Basava Karunya Award to Sharan Basavanagouda Police Patil.

ಕೊಪ್ಪಳದಲ್ಲಿ 892 ನೇ ಬಸವ ಜಯಂತಿಯ ದಿನದಂದು, ಬಸವೇಶ್ವರ ಚಾರಿಟೇಬಲ್ ಟ್ರಸ್ಟ ಮತ್ತು ಬಸವ ಸಮೀತಿ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ, ಮಾಜಿ ಉಪ ರಾಷ್ಟ್ರಪತಿಗಳಾದ BD ಜತ್ತಿಯವರ ಚಿರಂಜೀವಿ ಶರಣ ಅರವಿಂದ್ ಜತ್ತಿ ರಾಜ್ಯಾಧ್ಯಕ್ಷರು ಬಸವ ಸಮೀತಿ ಬೆಂಗಳೂರು, ಶರಣ ಬಸವರಾಜ ಬೊಳ್ಳೊಳ್ಳಿ ಜಿಲ್ಲಾ ಅಧ್ಯಕ್ಷರು ಬಸವ ಸಮೀತಿ ಕೊಪ್ಪಳ, ಪೂಜ್ಯ ಮಲ್ಲಿಕಾರ್ಜುನ ಸ್ವಾಮೀಗಳು ಅಲ್ಲಮಪ್ರಭು ಪೀಠ ಜನವಾಡ ತಾಲೂಕ ಅಥಣಿ ಮತ್ತು ಸನ್ಮಾನ್ಯ ಸಂಸದರಾದ ರಾಜಶೇಖರ್ ಇಟ್ನಾಳ, ಗವೀಶ್ ಶಶಿಮಠ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಕೊಪ್ಪಳ ಇವರ ಸಮ್ಮುಖದಲ್ಲಿ, ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತಿ ಪಿ ಎಸ್ ಐ ಇವರಿಗೆ, ಇವರು ಮಾಡಿರುವ ಸಾಮಾಜಿಕ ಪರಿವರ್ತನೆಯ ಕಾರ್ಯಕ್ಷೇಮತೆಯ ಮೆಚ್ಚಿ ” ಬಸವ ಕಾರುಣ್ಯ ಪ್ರಶಸ್ತಿ ನೀಡಿದರು.
ಶರಣ ಬಸವನಗೌಡ ಪೋಲಿಸ್ ಪಾಟೀಲ್ ರು ಪಿಎಸ್ಐ ವೃತ್ತಿಯಲ್ಲಿ ಇದ್ದಾಗಲೂ ಕೂಡ, ಸಾಮಾಜಿಕತೆಯಲ್ಲಿ ಬಸವ ಧರ್ಮವನ್ನು ಬಿತ್ತರಿಸಲು ಅತ್ಯಂತ ಪರಿಶ್ರಮ ಪಟ್ಟುರು.
ನಿವೃತ್ತಿ ಹೊಂದಿದ ನಂತರ 78 ವರ್ಷದವರಾಗಿದ್ದರು ಕೂಡ 18 ರ ಹರೆಯದವರಂತೆ ಬಸವಾದಿ ಶಿವಶರಣರ ವಚನ ಸಾಹಿತ್ಯವನ್ನ ಜನ ಮನಗಳಿಗೆ ಬಿತ್ತರಿಸುವಲ್ಲಿ ಶ್ರಮವಹಿಸಿದ್ದಾರೆ.
