Dr. Devendrappa Balutakhi honored by Panchamasali Youth Unit

ಕುಷ್ಟಗಿ : ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ರಾಯಚೂರು ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರಿಗೆ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯ ಹಾಗೂ ಜಿಲ್ಲಾ ಯುವ ಘಟಕದಿಂದ ಸೋಮವಾರ ಸನ್ಮಾನಿಸಲಾಯಿತು.
ಡಾ.ದೇವೇಂದ್ರಪ್ಪ ಬಳೂಟಗಿ ಅವರ ನಿವಾಸಕ್ಕೆ ಕೊಪ್ಪಳ ಜಿಲ್ಲಾ ಪಂಚಮಸಾಲಿ ಯುವ ಘಟಕದ ಸದಸ್ಯರೊಂದಿಗೆ ಭೇಟಿ ನೀಡಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಖರಪ್ಪ ಮುತ್ತೇನವರ್ ಡಾ.ದೇವೇಂದ್ರಪ್ಪ ಬಳೂಟಗಿ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಕೃಷಿ ಕ್ಷೇತ್ರದಲ್ಲಿ ಮುಂದುವರೆಯಲು ಯುವ ಸಮುದಾಯಕ್ಕೆ ತಮ್ಮ ಸಲಹೆ ಸೂಚನೆಗಳು ಅಗತ್ಯವಿದೆ. ತಮ್ಮ ಮಾರ್ಗದರ್ಶನ ಬೇಕು ಎಂದು ಅಭಿನಂದನೆ ಸಲ್ಲಿಸಿದರು.
ಬಳಿಕ ಡಾ.ದೇವೇಂದ್ರಪ್ಪ ಬಳೂಟಗಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಶಂಕ್ರಮ್ಮ ಬಳೂಟಗಿ ಅವರಿಗೆ ಶಾಲು ಹೊದಿಸಿ, ಫಲ ಪುಷ್ಪ ಕೊಟ್ಟು ಗೌರವಿಸಿದರು.
ಈ ಸಂದರ್ಭದಲ್ಲಿ ಸತೀಶ ಬ್ಯಾಳಿ, ಶಶಿಧರ ಶೇಷಗಿರಿ, ಪ್ರಭು ಜಾಗಿರದಾರ, ಆನಂದ ತಳುವಗೇರಾ, ನಾಗರಾಜ ಪಾಟೀಲ್, ವಿಶ್ವನಾಥ ನಾಯಕವಾಡಿ, ವಿರೇಶ ಸಣ್ಣಾಪುರು, ಸೋಮು ಪುರದ, ರವಿ ಮದ್ನಾಳ, ನಿಂಗಪ್ಪ ಜಿಗೇರಿ, ಸಂಗಮೇಶ ಮೇಟಿ ಸೇರಿದಂತೆ ಇತರರು ಇದ್ದರು.
Kalyanasiri Kannada News Live 24×7 | News Karnataka
