Journalists pay tribute to State President G.M. Rajashekar.

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಜಿ.ಎಂ. ರಾಜಶೇಖರವರು ಇಂದು ತುಮಕೂರು ಹಾಗೂ ಹಾಸನ ಜಿಲ್ಲೆಯ ಅರಸಿಕೆರೆ ಪ್ರವಾಸದ ಸಂದರ್ಭದಲ್ಲಿ ಕಡೂರು ತಾಲೂಕು ಪತ್ರಕರ್ತರ ಸಂಘದವರು ಸ್ವಾಗತಿಸಿ ಗೌರವಿಸಿದರು.
ಹಾಸನ ಹಾಗೂ ತುಮಕೂರು ಜಿಲ್ಲೆಯ ಪತ್ರಕರ್ತರನ್ನು ಭೇಟಿ ನೀಡುವ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರಿನಿಂದ ಪ್ರವಾಸ ಕೈಗೊಳ್ಳಲಾಗಿತ್ತು. ಮಾರ್ಗದ ಮಧ್ಯದಲ್ಲಿ ಕಡೂರು ತಾಲೂಕಿನ ಪತ್ರಕರ್ತರು ಸ್ವಾಗತಿಸಿ ಗೌರವಿಸಲಾಯಿತು. ನಂತರ ಕರ್ನಾಟಕ ಮಾಧ್ಯಮ ಪತ್ರಕರ್ತ ಸಂಘದ ಸೌಲಭ್ಯ ಹಾಗೂ ಸಂಘದ ಕಾರ್ಯ ಚಟುವಟಿಕೆ ಕುರಿತಂತೆ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡರು, ಸಂಘದ ಸದಸ್ಯತ್ವ ಅಭಿಯಾನವನ್ನು ನಡೆಸಲಾಯಿತು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಗದೀಶ್, ವಿಜಯ ಕರ್ನಾಟಕ ವರದಿಗಾರರು. ಎ.ಜೆ. ಪ್ರಕಾಶಮೂರ್ತಿ, ಉದಯವಾಣಿ ವರದಿಗಾರರು, ಕೃಷ್ಣಮೂರ್ತಿ, ಕನ್ನಡಪ್ರಭ ವರದಿಗಾರರು. ಬಿ .ಆರ್. ಕುಮಾರ್ ಉದಯ ಕರ್ನಾಟಕ ವರದಿಗಾರರು. ಅನಿಲ್ ಆನಂದ್ ಭೂಮಿಕ ಟಿವಿ ಮಾಲೀಕರು ಹಾಗೂ ಚಿಕ್ಕಮಗಳೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು. ಪುರುಷೋತ್ತಮ್ ಹಲ್ಮಿಡಿ ಪತ್ರಿಕೆ ಸಂಪಾದಕರು. ಹಾಗೂ ಪತ್ರಕರ್ತರಾದ ಶಿವು. ರಘು. ದೇವು ಮತ್ತು ರೇಣುಕಾ ಸ್ವಾಮಿ ಉಪಸ್ಥಿತರಿದ್ದರು.
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ,) ಬೆಂಗಳೂರು*
94483 64949*