MLA M.R. Manjunath performs Bhoomi Pooja for CC road and internal drainage works at several places

ವರದಿ ; ಬಂಗಾರಪ್ಪ ಸಿ .
ಹನೂರು : ಸರ್ಕಾರದಿಂದ ಬಿಡುಗಡೆಯಾಗಿರುವ
ಅಲ್ಪಸಂಖ್ಯಾತರ ಅನುದಾನದಲ್ಲಿ ಸಿ.ಸಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ಶಾಸಕ ಎಂಆರ್ ಮಂಜುನಾಥ್ ಅವರು ಭೂಮಿ ಪೂಜೆ ನೆರವೇರಿಸಿರು.
ನಂತರ ಅಲ್ಪಸಂಖ್ಯಾತರ ಮಾತನಾಡಿದ ಶಾಸಕರು ಅನುದಾನದ ಅಡಿಯಲ್ಲಿ ಸುಮಾರು 3 ಕೋಟಿ ಅನುದಾನ ಕ್ಷೇತ್ರಕ್ಕೆ ಬಿಡುಗಡೆಯಾಗಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಆರ್ ಎಸ್ ದೊಡ್ಡಿಯ 13 ನೇ ವಾರ್ಡ್ ನಲ್ಲಿ ಸುಮಾರು 60 ಲಕ್ಷ ಅನುದಾನ ಹಾಕಿದ್ದು, ಉಳಿದ ಅನುದಾನವನ್ನು ಇನ್ನುಳಿದ ಗ್ರಾಮಗಳಿಗೆ ಹಂಚಿದ್ದೇವೆ. ಅಲ್ಲಿಯು ಭೂಮಿ ಪೂಜೆ ನೆರವೇರಿಸಲಾಗುತ್ತದೆ.
ತೊಮಿಯಾರ್ ಪಾಳ್ಯ, ಪ್ರಕಾಶ್ ಪಾಳ್ಯ ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ತೆರಳಿ ಭೂಮಿ ಪೂಜೆ ಮಾಡಲಾಗುತ್ತದೆ. ಆದಷ್ಟು ಬೇಗ ಕಾಮಗಾರಿಯನ್ನ ಪೂರೈಸಬೇಕು. ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸ್ಥಳದಲ್ಲೆ ಅಧಿಕಾರಿಗಳು, ಗುತ್ತಿಗೆದಾರರಿಗೆ ತಿಳಿಸಿ ನಂತರ ಆದಷ್ಟು ಬೇಗ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ. ಪಂ ಮುಖ್ಯಧಿಕಾರಿ ಮಹೇಶ್ ಕುಮಾರ್, ಪ ಪಂ ಅಧ್ಯಕ್ಷರು ಮಮತಾಜ್ ಬಾನು,ಉಪಾಧ್ಯಕ್ಷ ಆನಂದ್ ಕುಮಾರ್, ಸದಸ್ಯರಾದ ಮಹೇಶ್,ಕೆ ಆರ್ ಐ ಡಿ ಎಲ್ ಅಧಿಕಾರಿ ಚಿಕ್ಕಲಿಂಗಯ್ಯ, ಸೇರಿದಂತೆ ಇನ್ನಿತರರು ಹಾಜರಿದ್ದರು.