Breaking News

ಕಾರ್ಮಿಕ ವಿರೋಧಿ ನಾಲ್ಕುಕಾರ್ಮಿಕಸಂಹಿತೆಗಳನ್ನುರದ್ದುಪಡಿಸಲುಹಾಗೂ ರೈತಕಾರ್ಮಿಕರ ಪ್ರಮುಖ ಬೇಡಿಕೆಗಳ ಇಡೇರಿಕೆಗಾಗಿ ಸಿ.ಐ.ಟಿ.ಯು ಮನವಿ

CITU appeals for repeal of four anti-labor labor codes and fulfillment of key demands of farmers and laborers

ಜಾಹೀರಾತು
Screenshot 2025 05 20 16 36 16 07 E307a3f9df9f380ebaf106e1dc980bb6

ಗಂಗಾವತಿ: ದೇಶದ ಕಾರ್ಮಿಕ ವರ್ಗದ ತೀವ್ರ ವಿರೋಧವನ್ನು ಲೆಕ್ಕಿಸದೇ ೨೦೨೦ರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಹಾಗೂ ೨೦೧೯ ರ ಸಂಸತ್ತಿನ ಅಧಿವೇಶನದಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ ೨೯ ಕಾರ್ಮಿಕ ಕಾನೂನುಗಳ ಬದಲಾಗಿ, ಕೈಗಾರಿಕಾ ಸಂಬAಧಗಳ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಸ್ಥಿಗಳ ಸಂಹಿತೆ ಹಾಗೂ ವೇತನ ಸಂಹಿತೆಗಳನ್ನಾಗಿ ಅಂಗೀಕರಿಸಲಾಗಿದೆ. ಸರಕಾರ ಈ ಸಂಹಿತೆಗಳನ್ನು ಜಾರಿಮಾಡಲು ಮುಂದಾಗುತ್ತಿದೆ. ಕೇಂದ್ರ ಸರಕಾರ ಜಾರಿಮಾಡಲು ಮುಂದಾಗಿರುವ ಈ ನಾಲ್ಕು ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕರ ರಕ್ಷಣಾತ್ಮಕ ಅಂಶಗಳಾದ ಜೀವಿಸುವ ಹಕ್ಕು, ಮೂಲಭೂತ ಹಕ್ಕು, ವೇತನ ಕುರಿತ ವ್ಯಾಖ್ಯಾನ, ಮುಷ್ಕರ/ಹೋರಾಟದ ಹಕ್ಕು, ಸಾಮಾಜಿಕ ಭದ್ರತೆ, ಮಾಲೀಕ-ಕಾರ್ಮಿಕ ಸಂಬAಧ, ವೇತನ ಚೌಕಾಸಿ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳನ್ನು ಮೊಟಕುಗೊಳಿಸಲಿವೆ ಹಾಗೂ ಕಲ್ಯಾಣ ರಾಜ್ಯದ ಪರಿಕಲ್ಪನೆಗಳನ್ನು ದುರ್ಬಲಗೊಳಿಸಲಿವೆ ಎಂದು ಸಿ.ಐ.ಟಿ.ಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಲು ಹಾಗೂ ಕಾರ್ಮಿಕರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಮೇ-೨೦ ಮಂಗಳವಾರ ತಹಶೀಲ್ದಾರರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು. ಐತಿಹಾಸಿಕ ರೈತ ಚಳುವಳಿಯ ಸಂದರ್ಭದಲ್ಲಿ ಭರವಸೆ ನೀಡಿದಂತೆ ರೈತರ ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತ್ರಿಪಡಿಸುವ ಶಾಸನವನ್ನು ರೂಪಿಸಬೇಕೆಂದು ಒತ್ತಾಯಿಸುತ್ತೇವೆ. ಈ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು ಹಾಗೂ ಇತರೆ ರೈತಕಾರ್ಮಿಕರ ಬೇಡಿಕೆಗಳಿಗಾಗಿ ದೇಶದ ಎಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ದೇಶದ ಎಲ್ಲಾ ರೈತ ಸಂಘಟನೆಗಳನ್ನೊಳಗೊAಡ ಸಂಯುಕ್ತ ಕಿಸಾನ ಮೋರ್ಚಾ ೨೦ನೇ ಮೇ ೨೦೨೫ ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದವು. ಆದರೆ ದೇಶದಲ್ಲಿ ನಡೆದ ಭಯೋತ್ಪಾದಕ ದಾಳಿ, ನಂತರ ನಡೆದ ಸಿಂಧೂರ ಆಪ್ರೇಷನ್, ದೇಶದ ಗಡಿ ರಾಜ್ಯಗಳಲ್ಲಿಯ ಆತಂಕಗಳು ಈ ಎಲ್ಲಾ ಪರಸ್ಥಿತಿಯ ಹಿನ್ನಲೆಯಲ್ಲಿ, ದೇಶದ ಮಿಲಿಟರಿ ಭಯೋತ್ಪಾಧನಾ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದಕ್ಕೆ ದೇಶದ ಕಾರ್ಮಿಕ ವರ್ಗ ತನ್ನ ಸಂಪೂರ್ಣ ಬೆಂಬಲ ನೀಡಿ, ಕರೆ ನೀಡಲಾಗಿದ್ದ ಮುಷ್ಕರವನ್ನು ೨೦೨೫ ಜುಲೈ-೦೯ ರಂದು ನಡೆಸಲು ತೀರ್ಮಾನಿಸಲಾಗಿದೆ. ಅಂತAತ್ರ ಸ್ಥಿತಿಯಲ್ಲಿರುವ ಕಾಯಂಯೇತರ ನೌಕರರ ಖಾಯಂಮಾತಿಗೆ ಶಾಸನ ರೂಪಿಸಲು ಸಾಧ್ಯವಾಗಿಲ್ಲ. ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಇಲ್ಲಿವರೆಗೂ ವಾಪಸ್ಸಿ ಪಡೆಯಲು ಸಾಧ್ಯವಾಗಿಲ್ಲ. ೨ ವರ್ಷಗಳ ಅವಧಿಯಲ್ಲಿ ರಾಜ್ಯದ ದುಡಿಯುವ ಜನರ ಬೇಡಿಕೆಗಳನ್ನು ಈಡೇರಿಸಿದ ಸರಕಾರದ ಸಾಧನಾ ಸಮಾವೇಶ ಬುಟಾಟಿಯಾಗಿದೆ ಎನ್ನದೇ ಇರಲಾಗದು. ಈ ಹಿನ್ನೆಲೆಯಲ್ಲಿ ದುಡಿಯುವ ಜನರ ಹಕ್ಕೊತ್ತಾಯಗಳ ಈ ಮನವಿಯನ್ನು ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಒಂದು ವೇಳೆ ಸೂಕ್ತ ಕ್ರಮವಹಿಸದೇ ಇದ್ದಲ್ಲಿ ೨೦೨೫ ಜೂನ್-೦೯ ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಿ.ಐ.ಟಿ.ಯು ತಾಲೂಕ ಕಾರ್ಯದರ್ಶಿಯಾದ ಮಂಜುನಾಥ ಡಗ್ಗಿ ಅವರು ಮಾತನಾಡಿ, ನಮ್ಮ ಈ ಹೋರಾಟದ ಪ್ರಮುಖ ಬೇಡಿಕೆಗಳೆಂದರೆ, ಕೇಂದ್ರ ಸರಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ರಾಜ್ಯದಲ್ಲಿ ಕೆಲಸದ ಅವಧಿಯನ್ನು ದಿನಕ್ಕೆ ೧೨ ಗಂಟೆಗೆ ಹೆಚ್ಚಿಸಿರುವ ಆದೇಶ ಹಿಂಪಡೆಯಬೇಕು. ಕನಿಷ್ಠ ವೇತನ ರೂ ೩೬,೦೦೦ ನಿಗದಿ ಮಾಡಬೇಕು. ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ಕನಿಷ್ಠ ರೂ. ೮೦೦೦ ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣ ಮತ್ತು ನಗದೀಕರಣ ನಿಲ್ಲಿಸಬೇಕು. ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ರೂ. ೬೦೦ಕ್ಕೆ ಹಾಗೂ ಕೆಲಸದ ದಿನಗಳನ್ನು ೨೦೦ಕ್ಕೆ ಹೆಚ್ಚಿಸಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸ್ಕೀಮ್ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು, ವಸತಿ ಜಾರಿಗೊಳಿಸಬೇಕು. ಗುತ್ತಿಗೆ ಮುಂತಾದ ಖಾಯಂಯೇತರರ ಖಾಯಂಗೆ ಶಾಸನ ರೂಪಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು ಮತ್ತು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಅತ್ಯುನ್ನತ ತ್ರೀಪಕ್ಷೀಯ ಸಂಸ್ಥೆಯಾದ ಭಾರತೀಯ ಕಾರ್ಮಿಕ ಸಮ್ಮೇಳನ (ಐಎಲ್‌ಸಿ) ನಡೆಸಬೇಕು. ವಿದ್ಯುತ್ ಶಕ್ತಿ ಮಸೂದೆ ೨೦೨೦ ಹಿಂಪಡೆಯಿರಿ. ಸಮರ್ಪಕ ಉದ್ಯೋಗಖಾತ್ರಿ ಕೆಲಸ ನೀಡಬೇಕು, ರೂ.೬೦೦/- ಕೂಲಿಯನ್ನು ಹೆಚ್ಚಿಸಬೇಕೆನ್ನುವುದೇ ಪ್ರಮುಖ ಬೇಡಿಕೆಗಳಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಣ್ಣ ಬೆಣಕಲ್, ಹುಸೇನಪ್ಪ ಕೆ., ಮರಿನಾಗಪ್ಪ ಡಗ್ಗಿ, ಶ್ರೀನಿವಾಸ ಹೊಸಳ್ಳಿ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.