Breaking News

ನಾಳೆ (ಹುಬ್ಬಳ್ಳಿಯಲ್ಲಿ ಸಾಮೂಹಿಕ ಲಿಂಗಾಯತ ಧರ್ಮ ದೀಕ್ಷೆ ಕಾರ್ಯಕ್ರಮ

Tomorrow (Mass Lingayat religious initiation program in Hubli)

ಜಾಹೀರಾತು

ಸಾಂದರ್ಭಿಕ ಚಿತ್ರ.

ಹುಬ್ಬಳ್ಳಿ: ಶರಣ ಸಾಹಿತಿಗಳಾದ ಶರಣ ಸಚ್ಚಿದಾನಂದ ಚಟ್ನಳ್ಳಿಯವರು ತಮ್ಮ ಮಗ ಸರ್ವಜ್ಞ ಲಿಂಗಾಯತ ಇವರಿಗೆ 8ನೇ ವಯಸ್ಸಿಗೆ ಕೊಡುವ ಧರ್ಮ ಸಂಸ್ಕಾರವಾದ ಇಷ್ಟಲಿಂಗದೀಕ್ಷೆ ಕಾರ್ಯಕ್ರಮ ತಮ್ಮ ಹುಬ್ಬಳ್ಳಿಯ ನಿವಾಸದಲ್ಲಿ ಆಯೋಜಿಸಿದ್ದಾರೆ. ಈ ನಿಮಿತ್ತವಾಗಿ ಸಾಮೂಹಿಕ ಉಚಿತ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.

ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿಯರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗುವುದು. ಮನುಗುಂಡಿಯ ಪೂಜ್ಯ ಶ್ರೀ ಬಸವಾನಂದ ಸ್ವಾಮೀಜಿ, ಚಿಕ್ಕಮಗಳೂರಿನ ಪೂಜ್ಯ ಶ್ರೀ ಜಯಬಸವಾನಂದ ಸ್ವಾಮೀಜಿ, ಉಡುಪಿಯ ಅಲ್ಲಮ ಪ್ರಭು ಅನುಭಾವ ಪೀಠದ ಪೀಠಾಧಿಪತಿಗಳಾದ ಶರಣ ಜಗನ್ನಾಥ ಪನಸಾಲೆಯವರು, ಮಂಡ್ಯದ ಪೂಜ್ಯ ಶ್ರೀ ಓಂಕಾರೇಶ್ವರ ಸ್ವಾಮೀಜಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ನರಜನ್ಮಕ್ಕೊಮ್ಮೆ ಬಂದ ಬಳಿಕ,
ಗುರುವಿನ ಕುರುಹ ಕಾಣಬೇಕು.
ಗುರುವಿನ ಕುರುಹ ತಾ ಕಂಡ ಬಳಿಕ,
ಶಿಷ್ಯನಾಗಿ ಗುರುಕರಜಾತನಾಗಬೇಕು.
ಗುರುಕರಜಾತನಾದ ಬಳಿಕ, ಗುರುಸ್ವರೂಪಾಗಿ,
ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವನ ಪಾದಪದ್ಮದಲ್ಲಿ ಐಕ್ಯವ ಗಳಿಸಬೇಕು, ಘಟ್ಟಿವಾಳಯ್ಯಾ

ಲಿಂಗಾಯತ ಧರ್ಮದ ಹೆಬ್ಬಾಗಿಲು ಇಷ್ಟಲಿಂಗ ದೀಕ್ಷಾ ಸಂಸ್ಕಾರ. ಯಾವುದೇ ಜಾತಿ ಮತ ಪಂಥದಲ್ಲಿ ಹುಟ್ಟಿದ ವ್ಯಕ್ತಿ ಲಿಂಗಾಯತನಾಗಲಿಕ್ಕೆ ಇರುವ ಏಕೈಕ ಸಾಧನ ಇಷ್ಟಲಿಂಗ ದೀಕ್ಷೆ. ಇಷ್ಟಲಿಂಗ ದೀಕ್ಷೆಯಲ್ಲಿ ಸ್ವತಃ ವ್ಯಕ್ತಿಯೇ ಗುರುವಿನಿಂದ ಇಷ್ಟಲಿಂಗವನ್ನು ಪಡೆದು ಗುರುವಿನ ಹಸ್ತದಲ್ಲಿ ಹುಟ್ಟನ್ನು ಪಡೆದು, ಪುನರ್ಜನ್ಮ ತಾಳುತ್ತಾನೆ.

