Detailed information from AIIMS activists to Union Minister Prahlad Joshi.

ನವ ದೆಹಲಿ:
ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ನಿಯೋಗ ಇಂದು ದಿ,30-3-2025ರಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ* ಯವರನ್ನು ನವ ದೆಹಲಿಯಲ್ಲಿ ಭೇಟಿ ಮಾಡಿ ,ಏಮ್ಸ್ ಸಂಸ್ಥೆಗಾಗಿ ನಡೆಯುತ್ತಿರುವ ಸುದೀರ್ಘ ಹೋರಾಟದ ಬಗ್ಗೆ ವಿವರಿಸಿ , ಹಿಂದುಳಿದ, ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಸಂಸದರು ರಾಜ್ಯಸಭಾ ಸದಸ್ಯರನೊಳಗೊಂಡ ನಿಯೋಗದ ನೇತೃತ್ವವನ್ನು ವಹಿಸಿ ಪ್ರಧಾನ ಮಂತ್ರಿ ಯವರನ್ನು ಭೇಟಿ ಮಾಡಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಬೇಕೆಂದು ಕೇಳಿಕೊಳ್ಳಲಾಯಿತು.

ನಮ್ಮ ನಿಯೋಗದ ಮನವಿ ಪತ್ರವನ್ನು ಸ್ವೀಕರಿಸಿದ ಪ್ರಹ್ಲಾದ್ ಜೋಶಿ ಯವರು ಮಾತನಾಡುತ್ತ “ಹಿಂದುಳಿದ ಮಹತ್ವಕಾಂಕ್ಷಿ ಜಿಲ್ಲೆ, ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ ಸುದಿರ್ಗ ಹೋರಾಟ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗಬೇಕೆನ್ನುವ ಆಶಯ ನನ್ನದು ಆಗಿದೆ ,ಕಳೆದ ಮೂರು ವರ್ಷಗಳಿಂದ ದೇಶದ ಯಾವ ರಾಜ್ಯಗಳಿಗೂ ಕೇಂದ್ರ ಸರಕಾರ ಏಮ್ಸ್ ಅನ್ನು ಮಂಜೂರು ಮಾಡಿರುವುದಿಲ್ಲ, ಮುಂದಿನ ದಿನಗಳಲ್ಲಿ ಯಾವ ರಾಜ್ಯಗಳಲ್ಲಿ ಏಮ್ಸ್ ಇಲ್ಲವೋ ಆ ರಾಜ್ಯಗಳಿಗೆ ಮಂಜೂರು ಮಾಡುವ ಸಾಧ್ಯತೆ ಇದೆ, ಕರ್ನಾಟಕಕ್ಕೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಬೇಕಾದ ಸಂದರ್ಭದಲ್ಲಿ ಖಂಡಿತವಾಗಿಯೂ ರಾಯಚೂರು ನಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ಆದ್ಯತೆ ನೀಡಿ ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು. ನಿಯೋಗದಲ್ಲಿ ಡಾ. ಬಸವರಾಜ್ ಕಳಸ, ಪುನೀತ್ ಪಟ್ಟಣಶೆಟ್ಟಿ, ಎಂ. ಆರ್ .ಭೇರಿ, ಅಶೋಕ್ ಕಲ್ಲೂರ್ ವಿನಯ್ ಕುಮಾರ್ ಚಿತ್ರಗಾರ, ಉಪಸ್ಥಿತರಿದ್ದರು ಎಂದು ಏಮ್ಸ್ ಹೋರಾಟ ಸಮಿತಿ ರಾಯಚೂರು ಜಿಲ್ಲಾ ಸಂಚಾಲಕರು ಡಾ.ಪ್ರಧಾನ ಬಸವರಾಜ ಕಳಸ ತಿಳಿಸಿದ್ದಾರೆ.