13th Koppal District Literary Conference, Honoring President Lingareddy Alur at Radio Nilayam

ಗಂಗಾವತಿ: ೧೩ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಲಿಂಗಾರೆಡ್ಡಿ ಆಲೂರು ರವರನ್ನು ಇಂದು ನಗರದ ಗ್ರಾಮೀಣ ಭಾರತಿ ೯೦.೪ ಎಫ್. ಎಂ. ರೇಡಿಯೋ ನಿಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನಗರದಲ್ಲಿ ಮಾ.೨೭, ೨೮ರಂದು ಹಮ್ಮಿಕೊಳ್ಳಲಾಗಿರುವ ೧೩ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ, ಕಥೆಗಾರ, ಖ್ಯಾತ ನಿರೂಪಕ ಶ್ರೀ ಲಿಂಗಾರೆಡ್ಡಿ ಆಲೂರು ರವರನ್ನು ನಗರದ ವಿವೇಕಾನಂದ ಕಾಲೋನಿಯಲ್ಲಿರುವ ಗ್ರಾಮೀಣ ಭಾರತಿ ೯೦.೪ ಈಒ ರೇಡಿಯೋ ನಿಲಯದಲ್ಲಿ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಆಲೂರುರವರು ನನ್ನ ಸಾಹಿತ್ಯ ಕೃಷಿ, ಕನ್ನಡ ಸೇವೆಯನ್ನು ಗುರುತಿಸಿ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಗರದಲ್ಲಿ ಇದೇ ಮಾರ್ಚ್ ೨೭ ಮತ್ತು ೨೮ ರಂದು ನಡೆಯಲಿರುವ ಸಮ್ಮೇಳನಕ್ಕೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ಬಂದು ಯಶಸ್ವಿಗೊಳಿಸಬೇಕು ಎಂದರು.
ಈ ವೇಳೆ ರೇಡಿಯೋ ನಿಲಯದ ನಿರ್ದೇಶಕರಾದ ರಾಘವೇಂದ್ರ ತೂನ, ವ್ಯವಸ್ಥಾಪಕರಾದ ಲಾವಣ್ಯ ಅಂಚಕಟ್ಲು, ಖ್ಯಾತ ನಟ ವಿಷ್ಣುತೀರ್ಥ ಜೋಶಿ, ವಕೀಲರು ಶರದ್ ದಂಡಿನ್, ನಗರಸಭೆ ಸದಸ್ಯ ವಾಸುದೇವ ನವಲಿ, ಸಾಹಿತಿ ಅರಳಿ ನಾಗಭೂಷಣ, ವೀರೇಶ್, ಸುಬ್ರಹ್ಮಣ್ಯ ರಾಯಕರ್, ವಕೀಲರು ಶಿವಾನಂದಸ್ವಾಮಿ ನವಲಿ, ರೂಪನಗೌಡ ಸಂಗಾಪುರ ಸೇರಿದಂತೆ ಇತರರಿದ್ದರು..