Breaking News

ಬಸವಾದಿ ಶರಣರಾದ ಕುರುಬರಗೊಲ್ಲಾಳೇಶ್ವರ ಹಾಗು ಕುಂಬಾರ ಗುಂಡಯ್ಯ ಅವರ ಶರಣೋತ್ಸವಕಾರ್ಯಕ್ರಮ

The festival of the surrender of the Basavadi shepherd Gollaleshwar and the potter Gundayya

ಜಾಹೀರಾತು
20250626 205327 COLLAGE Scaled


ಯಲಬುರ್ಗಾ: ಬಸವಾದಿ ಶರಣರಾದ ಕುರುಬರ ಗೊಲ್ಲಾಳೇಶ್ವರ ಹಾಗು ಕುಂಬಾರ ಗುಂಡಯ್ಯ ಅವರ ಶರಣೋತ್ಸವ ಕಾರ್ಯಕ್ರಮಕ್ಕೆ ಯೋಗಮಾತೆ ಓಂಕಾರೇಶ್ವರಮಾತಾಜಿ ಅವರು ಪುಷ್ಪ ಅರ್ಪಿಸಿ ಚಾಲನೆ ನೀಡಿ , ಮಾತನಾಡಿ ಶರಣರ ಶರಣಿಯರ ವಚನಗಳನ್ನು ಆಲಿಸುವದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯಲು ಸಾದ್ಯ ಎಂದರು. ಸತ್ಪುರಷರ , ಯೋಗಿಗಳ ,ಜೀವನ ಚರಿತ್ರೆಯನ್ನು ನಾವು ಅರಿತುಕೊಳ್ಳಲು ಬಸವಾದಿ ಶರಣರ ಶರಣೋತ್ಸವದಲ್ಲಿ ಭಾಗವಹಿಸಿದಾಗ ಸರ್ವ ಶರಣರ ವಿಚಾರದಾರೆಗಳನ್ನು ಅರಿತುಕೊಳ್ಳುವದಕ್ಕೆ ಸಾದ್ಯವಾಗತ್ತದೆ ಎಂದು ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮ ಕುಮಾರಿ ಗೀತಕ್ಕ ಅಕ್ಕನವರು ಪತಂಜಲಿ ಯೋಗ ಸಮಿತಿಯ ಸಹಕಾರದಲ್ಲಿ ಜು.೨೫ ರಂದು ಜರುಗಿದ ಬಸವ ಸಮಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶರಣರ ಜೀವನ ಚರಿತ್ರೆಯ ಬಗ್ಗೆ ಶೈಲಾಶ್ರಿ ಪಾಟೀಲ ಅವರು ಮಾತನಾಡಿದರು. ಯಲಬುರ್ಗಾದ ಬಸವ ಸಮಿತಿ ಅದ್ಯಕ್ಷ ಸಂಗಣ್ಣ ಟೆಂಗಿನಕಾಯಿ, ಶರಣರಾದ ಶೇಖರಗೌಡ ಉಳ್ಳಾಗಡ್ಡಿ, ಮಲ್ಲನಗೌಡ ಪಾಟೀಲ ಸೇರಿದಂತೆ ಇತರರು ಮಾತನಾಡಿದರು. ಶರಣರಾದ ವೀರಣ್ಣ ನಿಂಗೋಜಿ, ಶರಣಬಸಪ್ಪ ದಾನಕೈ, ಚೆನ್ನಪ್ಪ ಕುಂಬಾರ, ಶಿವಪ್ಪ ಶಾಸ್ತ್ರೀ ಹಡಪದ , ಮೀನಾಕ್ಷಮ್ಮ ಮಲಕಸಮುದ್ರ , ಮುದಕಪ್ಪ ಸಜ್ಜನ, ಸಿದ್ದಲಿಂಗಪ್ಪ ಶ್ಯಾಗೋಟಿ ಪ್ರಾ. ವಿರುಪಾಕ್ಷಪ್ಪ ಹನುಮಶೆಟ್ಟಿ ಸಿದ್ದಯ್ಯ ಕೊಣ್ಣೊರು, ಪರಸುರಾಮ ಹೊಸಮನಿ,ಬಸವರಾಜ ಹಳ್ಳಿ, ಮಾಹಗುಂಡಪ್ಪ ಕಟಟಗೇರಿ , ಬಸವರಾಜ ಮುಗಳಿ,ಪಕೀರಪ್ಪ ಗಾಣಗೇರ , ವೀರೇಶ ಟೆಂಗಿನಕಾಯಿ, ಶರಣಪ್ಪ ಹವಳದ , ಗವಿಸಿದ್ಧಪ್ಪ ಕುಂಬಾರ , ಶಿವಕುಮಾರ ಕುಂಬಾರ,ಉಮೇಶ ಕುಂಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.ಜು.೨೬ ರಂದು
ಬೆಳಿಗ್ಗೆ 6 ಘಂಟೆಗೆ ಇಷ್ಟಲಿಂಗಪೂಜೆಯನ್ನು ಹಲವಾರು ಶರಣ ಶರಣೆಯರು ಭಾಗವಹಿಸಿದಾದ ಪೂಜಾ ವಿಧಿವಿಧಾನಗಳನ್ನು ಮಾತಾಜಿರವರು ಹೇಳಿಕೊಟ್ಟರು. ಈ
ಬಸವರಾಜ ಕಪ್ಪತ್ತಗುಡ್ಡ ಅವರು ಪ್ರಾರ್ಥಿಸಿದರು.ಶರಣ
ದೇವಪ್ಪ ವಾಲ್ಮೀಕಿ ಅವರು ವಂದಿಸಿದರು. ನಂತರ ಅನ್ನ ಪ್ರಸಾದಜರುಗಿತು. ಬಸವ ಸಮಿತಿ, ಈಶ್ವರಿ ವಿದ್ಯಾಲಯದ ಬ್ರಹ್ಮಕುಮಾರಿ ಅಕ್ಕನವರು,ಪತಂಜಲಿ ಯೋಗ ಸಮಿತಿ ಸರ್ವ ಸದಸ್ಯರು ಭಾಗವಹಿಸಿದ್ದರು.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.