ತಮ್ಮದೇ ಸ್ವಂತ ಕರ್ಚಿನಲ್ಲಿ ತಮ್ಮ ಕಾರ್ ಗಾಡಿಯನ್ನು ತೆಗೆದುಕೊಂಡು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿಯಂತೆ ದಂಪತಿ ಸಮೇತ ಕೊಪ್ಪಳ ಜಿಲ್ಲೆಯಾದ್ಯಂತ ತಿರುಗಿ ರಾಷ್ಟ್ರೀಯ ಬಸವ ದಳ ಗಳನ್ನ ಸಂಘಟಿಸುವುದರ ಮೂಲಕ ಬಸವ ತತ್ವ ಬೆಳೆಸುವುದರಲ್ಲಿ ಇವರ ಸೇವೆ ಶ್ಲಾಘನೀಯವಾದದ್ದು. ಶರಣ ಬಸವನಗೌಡ ಪೋಲಿಸ್ ಪಾಟೀಲರು
ಯಲಬುರ್ಗಾ ತಾಲೂಕಿನ ಶರಣಗ್ರಾಮ ಗುಳೆ ಗ್ರಾಮದಲ್ಲಿ ಪರಮ ಪೂಜ್ಯ ಡಾ ಗಂಗಾ ಮಾತಾಜಿಯವರ ಲಿಂಗ ಹಸ್ತದಿಂದ ಸುಮಾರು 300 ನೂರು ಜನರಿಗೆ ಲಿಂಗ ದೀಕ್ಷೆ ಕೊಡಿಸಿ, ಸರಿ ಸುಮಾರು ಒಂದು ಕೋಟಿ ಬೆಲೆ ಬಾಳುವ ವಿಶ್ವ ಗುರು ಬಸವ ಮಂಟಪ ನಿರ್ಮಾಣ ಮಾಡಿ, ಗುಳೆ ಗ್ರಾಮದ ಶರಣಬಳಗದವರ ವೃದಯದ ಅಂತರಾತ್ಮದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯಾದ್ಯಂತ ಹಳ್ಳಿಗಳಾದ ವನಜಭಾವಿ, ಮಾಟಲದಿನ್ನಿ, ಲಿಂಗದಹಳ್ಳಿ, ತಾಳಕೇರಿ, ಚವಡಾಪುರ, ಹಟ್ಟಿ ಮುರಡಿ, ಟಣಕನಕಲ್, ಕಾಸನಕಂಡಿ, ಕೊಡದಾಳ, ಮಂಗಳಾಪುರ, ವಣಗೇರಿ, ನಿಡಶೀಸಿ, ಗುನ್ನಾಳ ವನಗಡ್ಡಿ, ಮದ್ಲೂರು ಕೊಪ್ಪಳ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಹೋಗಿ ಯಾವುದೇ ರೀತಿಯ ಆಸೆ ಆಮಿಶ ಇಲ್ಲದೆ ನಿಷ್ಕಲ್ಮಶವಾಗಿ ಯಾರಿಂದಲು ಒಂದು ರುಪಾಯಿಯನ್ನ ಪಡೆಯದೆ ಸ್ವಂತ ಕರ್ಚಿನಿಂದ ರಾಷ್ಟ್ರೀಯ ಬಸವ ದಳ ಗಳಗಳನ್ನ ಸಂಘಟಿಸಿ ಅಲ್ಲಿನ ನೂರಾರು ಜನರಿಗೆ ಲಿಂಗ ದೀಕ್ಷೆ ಕೊಡಿಸಿ, ಗುರು ಬಸವಣ್ಣನವರ ವಚನ ಸಾಹಿತ್ಯದ ತಿರುಳನ್ನ ಜನ ಮನಗಳಿಗೆ ತಿಳಿಸಿ, ಸಮಾಜದಲ್ಲಿರುವ ಅಂಧಕಾರ, ಅಜ್ಞಾನ, ಮೌಢ್ಯತೆಗಳಂತ ಆಚರಣೆಗಳನ್ನ ಪರಿವರ್ತನೆ ಮಾಡುವಲ್ಲಿ ಬಸವನಗೌಡರು ಶ್ರೀ ಗಂಧದ ಕಡ್ಡಿಯಂತೆ ತಮ್ಮ ಜೀವನವನ್ನೇ ಸವೆಸುತಿದ್ದಾರೆ. ಇವರ ಮಾಡುವ ಸಾಮಾಜಿಕ ಕಾರ್ಯಕ್ಕೆ ಬಸವ ಧರ್ಮ ಪೀಠದಿಂದ ನೀಡಲ್ಪಡುವ ಶರಣ ಮೇಳ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಡಾ ಗಂಗಾ ಮಾತಾಜಿಯವರು ಇವರಿಗೆ ಶರಣ ಕಾಯಕ ರತ್ನ ಪ್ರಶಸ್ತಿಯನ್ನು ಕೂಡ ನೀಡಿದ್ದಾರೆ. ಕಾರಣ ಬಸವನಗೌಡರ ಮಾಡಿರುವ ಸಾಮಾಜಿಕ ಸೇವೆಗೆ ಸಿಕ್ಕ ಪ್ರಶಸ್ತಿಗೆ, ಕೊಪ್ಪಳ ಜಿಲ್ಲೆಯ ಎಲ್ಲಾ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು ಬಸವಾಭಿಮಾನಿಗಳು, ಬಸವ ಪರ ಸಂಘಟನೆಗಳು ಅತ್ಯಂತ ಮನಪೂರ್ವಕವಾಗಿ ಸಂತಸ ವ್ಯಕ್ತಪಡಿಸಿ. ಅವರ ಸೇವೆ ಇನ್ನು ನಿರಂತರವಾಗಿ ಸಾಗಲಿ, ಬಸವಾದಿ ಶಿವ ಶರಣರ ಕೃಪಾಶಿರ್ವಾದದಿಂದ ಆಯುಷ್ಯ ಆರೋಗ್ಯ ಸುಖ ಸಂಪತ್ತು ಲಭಿಸಲಿ ಎಂದು ಪ್ರಾರ್ಥಿಸುತಿದ್ದಾರೆ.
👏 ಶರಣಾರ್ಥಿಗಳು
✍️ ಬಸವರಾಜ ಎಸ್ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