MLA MR Manjunath inaugurated the sewage treatment plant in Bandalli village.

ವರದಿ: ಬಂಗಾರಪ್ಪ .ಸಿ .
ಹನೂರು :ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಯಲ್ಲು ಇಂತಹ ಘನ ತ್ಯಾಜ್ಯ ವಿಲೆವಾರಿ ಕೆಲಸ ಮಾಡುವ ಒಂದೊಂದು ಘಟಕಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕರಾದ ಎಂದು ತಿಳಿಸಿದರು. ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿನ ವ್ಯಾಪ್ತಿಯಲ್ಲಿನ ನಾಗನಕಟ್ಟೆ ಗ್ರಾಮದಲ್ಲಿ ಮಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುಮಾರು 89,ಲಕ್ಷ ರೂ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ನಂತರ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್ ರವರು ಗುತ್ತಿಗೆದಾರರು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ ಅಲ್ಲದೆ ಗ್ರಾಮ ಪಂಚಾಯತಿಯವರು ಎಲ್ಲಾ ರೀತಿಯಲ್ಲಿ ಸ್ವಚ್ಚತೆ ಸೇರಿದಂತೆ ಇನ್ನಿತರರ ಕಾಮಗಾರಿಗಳ ವೀಕ್ಷಣೆ ಮಾಡಿ ಇದರ ಸದುಪಯೋಗ ಪಡಿಸಿಕೊಳ್ಳಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ಜೆ.ಜೆ.ಎಂ ಎಇಇ ಸುಧನ್ವಾ ನಾಗ್ ,ತಹಶೀಲ್ದಾರ್ ವೈ ಕೆ ಗುರುಪ್ರಸಾದ್,ಕಾರ್ಯಪಾಲಕ ಅಭಿಯಂತರಾದ ಪೂರ್ಣಿಮಾ, ಪಿಡಿಓ ವಿಶ್ವನಾಥ್ ,ವಿ.ಎ ಶೇಷಣ್ಣ,ಹಾಗೂ ಮುಖಂಡರುಗಳಾದ ಜೇಸಿಮ್ ಪಾಷ,ಸೈಯದ್ ಬಸರಾತ್,ಸೈಯದ್ ರಫೀಕ, ಅತಿಕ್,ರಾಹೀಲ್,ವಿಜಯ್ ಕುಮಾರ್,ಶ್ರೀರಂಗಂ,ಎಸ್ ಆರ್ ಮಹದೇವ್,ವೆಂಕಟೇಶ್,ಹಾಗೂ ಇನ್ನಿತರರು ಉಪಸ್ಥಿತರಿದ್ದರು..