Breaking News

ಜೇವರ್ಗಿಯ ೧೭ ಜನ ಪೌರಕಾರ್ಮಿಕರ ಹೋರಾಟಕ್ಕೆ ಬೆಂಬಲಿಸಿ ಮನವಿ.

Appeal in support of the struggle of 17 civil servants from Jewargi.

ಜಾಹೀರಾತು
IMG 20250321 WA0070

ತಿರುಚಿದ ವಿಡಿಯೋ ದುರ್ಬಳಕೆ ಮಾಡಿ, ಸುಳ್ಳು ಪ್ರಕರಣವನ್ನು ದಾಖಲಿಸಿ, ಹೋರಾಟಗಾರರ ತೇಜೋವದಧೆಗೆ ಪ್ರಯತ್ನಿಸುತ್ತಿರುವ, ಪೊಲೀಸರ ಭ್ರಷ್ಟ ಅಧಿಕಾರಿಗಳ ಹಾಗೂ ರಾಜಕೀಯ ಷಡ್ಯಂತ್ರವನ್ನು ಖಂಡಿಸಿ, ಅಮಾನುಷ ಪ್ರಯತ್ನಗಳನ್ನು ಕೂಡಲೇ ನಿಲ್ಲಿಸಬೇಕೆಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಶುಕ್ರವಾರ ಮಾನ್ಯ ಮುಖ್ಯಮಂತ್ರಿಗಳಿಗೆ ಕೊಟ್ಟೂರು ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಿತು. ಎಐಡಿಆರ್‌ಎಂ ಆಗ್ರಹಿಸಿ ತಮಗಾದ ಅನ್ಯಾಯಕ್ಕೆ ಪ್ರತಿಯಾಗಿ ನ್ಯಾಯಕ್ಕಾಗಿ ಮತ್ತು ತಮ್ಮ ಕೆಲಸಕ್ಕಾಗಿ ಜೇವರ್ಗಿ ತಾಲೂಕಿನ ೧೭ ಜನ ಪೌರ ಕಾರ್ಮಿಕರ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಜೇವರ್ಗಿ ಪುರಸಭೆಯ ಮುಖ್ಯಾಧಿಕಾರಿ ಸೇರಿದಂತೆ, ಜಿಲ್ಲಾ ಯೋಜನಾ ನಿರ್ದೇಶಕರಿಗೆ, ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ಸಚಿವರಿಗೆ, ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಮನವಿಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ.
ಆದರೂ ಪೌರಕಾರ್ಮಿಕರಿಗೆ ನ್ಯಾಯ ಸಿಗದಿದ್ದಾಗ ಅನಿವಾರ್ಯವಾಗಿ ದಿನಾಂಕ ೬.೩.೨೦೨೫ ರಿಂದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (ಎಐಡಿಆರ್‌ಎಂ) ಮತ್ತು ಜೇವರ್ಗಿ ತಾಲೂಕಿನ ಪೌರಕಾರ್ಮಿಕರ ಸಂಘದ ಮೂಲಕ ಪುರಸಭೆ ಕಾರ್ಯಾಲಯ, ಜೇವರ್ಗಿ ಕಚೇರಿಯ ಮುಂದೆ ಅನಿರ್ಧಿಷ್ಠಿತ ಧರಣಿಯನ್ನು ಪ್ರಾರಂಭಿಸಲಾಗಿದೆ. ಸಾಮಾಜಿಕವಾಗಿ ತುಳಿತಕ್ಕೊಳಪಟ್ಟ ಮತ್ತು ಸರ್ಕಾರದ ಅಧಿಕಾರಿಗಳಿಂದಲೇ ಶೋಷಣೆಗೆ ಒಳಪಟ್ಟ ಬಹುತೇಕ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರನ್ನು ಒಳಗೊಂಡ ಪೌರಕಾರ್ಮಿಕರ ಧರಣಿ ಪ್ರಾರಂಭವಾಗಿ ೧೨ ದಿನ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಬಂದು ತಮ್ಮ ಸಮಸ್ಯೆಯನ್ನು ಆಲಿಸಿರುವುದಿಲ್ಲ.
