Bhoomi Puja program of the sewage treatment plant

ಜಮಖಂಡಿ: ತೊದಲಬಾಗಿ ಸಾರ್ವಜನಿಕರು ಮಲತ್ಯಾಜ್ಯ ನಿರ್ವಹಣ್ ಘಟಕದ ಸದುಪಯೋಗ ಪಡೆದುಕೊಳ್ಳಬೇಕು, ಇದು ಕಾಮಗಾರಿಯು 6 ತಿಂಗಳ ಒಳಗಾಗಿ ಮುಗಿಯುತ್ತದೆ, ಮಲತ್ಯಾಜ್ಯ ನಿರ್ವಹಣಾ ಘಟಕದಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆಮಾಡಿ ಗೊಬ್ಬರವಾಗಿ ಮಾರ್ಪಡಿಸಿ, ತೋಟಗಾರಿಕೆ ಮತ್ತಿತರ ಚಟುವಟಿಕೆಗಳಿಗೆ ಬಳಸಬಹುದಾಗಿದೆ ಎಂದು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ಜಮಖಂಡಿ ತಾಲೂಕಿನ ಸಾವಳಗಿ ಹೋಬಳಿಯ ತೊದಲಬಾಗಿ ಗ್ರಾಮದಲ್ಲಿ ದ್ರವ ತ್ಯಾಜ್ಯ ಕಪ್ಪು ನೀರು ನಿರ್ವಹಣೆಯಲ್ಲಿ ಮಲತ್ಯಾಜ್ಯ ಸಂಸ್ಕರಣೆ ನಿರ್ವಹಣಾ ಘಟಕ ನಿರ್ಮಾಣದ ಕಾಮಗಾರಿ 98.16 ಲಕ್ಷ ರೂ ವೆಚ್ಚದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಗ್ರಾಮದಲ್ಲಿ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ವೈಯಕ್ತಿಕ ಶೌಚಗುಂಡಿಗಳು ತುಂಬಿದ ನಂತರ ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿದ್ದು, ಈ ಘಟಕ ನಿರ್ಮಾಣದ ನಂತರ ಮಲತ್ಯಾಜ್ಯ ವಿಲೇವಾರಿ ಸಮಸ್ಯೆ ನಿವಾರಣೆಯಾಗು ವುದರ ಜೊತೆಗೆ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಅನುಕೂಲವಾಗಲಿದೆ. ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಲ್ಯಾಂಡ್ ಆರ್ಮಿ ಇಂಜಿನಿಯರ ಕಿರಣ ಅಂಚಿ, ವರ್ಕ ಇನ್ಸ್ಪೆಕ್ಟರ್ ಮಹಾದೇವ ಗಾಣಿಗೇರ, ತೊದಲಬಾಗಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರಮೇಶ್ ಸಾವಳಗಿ, ಗ್ರಾಂ ಪಂ ಅಧ್ಯಕ್ಷ ಶ್ರೀಮತಿ ಸುನಂದಾ ಪ ಹಂಗರಗಿ, ಗ್ರಾಂ ಪಂ ಉಪಾಧ್ಯಕ್ಷ, ನಾರಾಯಣ ಕದಮ, ಗುತ್ತಿಗೆದಾರರ ಸಂಗಮೇಶ ನ್ಯಾಮಗೌಡ, ಗ್ರಾಮ ಪಂಚಾಯತ ಸದಸ್ಯರಾದ ಸಹದೇವ ಕದಮ, ಲಕ್ಷ್ಮಣ್ ಹೆಗೋಂಡ, ವಿಷ್ಣು ಮಾದರ, ಬಸಲಿಂಗ ಮಾದರ, ಉಮೇಶ್ ಸಾಯಗೊಂಡ, ಅಂಗಡೆಪ್ಪ ಅಂಗಡಿ, ಗ್ರಾಮಸ್ಥರಾದ ಸದಾನಂದ ಪಾಟೀಲ ಸಂಗಯ್ಯ ಹಿರೇಮಠ, ಸೇರಿದಂತೆ ರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ ಸಚೀನ ಆರ್ ಜಾಧವ ಜಮಖಂಡಿ