Breaking News

ವಿದ್ಯಾರಣ್ಯ ವಿಚಾರ ವೇದಿಕೆಗೆ ಚಾಲನೆ

Launch of the Vidyaranya Vichar Forum

ಜಾಹೀರಾತು


ಗಂಗಾವತಿ -ನಗರದ ಶ್ರೀರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವಿದ್ಯಾರಣ್ಯ ವಿಚಾರ ವೇದಿಕೆಯನ್ನು ಹಾಸ್ಯ ಸಾಹಿತಿ ಬಿ.ಪ್ರಾಣೇಶ್ ರವರು ಉದ್ಘಾಟಿಸಿದರು.

ವೈಚಾರಿಕತೆ ಆಧ್ಯಾತ್ಮಿಕತೆ ಮತ್ತು ಪ್ರಚಲಿತ ವಿಷಯಗಳ ಮೇಲೆ ಚರ್ಚೆ ಮತ್ತು ಸಂವಾದಗಳು ನಿಯಮಿತವಾಗಿ ನಡೆಯಲು ಈ ವೇದಿಕೆ ಉಪಯೋಗವಾಗಲೆಂದು ಅವರು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ ಲಿಂಗಾರೆಡ್ಡಿ ಆಲೂರವರು ಮಾತನಾಡುತ್ತಾ ಯಾವುದೇ ಪಕ್ಷ ಭೇದವಿಲ್ಲದೆ ಒಳ್ಳೆಯ ವಿಚಾರಗಳನ್ನು ಚರ್ಚಿಸಲು ಈ ವೇದಿಕೆ ಅನುಭವ ಮಂಟಪದಂತೆ ಕಾರ್ಯನಿರ್ವಹಿಸಲಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮತ್ತೊಬ್ಬ ಅತಿಥಿ ಇತಿಹಾಸ ಪ್ರೇಮಿ ಹೊಸಕೇರಿ ಮಲ್ಲಿಕಾರ್ಜುನ್ ರವರು ವಿಜಯನಗರ ಸಾಮ್ರಾಜ್ಯದ ಇತಿಹಾಸದ ಕುರಿತು ಮಾತನಾಡಿದರು. ವೇದಿಕೆ ಸಂಚಾಲಕರಾದ ಶ್ರವಣಕುಮಾರ್ ರಾಯ್ಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವೇದಿಕೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞರಾದ ಪ್ರಾಂಶುಪಾಲರಾದ ಕೋಲ್ಕಾರ್ ವೈದ್ಯರಾದ ಡಾಕ್ಟರ್ ಬಸವರಾಜ್ ಅಯೋಧ್ಯ ಪ್ರಗತಿಪರ ರೈತರಾದಂತ ಜೆ ನಾಗರಾಜ್ ಸದ್ಭಾವನಾ ಸಂಸ್ಥೆಯ ಸುಬ್ರಮಣ್ಯ ರಾಯ್ಕರ್ ಮಡಿವಾಳ ಸಮಾಜದ ಮುಖಂಡರಾದ ಚಿದಾನಂದಪ್ಪ ಮಾಸ್ಟರ್ ಮುಂತಾದವರು ಭಾಗವಹಿಸಿದ್ದರು. ಜಿ ಗಿರಿಧರ್ ವಂದನಾರ್ಪಣೆ ನಡೆಸಿಕೊಟ್ಟರು.*

About Mallikarjun

Check Also

ಸಿಎಂ ಸಿದ್ಧರಾಮಯ್ಯಗೆ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲುಜಿ.ಎಂ.ರಾಜಶೇಖರ್ ಒತ್ತಾಯ.

G.M. Rajashekhar urges CM Siddaramaiah to provide facilities to real journalists in rural areas. ಬೇಂಗಳೂರು: …

Leave a Reply

Your email address will not be published. Required fields are marked *