Introductory work

ಬೆಂಗಳೂರು:. ಚಿಂತಕ,ಲೇಖಕರೂ ಹಾಗೂ ಹಿರಿಯ ಪತ್ರಕರ್ತರಾದ ಶ್ರೀ ಡಾ.ಎಂ.ಎಸ್.ಮಣಿ ಅವರು ಬರೆದ “ಒಳಕೋವೆ” ಕೃತಿಯ ಲೋಕಾರ್ಪಣೆ,ಮಾಜಿ ಪ್ರಧಾನಿ ಹಿಂದುಳಿದವರಿಗೆ ಮೀಸಲಾತಿ (ಮಂಡಲ ವರದಿ) ನೀಡಿದ್ದ ವಿ.ಪಿ.ಸಿಂಗ್ ಪ್ರಶಸ್ತಿ ಪ್ರಧಾನ ಹಾಗೂ ಕೊಪ್ಪಳ ವಿವಿ ಕುಲಪತಿಗಳಾ ಡಾ.

ಪ್ರೋ.ಬಿ.ಕೆ.ರವಿಯವರು ಮಾಧ್ಯಮ ಪ್ರವೇಶ ಮಾಡಿ 50 ವರ್ಷಗಳ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಜರುಗಿತು.ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಚ್.ಎಂ.ರೇವಣ್ಣ, ಮುಖ್ಯಸಚೇತಕ ಅಶೋಕ ಪಟ್ಟಣ್ಣ,ಶಾಸಕರಾದ ಅಲ್ಲಮಪ್ರಭು,ಸಿಎಂ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ.ಪ್ರಭಾಕರ್,ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ನ್ಯಾಯವಾದಿ ಶ್ರೀ ಕಾಂತರಾಜ್,ಕೊಪ್ಪಳ ವಿವಿ ಕುಲಪತಿ ಪ್ರೋ.ಬಿ.ಕೆ.ರವಿ,
ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀ ಎಂ.ಸಿದ್ದರಾಜು,ಲೇಖಕ ಶ್ರೀ ಡಾ.ಎಂ.ಎಸ್ . ಮಣಿ,ಕರ್ನಾಟಕ ಮಾದ್ಯಮ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಆಯೇಷಾ ಖಾನಂ,ಸದಸ್ಯರಾದ ಶ್ರೀ ಕೆ.ನಿಂಗಜ್ಜ ಸೇರಿ ಹಿರಿಯ ಪತ್ರಕರ್ತರು ಹಾಗೂ ಪ್ರಶಸ್ತಿ ಪುರಸ್ಕೃತರಿದ್ದರು.