Breaking News

ಅಧ್ಯಯನದ ಮೂಲಕ ಸಾಹಿತ್ಯರಚನೆಯಾಗಬೇಕು: ರುದ್ರೇಶ ಭಂಡಾರಿ

Literature should be created through study: Rudresh Bhandari

ಜಾಹೀರಾತು
Screenshot 2025 06 23 20 38 48 29 E307a3f9df9f380ebaf106e1dc980bb6

ಗಂಗಾವತಿ: ಚುಟುಕು ಸಾಹಿತ್ಯಗಳು ಸಮಾಜದ ಬದಲಾವಣೆಗೆ ತುಂಬಾ ಪ್ರಭಾವ ಬೀರಲಿದ್ದು, ಸಾಹಿತ್ಯವು ವಾಸ್ತವ ಸಂಗತಿಗಳ ಕೈಗನ್ನಡಿಯಾಗಬೇಕು, ಆ ನಿಟ್ಟಿನಲ್ಲಿ ಚುಟುಕು ಕವಿಗಳು ಅಧ್ಯಯನದ ಮೂಲಕ ಸಾಹಿತ್ಯ ರಚಿಸಬೇಕು, ಜಿಲ್ಲೆಯಲ್ಲಿ ಸಾಕಷ್ಟು ಚುಟುಕು ಸಾಹಿತಿಗಳಿದ್ದು, ಉದಯೋನ್ಮುಖ ರಚನೆಗಾರರಿಗೆ ವೇದಿಕೆ ಒದಗಿಸಲಾಗುವುದು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರೇಶ ಭಂಡಾರಿ ಹೇಳಿದರು.
ಅವರು ನಗರದ ಕಸಾಪ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಜೂನ್-೨೧ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಈ ಕವಿಗೋಷ್ಠಿಯ ದಿವ್ಯಸಾನಿಧ್ಯವನ್ನು ಅರಳಹಳ್ಳಿ ಬೃಹನ್ಮಠದ ಪೂಜ್ಯ ಶ್ರೀ ರೇವಣಸಿದ್ದಯ್ಯತಾತನವರು ವಹಿಸಿದ್ದರು. ಉದ್ಘಾಟನೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿ ಮಾಡಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬಳ್ಳಾರಿ ವೀರಶೈವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಭ್ರಮರಾಂಭ ಯಾಟೆ ವಹಿಸಿದ್ದರು.
ತಾಲೂಕು ಅಧ್ಯಕ್ಷರಾದ ಅಶೋಕ ಗುಡಿಕೋಟಿ ಮಾತನಾಡಿ, ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಪರಿಣಾಮಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚುಟುಕುಗಳನ್ನು ಪುಸ್ತಕ ರೂಪದಲ್ಲಿ ಹೊರ ರುವ ಮೂಲಕ ದಾಖಲೀಕರಿಸಲಾಗುವುದು. ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹ ಬೆಳವಣಿಗೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ “ಗೌರಿ ಮಕ್ಕಳ ಸಾಂಸ್ಕೃತಿಕ ಸಂಕಥನ ಎಂಬ ಪ್ರಬಂದ ಮಂಡನೆಗೆ ಹಂಪಿ ವಿ.ವಿ ಯಿಂದ ಡಾಕ್ಟರೇಟ್ ಪಡೆದ ವಡ್ಡರಹಟ್ಟಿಯ ಡಾ. ಅಶೋಕ ಡಂಬರ ಅವರಿಗೆ ಹಾಗೂ “ವಿಶೇಷ ಸಾಮರ್ಥ್ಯವುಳ್ಳವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಾದ್ಯತೆಗಳು” ಎಂಬ ಪ್ರಬಂದ ಮಂಡನೆಗೆ ಹಂಪಿ.ವಿ.ವಿ ಯಿಂದ ಡಾಕ್ಟರೇಟ್ ಪಡೆದ ಕುಷ್ಟಗಿಯ ಡಾ. ವಿಜಯಕುಮಾರ ಬಡಿಗೇರ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಎಸ್.ವಿ ಪಾಟೀಲ್ ಗುಂಡೂರು, ನಾಗಭೂಷಣ ಅರಳಿ, ರಾಘವೇಂದ್ರ ದಂಡಿನ್, ಕರ್ನಾಟಕ ರಾಜ್ಯ ಮಾದ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ, ತಾ.ಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಸುರೇಶ, ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಅವರು ಭಾಗವಹಿಸಿದ್ದರು.
ಈ ಕವಿಗೋಷ್ಠಿಯಲ್ಲಿ ಕವಿಗೋಷ್ಠಿಯಲ್ಲಿ ಯು.ಆರ್. ಶಿವರುದ್ರಪ್ಪ, ಚಿದಾನಂದ ಕೀರ್ತಿ, ಶಿವಪ್ರಸಾದ ಹಾದಿಮನಿ, ಮಾದೇವ ಮೋಟಿ, ಶರಣು, ಕರಿಸಿದ್ದನಗೌಡರು, ತಾರಾ ಸಂತೋಷ, ಶೋಭಾ ಗೌಡರ್ ಸೇರಿದಂತೆ ೩೫ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು.

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.