Breaking News

ಕೆಇಎ ನೀಡುವ ಪ್ರತಿಷ್ಠಿತ ಛಾಯಾ ಸಾದಕ ಪ್ರಶಸ್ತಿಯನ್ನು ಸ್ವೀಕರಿಸಿದ ಪತ್ರಕರ್ತರಾದ ಕಾಂಚಳ್ಳಿ ಬಸವರಾಜು

Journalist Kanchalli Basavaraju received the prestigious KEA Photojournalist Award.

ಜಾಹೀರಾತು


ವರದಿ : ಬಂಗಾರಪ್ಪ .ಸಿ
ಬೆಂಗಳೂರು :ಪ್ರತಿವರ್ಷವು ರಾಜ್ಯಮಟ್ಟದ
ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘವು ಕೊಡ ಮಾಡುವ ಅತ್ಯುತ್ತಮ ಪ್ರಶಸ್ತಿಯನ್ನು ಛಾಯ ಗ್ರಾಹಕರಿಗೆ ನೀಡುತ್ತ ಬಂದಿದೆ ಈ ವರ್ಷದ ಪ್ರಶಸ್ತಿಯನ್ನು ಪತ್ರಕರ್ತರಾದ ಶ್ರೀ ಯುತ ಕಾಂಚಳ್ಳಿ ಬಸವರಾಜು ರವರಿಗೆ ನೀಡಿರುವುದು ನಮ್ಮ ಹೆಮ್ಮೆಯ ವಿಷಯ ಎಂದು ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ .ಸಿ ತಿಳಿಸಿದರು.

ನಂತರ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಎರಡು ಸಾವಿರದ ಇಪ್ಪತೈದನ ಇಸವಿಯಲ್ಲಿ ನೀಡುಲಾಗುತ್ತದೆ ಅದಕ್ಕೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾಂಚಳ್ಳಿ ಗ್ರಾಮದ ಪತ್ರಕರ್ತರಾದ ಶ್ರೀ ಯುತ ಕಾಂಚಳ್ಳಿ ಬಸವರಾಜು ಭಾಜನರಾಗಿದ್ದಾರೆ, ಇವರು ಚಾಮರಾಜನಗರ ಜಿಲ್ಲೆಯ ಛಾಯಗ್ರಹಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದಲೂ ವೃತ್ತಿಪರರಾಗಿ ಕಾರ್ಯನಿರ್ವಹಿಸುತ್ತಿದ್ದು ,ಛಾಯಗ್ರಹಣದಲ್ಲಿ ಮಾಡಿರುವ ಸಾಧನೆ ಸೇವೆಯನ್ನು ರಿಗಣಿಸಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘವು ಡಿ ಜಿ ಇಮೇಜ್ ೨೦೨೫ರ ವಸ್ತುಪ್ರದರ್ಶನದಲ್ಲಿ ಸಮಸ್ತ ಛಾಯಾಗ್ರಾಹಕರ ಪರವಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಪ್ರಶಸ್ತಿ ಪತ್ರವು ಇದಾಗಿದೆ. ಇವರು ಪ್ರಸ್ತುತ ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಕಾರ್ಯದರ್ಶಿಗಳಾಗಿ , ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲ್ಲೂಕು ಸಂಘಟನ ಕಾರ್ಯದರ್ಶಿಯಾಗಿ ,ಯುವ ಮುಖಂಡರಾಗಿ ಹಲವಾರು ಸಂಸ್ಥೆಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಹಾಗೂ ಕೆಲವು ಸಂಸ್ಥೆಗಳಲ್ಲಿ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರಿಗೆ ನಮ್ಮ ಸಂಘದ ಪರವಾಗಿ ಶುಭವಾಗಲಿ ಎಂದರು

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಡಿಜಿ ಇಮೇಜ್ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಛಾಯಶ್ರೀ ,ಛಾಯ ಸಾದಕ ಪ್ರಶಸ್ತಿಯನ್ನು ಹಲವಾರು ಸಾಧಕರಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಿದ ಸಂದರ್ಭದಲ್ಲಿ ಮಾತನಾಡಿದ ಶ್ರೀ ಯುತ ಪತ್ರಕರ್ತರಾದ ಬಸವರಾಜು ಚಾಮರಾಜನಗರ ಜಿಲ್ಲೆಯ ಛಾಯ ಚಿತ್ರ ಗ್ರಾಹಕರ ಸಂಘ . ಈ ಅಬೂತಪೂರ್ವ ಗೌರವ ಸಮರ್ಪಣೆಗೆ ನನ್ನನ್ನು ಸರ್ವಾಮ ಮತದಿಂದ ಆಯ್ಕೆ ಮಾಡಿ ರಾಜ್ಯ ಸಂಘಕ್ಕೆ ಕಳುಹಿಸಿದ ನನ್ನಚಾಮರಾಜನಗರ ಜಿಲ್ಲಾ ಹಾಗೂ ತಾಲೂಕು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ ಸಂಘ* ಹಾಗೂ ಈ ಆಯ್ಕೆಗೆ ಸಹಮತ ಸೂಚಿಸಿದ ” ಚಾಮರಾಜನಗ ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘ ಹಾಗೂ ನನ್ನೆಲ್ಲಾ ಛಾಯಾಗ್ರಾಹಕ ಮಿತ್ರರಿಗೆ ಹಾಗೂ ನನಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದ ನನ್ನೆಲ್ಲಾ ಆತ್ಮೀಯ ಮಿತ್ರರಿಗೆ ಕೃತಜ್ಞತಾ ಪೂರ್ವಕ ಅನಂತ ಅನಂತ ಧನ್ಯವಾದಗಳು ಎಂದು ತಿಳಿಸಿದರು.
ಸನ್ಮಾನಕ್ಕೆ ಭಾಜನರಾದ ಪತ್ರಕರ್ತರಾದ ಕಾಂಚಳ್ಳಿ ಬಸವರಾಜುರವರಿಗೆ ,ಕರ್ನಾಟಕ ಪತ್ರಕರ್ತರ.,ಸಂಘದ ಪಧಾದಿಕಾರಿಗಳು ,ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಧಿಯಾಗಿ ಎಲ್ಲಾ ಸದಸ್ಯರುಗಳು , ಹಾಗೂ ಹನೂರು ಫೋಟೋಗ್ರಾಫರ್ ಸಂಘಟನೆ ಗಳ ಸಮಿತಿಯ ಅಧ್ಯಕ್ಷರಾದಿಯಾಗಿ ಎಲ್ಲಾರು ಶುಭ ಕೋರಿದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.