Breaking News

ವಿದ್ಯುತ್ ಅವಗಡದಿಂದ ನಮ್ಮ ನಿಮ್ಮಲ್ಲರ ಸುರಕ್ಷತೆಗೆ ಮೊದಲ ಆದ್ಯತೆ:  ಮಂಜುನಾಥ ಕರೆ

Our first priority is your safety from electrical accidents: Manjunath Call

ಜಾಹೀರಾತು

ಗಂಗಾವತಿ: ಗುಲಬರ್ಗಾ ವಿದ್ಯುತ್ ಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಹಾಗೂ ಕಾರ್ಯ ಮತ್ತು ಪಾಲನ ವಿಭಾಗ ಗಂಗಾವತಿ ಸಹಯೋಗದಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ  ಜೆಸ್ಕಾಂ ಸಿಬ್ಬಂದಿಗಳಿಗೆ ಹೆಲ್ಮೆಟ್ ವಿತರಣೆ ಮಾಡಲಾಯಿತು.

 ನಂತರ ಮಾತನಾಡಿದ ಸಹಾಯಕ ಕಾರ್ಯ ನಿರ್ವಾಹಕ  ಅಭಿಯಂತರ ಅಧಿಕಾರಿ ಮಂಜುನಾಥ ನಮ್ಮ ಜೆಸ್ಕಾಂ ಸಿಬ್ಬಂದಿಗಳು ಕೆಲಸ ನಿರ್ವಹಿಸುವಾಗ  ಸುರಕ್ಷತಾ ಸಾಧನಗಳಾದ ಹೆಲೈಟ್, ಲೈನ್ ಟೆಸ್ಟರ್, ಅರ್ಥಿಂಗ್ ರಾಡ್, ಇತ್ಯಾದಿಗಳನ್ನು ಬಳಸುವಾಗ ಹಾಗೂ  ನೀವು ಸಹ ಪವ‌ರ್ ಮ್ಯಾನ್‌ಗಳಿಗೂ ಬಳಸುವಂತೆ ಉತ್ತೇಜಿಸಿ  ನಿಮಗಾಗುವ ಅಪಘಾತವನ್ನು ತಪ್ಪಿಸಿಕೊಳ್ಳಲು ನಿಮ್ಮ ಕುಟುಂಬವನ್ನು ಮತ್ತು  ಕಂಪನಿಯನ್ನು ಅಪಘಾತ ರಹಿತವಾಗಿಸುವಲ್ಲಿ ಸರ್ವ ಪ್ರಯತ್ನವನ್ನು ಮಾಡುತ್ತೀರಿ

ಸೂಕ್ತ ಮಾರ್ಗಯಿಲ್ಲದೆ ಯಾವುದೇ ಕೆಲಸಗಳನ್ನು ನಿರ್ವಹಿಸುವುದಿಲ್ಲ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳನ್ನು ಸೂಕ್ತ ಸುರಕ್ಷತಾ ವಲಯವನ್ನಾಗಿ ನಿರ್ಮಿಸಿಕೊಂಡು ನಿಗಮದ ಕೆಲಸ-ಕಾರ್ಯಗಳನ್ನು ನಿರ್ವಹಿಸುತ್ತೇವೆ ಹಾಗೂ ಗ್ರಾಹಕರಿಗೆ ಅಡಚಣೆ ರಹಿತ ಗುಣಮಟ್ಟದ ವಿದ್ಯುಚ್ಛಕ್ತಿಯನ್ನು ಸರಬರಾಜು ಮಾಡುತ್ತೇವೆ ನಾವು ನೀವು  ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಕೆಲಸವನ್ನು ಮಾಡಿಸುತ್ತಿದ್ದೇವೆ ಎಂದು  ಹೇಳಿದರು,

ನಂತರ  ಜೆಸ್ಕಾಂ ಸ್ಥಳೀಯ ಸಮಿತಿ ಅಧ್ಯಕ್ಷ ಅಬ್ದುಲ್‌ ರಫೀಕ್ ಮಾತನಾಡಿ ಜೆಸ್ಕಾಂ ಇಲಾಖೆ ಸುರಕ್ಷತೆ ವಲಯಕ್ಕಾಗಿ ಕಟ್ಟನಟ್ಟಿನ ಕ್ರಮಗಳನ್ನು ಕೈಗೊಂಡಿದೆ ನಾವು ಸಹ ಇಲಾಖೆಯ ಅಡಿಯಲ್ಲಿ ಮತ್ತು

ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತಮವಾದ ಕೆಲಸವನ್ನು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ  ಕಾರ್ಯನಿರ್ವಾಹಕ ಅಭಿಯಂತರರು ರಿಯಾಜ್ ಅಹ್ಮದ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಎಸ್. ಡಿ.ಹಿರೇಮನಿ, ಖಾಜ ಮೋಹಿನುದ್ದಿನ್, ಲೆಕ್ಕಾಧಿಕಾರಿ ರಫೀಕ್ ಅಹ್ಮದ್,ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ನಂದಕಿಶೋರ್, ಕಾರ್ಯದರ್ಶಿ ಬಸವರಾಜ, ಹಾಗೂ ಎಲ್ಲಾ ಶಾಖಾಧಿಕಾರಿಗಳು ಮತ್ತು ಪವರ್ ಮ್ಯಾನ್ ಗಳು ಸೇರಿದಂತೆ ಇತರರು ಇದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.