Breaking News

DANSER’S ಕ್ರಿಕೆಟ್ ಪಂದ್ಯಾವಳಿ  ನಟರಾಜ ಕಪ್ -1 ಮೇ 24 25 

DANSER’S Cricket Tournament Nataraja Cup -1 May 24 25

ಜಾಹೀರಾತು

ಗಂಗಾವತಿ :- ಗ೦ಗಾವತಿ ನೃತ್ಯ ಕಲಾವಿದರ ಸ೦ಘ (ರಿ) ಪ್ರಪ್ರಥಮ ಬಾರಿಗೆ ಗಂಗಾವತಿ ನಗರದಲ್ಲಿ ವಿಶ್ವ ನೃತ್ಯ ದಿನಾಚರಣೆಯ ನಿಮಿತ್ಯ, ನೃತ್ಯ ಕಲಾವಿದರಿಗಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ( DCL ) DANSER’S ಕ್ರಿಕೆಟ್ ಲೀಗ್ – 2025

ನಟರಾಜ ಕಪ್ – 1 ಮೇ 23-24-25 2025 ರಂದು ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಈ ವೇಳೆ ಮೋಜಸ್ ಪಾಲ್ ಮಾತನಾಡಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಗಳನ್ನು ಗಂಗಾವತಿಯಲ್ಲಿ ಪ್ರಥಮ ಬಾರಿಗೆ ನೃತ್ಯ ಕಲಾವಿದರಿಗಾಗಿ  ಏರ್ಪಡಿಸಿದ್ದೇವೆ, ಬೇರೆ ಜಿಲ್ಲೆಗಳಿಂದ 12 ತಂಡಗಳು ಈ ಒಂದು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು 

ನಂತರ ದೇವರಾಜ್ ಬಿ ಮಾತನಾಡಿ ದಿನಾಂಕ 23 ರಂದು ಚನ್ನಬಸವ ಸ್ವಾಮಿ ಕಲಾಮಂದಿರದಲ್ಲಿ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ, ಈ ಒಂದು ಕಾರ್ಯಕ್ರಮಕ್ಕೆ ಗಂಗಾವತಿ ಹಾಗೂ ಸುತ್ತಮುತ್ತಲಿನ ಗಣ್ಯ ಮಾನ್ಯರು ಆಗಮಿಸಲಿದ್ದಾರೆ ಕಾರ್ಯಕ್ರಮದಲ್ಲಿ ತಂಡಗಳ ಲೋಗೋ ಬಿಡುಗಡೆ ಅತಿಥಿಗಳಿಗೆ, ಹಿರಿಯ ಕಲಾವಿದರಿಗೆ, ಮತ್ತು ತಂಡದ ನಾಯಕರಿಗೆ  ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಂತರ ಸಂತೋಷ್ ಹರ್ಷವರ್ಧನ  ರಾಘವೇಂದ್ರ ಅವರು ಮಾತನಾಡಿ  ನಟರಾಜ ಕಪ್ 1 ಪಂದ್ಯಗಳನ್ನು ಆಯೋಜಿಸಿದ್ದೇವೆ,ಒಂದು ತಂಡವು ನಾಲ್ಕು ಪಂದ್ಯಗಳು ಆಡಬೇಕು, ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನ ನಗದು ಹಾಗೂ ಟ್ರೋಫಿ ನೀಡಲಾಗುವುದು, ಬಂದಂತ ತಂಡಗಳಿಗೆ  ಮೂರು ದಿನದ ಊಟ ವಸತಿ ವ್ಯವಸ್ಥೆ ಮಾಡಲಾಗಿದೆ ಆದ ಕಾರಣ ಗಂಗಾವತಿ ಹಾಗೂ ಸುತ್ತಮುತ್ತಲಿನ ಕ್ರೀಡಾ ಅಭಿಮಾನಿಗಳು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಶಂಕರ್ ಕುರುಗೋಡು, ರವಿ, ಸುಂದರ್, ಮಂಜುನಾಥ್, ರಾಮಕೃಷ್ಣ, ಸಿದ್ದು, ನಾಗರಾಜು, ಮೌನೇಶ್, ನಿಸಾರ್, ಶಂಕರ್ ಐಲಿ, ಮತ್ತು  ಗಂಗಾವತಿ ನೃತ್ಯ ಕಲಾವಿದರು ಸರ್ವ ಸದಸ್ಯರು ಉಪಸ್ಥಿತರಿದ್ದರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *