Such a vile system exists in the land of Kalpataru. Untouchability is alive in the village of Kavanadalu

ತುಮಕೂರು ಜಿಲ್ಲೆ ಮಧುಗಿರಿತಾಲೂಕು ಕಾವಣದಾಲು ಗ್ರಾಮದಲ್ಲಿ ಇರುವ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ದಲಿತ ಯುವಕ ಪೂಜೆ ಮಾಡಿಸಲು ಹೋದಾಗ ಆ ದಲಿತ ಯುವಕನನ್ನು ಅವಮಾನಿಸಿ ತಡೆದು ಜಾತಿನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ದೇವಸ್ಥಾನದ ಒಳಗಡೆ ನೀವು ಬರುವ ಹಾಗಿಲ್ಲ ಎಂದು ಕೆಲ ಸಮುದಾಯದ ಗ್ರಾಮಸ್ಥರು ನೇರವಾಗಿ ಅಸ್ಪೃಶ್ಯತೆ ಆಚರಣೆ ಮಾಡಿ ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ
ಸ್ವತಂತ್ರ ಬಂದು 76 ವರ್ಷಗಳು ಕಳೆದರೂ ಸಹ ಈ ಜಾತಿ ವ್ಯವಸ್ಥೆ ಇನ್ನೂ ಬದಲಾಗದೇ ಇರುವುದು ವಿಪರ್ಯಾಸ.
ಮದುಗಿರಿ ತಾಲೂಕು ಕಾವಣದಾಲು ಗ್ರಾಮದಲ್ಲಿ ನಡೆದ ಅಸ್ಪೃಶ್ಯತೆ ಆಚರಣೆ ಜಾತಿ ನಿಂದನೆ ದೌರ್ಜನ್ಯದ ವಿರುದ್ದ ಸಂಬಂಧಪಟ್ಟ ಪೊಲೀಸ್ ಇಲಾಖೆ ಜಿಲ್ಲಾಡಳಿತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೆ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ ಹಾಗೂ ದ ಸಂ ಸ ಜಿಲ್ಲಾ ಎಲ್ಲಾ ಪದಾಧಿಕಾರಿಗಳು ಖಂಡಿಸಿದ್ದಾರೆ.
ವರದಿ ಮಂಜು ಗುರುಗದಹಳ್ಳಿ