ಶಿ ಅವರು ಜವಾಬ್ದಾರಿಯುತ ಮತ್ತು ಗೌರಯುತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ರಾಜ್ಯ ಸಚಿವ ಸಂಪುಟಕ್ಕೆ ಪದನಿಮಿತ್ತ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. ಹಾಗೆಯೇ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೂ ಮುಖ್ಯಸ್ಥರಾಗಿರುತ್ತಾರೆ.  ಶಾಲಿನಿ ರಜನೀಶ್ ರವರು ಒಬ್ಬ ಘನತವೆತ್ತ ಮಹಿಳೆಯಾಗಿ ಎಲ್ಲ ಮಹಿಳೆಯರಿಗೆ ಆದರ್ಶ ಪ್ರಾಯವಾಗಿರುತ್ತಾರೆ.
 ಸರ್ಕಾರದ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯನ್ನು ರವರ ಹುದ್ದೆಯನ್ನು ಗೌರವಿಸದೆ ಮಹಿಳಾ ಅಧಿಕಾರಿಯನ್ನು ವೈಯಕ್ತಿಕವಾಗಿ ಅವಹೇಳನಕಾರಿ ಮಾತುಗಳಿಂದ ಮಾನ್ಯ ರವಿಕುಮಾರ್ ಎನ್ ರವರು ನಿಂದಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇದು ಒಬ್ಬ ಪ್ರಜ್ಞಾವಂತ ಜನಪ್ರತಿನಿಧಿಗೆ ಶೋಭಿಸುವಂತಹ  ಕೆಲಸವಾಗಿರುವುದಿಲ್ಲ. ಸರ್ಕಾರದ ಪರವಾಗಿ ಮತ್ತು ರಾಜ್ಯದ ಸಾರ್ವಜನಿಕ ಹಿತದೃಷ್ಠಿಯಿಂದ ಶ್ರಮಿಸುತ್ತಿರುವ ಒಬ್ಬ ಮಹಿಳಾ ಅಧಿಕಾರಿಯ ಹೆಸರಿಗೆ ಕಳಂಕ ತರುವ ಮತ್ತು ಮಹಿಳೆಯರ ಆತ್ಮಸ್ಥೆöÊರ್ಯ ಕುಗ್ಗಿಸುವ ಹೇಳಿಕೆಗಳು ಖಂಡನೀಯ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮಾಡಿರುವ ಈ ರೀತಿಯ ಅವಮಾನ ಸಮಸ್ತ ಸರಕಾರಿ ನೌಕರರಿಗೆ ಹಾಗೂ ಸಮಸ್ತ ಮಹಿಳಾ ಸಮಾಜಕ್ಕೆ ಆಗಿರುವ ಅವಮಾನ ಎಂದು ಸಚಿವಾಲಯ ನೌಕರರ ಸಂಘವು ಭಾವಿಸಿ, ಮಾನ್ಯ ಸಿಎನ್ ರವಿಕುಮಾರ್ ಅವರ ಈ ಕೃತ್ಯವನ್ನು ಖಂಡಿಸುತ್ತದೆ. ಮಾನ್ಯ ರವಿಕುಮಾರ್ ಎನ್ ರವರು ಕೂಡಲೇ ಈ ಕುರಿತು ಮಾನ್ಯ ಮುಖ್ಯ ಕಾರ್ಯದರ್ಶಿಯವರಲ್ಲಿ ಕ್ಷಮೆ ಯಾಚಿಸುವಂತೆ ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘವು  ಆಗ್ರಹಿಸುತ್ತದೆ.

ಇನ್ನು ಮುಂದೆ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದ ಯಾವುದೇ ಜನ ಪ್ರತಿನಿಧಿಗಳು ಅಸಂವಿಧಾನಿಕ ಪದಗಳಿಂದ/ ಅವಹೇಳನಕಾರಿಯಾಗಿ ಮಾತನಾಡದಂತೆ ಸರ್ಕಾರದಲ್ಲಿ ನಿಯಮಗಳನ್ನು ರೂಪಿಸಬೇಕಾಗಿದೆ ಮತ್ತು ಈ ರೀತಿಯ ಕೃತ್ಯಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಸರ್ಕಾರಕ್ಕೆ ಬೇಡಿಕೆಯನ್ನು ಮಂಡಿಸುತ್ತಾ  ಈ ಕೃತ್ಯವನ್ನು ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘ ಉಗ್ರವಾಗಿ ಖಂಡಿಸುತ್ತದೆ. ಮತ್ತು ಪ್ರತಿರೋಧ ವ್ಯಕ್ತಪಡಿಸುತ್ತದೆ ಎಂದರು ಪ್ರಕಟಣೆಮೂಲಕ ತಿಳಿಸಿದ್ದಾರೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.