ಈ ಎಲ್ಲ ವಿಷಯಗಳನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಿ, ಜೇವರ್ಗಿ ಪುರಸಭೆಯಲ್ಲಿ ಖಾಲಿ ಇರುವ ೧೭ ಪೌರ ಕಾರ್ಮಿಕರ ಹುದ್ದೆಗಳಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಪೌರಕಾರ್ಮಿಕರನ್ನೇ ನೇಮಕ ಮಾಡಿಕೊಳ್ಳಬೇಕು. ಇಲಾಖೆಯ ಜೇವರ್ಗಿಯ ಕೆಲ ಭ್ರಷ್ಟ ಅಧಿಕಾರಿಗಳ. ಮತ್ತು ರಾಜಕಾರಣಿಗಳ. ಒತ್ತಡಕ್ಕೆ ಮಣಿದು ಸುಳ್ಳು ಮೊಕದ್ದಮೆಯನ್ನು ದಾಖಲಿಸಿ ಹೋರಾಟಗಾರರ ತೇಜೋವಧೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ವಾಸ್ತವವಾಗಿ ಜೇವರ್ಗಿ ಪುರಸಭೆ ಕಚೇರಿಯಲ್ಲಿ ನಡೆದ ಘಟನೆ  ಆದರೆ ಪೌರಕಾರ್ಮಿಕ ಮಹಿಳೆಯರು ಸಲ್ಲಿಸಿರುವ ದೂರನ್ನು ದಾಖಲಿಸಿಕೊಳ್ಳದೆ ಬಡವರಿಗೊಂದು ನ್ಯಾಯ ಉಳ್ಳವರಿಗೊಂದು ನ್ಯಾಯ ದಲಿತರುಗೊಂದು ನ್ಯಾಯ ಬಲಿತರಿಗೊಂದು ನ್ಯಾಯ ಎನ್ನುವ ತಾರತಮ್ಯ ಮಾಡಿರುವ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಪೌರಕಾರ್ಮಿಕರಾದ ದಲಿತ ಮಹಿಳೆಯರ ದೂರನ್ನು ಪರಿಗಣಿಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಎಫ್.ಐ.ಆರ್ ದಾಖಲಿಸಿ ದಲಿತ ವಿರೋಧಿ ಕಾರ್ಮಿಕ ವಿರೋಧಿ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಅವರನ್ನು ಕೂಡಲೇ ಬಂಧಿಸಬೇಕೆಂದು ಮನವಿ ಪತ್ರ ನೀಡಿದ್ದಾರೆ. ಪತ್ರವನ್ನು ಸ್ವೀಕರಿಸಿದ ಉಪತಹಶೀಲ್ದಾರ್ ಅನ್ನದಾನೇಶ್ ಕೂಡಲೇ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್, ತಾಲ್ಲೂಕು ಅಧ್ಯಕ್ಷ ತೆಗ್ಗಿನಕೇರಿ ಕೊಟ್ರೇಶ್, ಕೆ.ರೇಣುಕಮ್ಮ ಮಹಿಳಾ ರಾಜ್ಯ ಕಾರ್ಯದರ್ಶಿ, ಬಿ ರೇಣಕಮ್ಮ, ಮಂಜುನಾಥ ಭಜಂತ್ರಿ, ರಾಮು, ಸುಂಕಪ್ಪ, ಅಂಜಿನಪ್ಪ, ಟಿ ರಾಜು ನಾಗರಾಜ, ಆನಂದ್, ರಾಜು, ಉಪಸ್ಥಿತರಿದ್ದರು.

About Mallikarjun

Check Also

ಮತ್ಸಾö್ಯಶ್ರಯ ಯೋಜನೆಯಡಿ ಅರ್ಜಿ ಆಹ್ವಾನ

Application invited under the Fisheries Sanctuary Scheme ಕೊಪ್ಪಳ ಅಕ್ಟೋಬರ್ 15 (ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆಯಿಂದ 2024-25ನೇ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.