An influential businessman who tried to seize land due to a debt owed by his father.

ಗಂಗಾವತಿ ,ಏ.22:
ತಂದೆ ಬಡತನದ ಹಿನ್ನೆಲೆಯಲ್ಲಿ ಬಹಳ ವರ್ಷಗಳ ಹಿಂದೆ 20 ಸಾವಿರ ರೂಪಾಯಿ ಸಾಲ ಮಾಡಿದ್ದ. ಈ ಸಾಲಕ್ಕೆ ಅಸಲು ಹಾಗು ಬಡ್ಡಿ ನೀಡಲಾಗಿದೆ. ಆದರೂ ಈ ಸಾಲಕ್ಕೆ ನಿಮ್ಮ ತಂದೆ ಹೊಲ ಬರೆದುಕೊಟ್ಟಿದ್ದಾರೆ ಎಂದು ಆರೋಪಿಸಿ ಭೂಮಿಯಲ್ಲಿದ್ದ ಭತ್ತ ಕಟಾವು ಮಾಡಲು ಹೋದವರ ಮೇಲೆ ಹಲ್ಲೆ ಮಾಡಿದ ಘಟನೆ ಗಂಗಾವತಿ ತಾಲೂಕಿನ ಆಚಾರ ನರಸಾಪುರದಲ್ಲಿ ನಡೆದಿದೆ.
ಜಮೀನು ವಿಷಯಕ್ಕೆ ಗುಂಪು ಕಟ್ಟಿಕೊಂಡು ಗಂಗಾವತಿ ತಾಲೂಕಿನ ಆಚಾರ ನರಸಾಪುರದಲ್ಲಿ ಯಲ್ಲಪ್ಪ ಎಂಬ ರೈತನಿಗೆ ವಿಷ ಕುಡಿಸಲು ಯತ್ನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಮೂರು ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದವರು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಡ್ಡರಹಟ್ಟಿಯ ఎం ಹನುಮಂತಪ್ಪ ಎಂಬುವವರ ಕುಟುಂಬದವರಿಂದ ಹಲ್ಲೆ ಮಾಡಲಾಗಿದೆ. ಹನುಮಂತಪ್ಪ ಎಂಬುವವರು ಹಲ್ಲೆಗೊಳಗಾದ ಈರಪ್ಪ ಎಂಬುವವರಿಗೆ 20 ಸಾವಿರ ರೂಪಾಯಿ ಸಾಲ ನೀಡಿದ್ದರಂತೆ. ಈ ಸಾಲಕ್ಕೆ ಭೂಮಿ ಮಾರಾಟ ಮಾಡಿದ್ದಾರೆ. ಈ ಭೂಮಿ ನಮ್ಮದೆಂದು ಹಲ್ಲೆ ಮಾಡಿದ್ದಾರೆ.
ಈ ಕುರಿತು ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಲಯ ನಮ್ಮ ಪರವಾಗಿ ತೀರ್ಪು ನೀಡಿದೆ. ಭೂಮಿ ಬಿಟ್ಟು ಕೊಡಿ ಎಂದು ಕೇಳಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊದಲು 8 ಜನರು ಬಂದು ಹಲ್ಲೆ ಮಾಡಿದ್ದು ಇದೇ ವೇಳೆ ಸುಮಾರು 60 ಜನರ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.