ವೈದಿಕರಲ್ಲಿ ದೀಕ್ಷಾ ಸಂಸ್ಕಾರವನ್ನು ಉಪನಯನ ಅಥವಾ ದ್ವಿಜ ಸಂಸ್ಕಾರ ಎನ್ನುತ್ತಾರೆ. ದ್ವಿ-ಎಂದರೆ ಎರಡು, ಜ-ಎಂದರೆ ಜನನ ಎಂದು ಅರ್ಥ. ಎರಡನೇ ಸಲ ಜನ್ಮ ತಾಳುವುದೇ ದ್ವಿಜ.
ಸಿಖ್ ಧರ್ಮದಲ್ಲಿ ಅವರ ಧರ್ಮದ ದೀಕ್ಷೆಗೆ ಪಾಹುಲ್' ಎಂದು ಕರೆದು ಈ ಸಂಸ್ಕಾರಕ್ಕೆ ಒಳಗಾದವನು ಮಾತ್ರ ನಿಜವಾದ ಸಿಖ್ ಎನ್ನುವ ನಂಬಿಕೆ ಅವರದು. ಅದೇ ರೀತಿ ಕ್ರಿಶ್ಚಿಯನ್ ಧರ್ಮದಲ್ಲಿ ದೀಕ್ಷಾ ಸಂಸ್ಕಾರಕ್ಕೆ ``ಬ್ಯಾಪ್ಟಿಸಮ್" (Baptism) ಎಂದು ಕರೆದರೆ ಇಸ್ಲಾಂ ಧರ್ಮಿಯರುಸುನ್ನತಿ” ಎಂದು ಕರೆಯುತ್ತಾರೆ. ಈ ರೀತಿ ಎಲ್ಲಾ ಪ್ರವಾದಿ ಧರ್ಮಗಳಲ್ಲಿಯೂ ಆಯಾ ಧರ್ಮಗಳ ದೀಕ್ಷಾ ಸಂಸ್ಕಾರ ವಿಧಿ ವಿಧಾನಗಳಿವೆ ಅದೇ ರೀತಿ ಲಿಂಗಾಯತ ಧರ್ಮದ ದೀಕ್ಷಾ ಸಂಸ್ಕಾರವೇ ಇಷ್ಟಲಿಂಗ ದೀಕ್ಷೆ ವೈದಿಕ ಧರ್ಮದಲ್ಲಿ 8ನೇ ವಯಸ್ಸಿಗೆ ಗಂಡು ಮಕ್ಕಳಿಗೆ ಉಪನಯನ ಸಂಸ್ಕಾರಕ್ಕೆ ಬಹಳ ಮಹತ್ವ ನೀಡುತ್ತಾರೆ. ಆಹ್ವಾನ ಪತ್ರಿಕೆ ಮುದ್ರಿಸಿ ಬಂಧು ಬಳಗದವರನ್ನೆಲ್ಲಾ ಈ ಕಾರ್ಯಕ್ರಮಕ್ಕೆ ಆಹ್ವಾನಿಸುವರು. ಇದರಿಂದ ಅವರ ಸಹಧರ್ಮೀಯರೂ ಉಪನಯನದ ಮಹತ್ವ ಅರಿತು, ಅವರೂ ಆಚರಿಸುತ್ತಾರೆ. ಅದೇ ರೀತಿ ಶರಣ ಸಚ್ಚಿದಾನಂದ ಚಟ್ನಳ್ಳಿಯವರು ತಮ್ಮ ಮಗನ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಿ

ಕಿತ್ತೂರು ಕರ್ನಾಟಕ ಭಾಗದ ಶರಣ ಬಂಧುಗಳಿಗೆ ನಮ್ಮ ಹುಬ್ಬಳಿಯ ಮನೆ ಹತ್ತಿರವಾಗುವುದರಿಂದ ಶರಣ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಷ್ಟಲಿಂಗ ದೀಕ್ಷೆ ಪಡೆಯದೇ ಇರುವವರು ಇಷ್ಟಲಿಂಗ ದೀಕ್ಷೆ ಪಡೆದು ಲಿಂಗಾಯತ ಧರ್ಮದ ಅನುಯಾಯಿತ್ವವನ್ನು ಹೊಂದಬೇಕಾಗಿ ಮನವಿ. ಇಷ್ಟಲಿಂಗ ದೀಕ್ಷೆ ಪಡೆಯುವವರಿಗೆ ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿ ಮಾಲೆ ಮತ್ತು ಮೂರು ಪುಸ್ತಕಗಳನ್ನು ಉಚಿತವಾಗಿ ಕೊಡಲಾಗುವುದು. ಬಯಸಿ ಬಂದ ಎಲ್ಲಾ ಜಾತಿ ಮತ ಪಂಥದವರಿಗೂ ಇಷ್ಟಲಿಂಗ ದೀಕ್ಷೆ ನೀಡಿ ಲಿಂಗಾಯ ಧರ್ಮದಲ್ಲಿ ಒಳಕೊಳ್ಳಲಾಗುವುದು.
ಇಷ್ಟಲಿಂಗ ದೀಕ್ಷೆಯನ್ನು ಇನ್ನೂ ನೀವು ಪಡೆದುಕೊಂಡಿಲ್ಲವೇ? ನಿಮ್ಮ ಮಕ್ಕಳಿಗೆ ಇನ್ನೂ ದೀಕ್ಷೆ ಮಾಡಿಸಿಲ್ಲವೇ? ಇದಕ್ಕಾಗಿ ತಡವೇಕೆ? ಈಗಲೇ ದೀಕ್ಷೆ ತೆಗೆದುಕೊಳ್ಳುವ ಸಂಕಲ್ಪ ಮಾಡಿ ನಾಳೆಯೇ ಇಷ್ಟಲಿಂಗ ದೀಕ್ಷೆ ಪಡೆದುಕೊಂಡು ಪಾವನರಾಗಿ. ಹೆಚ್ಚಿನ ಮಾಹಿತಿಗಾಗಿ 9964057145 ನ್ನು ಸಂಪರ್ಕಿಸಿ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.