In the caste survey, section 61, enter Madiga: Eshappa Shirur,

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರ : ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಮೇ 5 ರಿಂದ 17ರವರೆಗೆ ರಾಜ್ಯ ಸರ್ಕಾರ ಜಾತಿಗಣತಿ ಕಾರ್ಯಕ್ಕೆ ಮುಂದಾಗಿದ್ದು ಈ ಅವಧಿಯಲ್ಲಿ ಗೊಂದಲಕ್ಕೆ ಅವಕಾಶ ನೀಡದೆ ಮಾದಿಗ ಸಮುದಾಯದವರು ಕಡ್ಡಾಯವಾಗಿ ಜಾತಿ 61 ಕಾಲಂನಲ್ಲಿ ಮಾದಿಗ ಎಂದೇ ನಮೂದಿಸುವಂತೆ ಈಶಪ್ಪ ಶಿರೂರು ಹೇಳಿದರು.
ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಶನಿವಾರದಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಕೆಲವರು ನಾವು ಹೆಚ್ಚು ಸಂಖ್ಯೆಯಲ್ಲಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಮಾದಿಗರ ಸಂಖ್ಯೆ ಹೆಚ್ಚಿದ್ದು, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಹೆಸರಿನಲ್ಲಿ ಗುರುತಿಸಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ.
ಗೊಂದಲ ನಿವಾರಣೆಗೆ ಸಮೀಕ್ಷೆಯ ವೇಳೆ ನಮ್ಮ ಸಮುದಾಯದವರು ಮಾದರ- ಮಾದಿಗ ಎಂದು ಕಲಂ 61ರಲ್ಲಿ ಬರೆಸುವಂತೆ ಮನವಿ ಮಾಡಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ದತ್ತಾಂಶ (ಎಂಪೋರಿಯಲ್ ಡಾಟಾ) ಸಂಗ್ರಹ ಕಾರ್ಯ ನಡೆಯುವ ವೇಳೆ ಮಾದಿಗ ಸಮುದಾಯದವರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದರು.
ನಂತರ ಪರಶುರಾಮ್ ಸಕ್ರಣ್ಣವರ್ ಮಾತನಾಡಿ ಜಾತಿಗಣತಿ ಕಾರ್ಯಕ್ಕೆ ನೌಕರರು ಬಂದಾಗ ಪ್ರತಿಯೊಬ್ಬ ಮಾದಿಗ ಸಮುದಾಯದ ಪ್ರಜ್ಞಾವಂತ ಯುವಕರು ನೌಕರರಿಗೆ ಮಾದರ, ಮಾದಿಗ ಎರಡು ಒಂದೇ ಆಗಿದ್ದು ಐಡಿ ಕಲಂನಲ್ಲಿ 61ರಲ್ಲಿ ನಮೂದಿಸುವಂತೆ ಸಮುದಾಯವರ ಮನೆ,ಮನೆಗೆ ತೆರಳಿ ತಿಳಿಸಬೇಕು ಎಂದರು.
05.05.2025ರ ಜನಗಣತಿಯಲ್ಲಿನ ಜಾತಿಗಣತಿಯ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ಇಟಗಿಯ ಗದಿಗೆಪ್ಪಜ್ಜನವರು ಮಾತನಾಡಿ ಮಾದಿಗ ಸಮುದಾಯದವರು ಬೇರೆ ಕಡೆ ದುಡಿಯಲು ಹೋಗಿರುವವರ ಮಾಹಿತಿ ನೀಡಬೇಕು. ಗಣತಿದಾರರು ಮನೆಗೆ ಬಂದಾಗ ಪೆನ್ಸಿಲ್ ನಿಂದ ಬರೆಯದಂತೆ ನೋಡಿಕೊಂಡು ಪೆನ್ನಿನಿಂದ ಬರೆಯಿಸಿಬೇಕು ಸರ್ವೆಗೆ ಬಂದಾಗ ಸರಿಯಾದ ರೀತಿ ಸ್ಪಂದಿಸಬೇಕು ನಮಗೆ ಒಳ ಮೀಸಲಾತಿ ವರ್ಗೀಕರಣ ಆಗುವುದು ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ನಡುವಲಮನಿ, ಹನುಮಂತಪ್ಪ, ಗಾಳೆಪ್ಪ ವೀರಾಪೂರ, ವೀರುಪಾಕ್ಷಪ್ಪ ದೊಡ್ಮನಿ, ಭೀಮಣ್ಣ ಬೂದಗುಂಪಿ, ಪ್ರಕಾಶ ಉಜ್ಜಮ್ಮನವರ್, ಬಲವಂತ ಕಲ್ಲೂರ, ಜಂಬಣ್ಣ ನಡುವಲಮನಿ ಸೇರಿದಂತೆ ಇನ್ನಿತರರು ಇದ್ದರು.