A festival of village women’s unions limited to name-calling.

ವರದಿ : ಬಂಗಾರಪ್ಪ .ಸಿ .
ಚಾಮರಾಜನಗರ /ಹನೂರು ; ಕೇಂದ್ರ ಸರ್ಕಾರವು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ದೇಶದ ಪ್ರತಿಯೋಬ್ಬ ಮಹಿಳೆಯು ಸ್ವಾವಲಂಬಿ ಗಳಾಗಿ ಜೀವನ ಸಾಗಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದೆದೆ ಆದರೆ ಜಿಲ್ಲೆಯಾದ್ಯಂತ ಈ ಯೋಜನೆಗೆ ಸಂಭಂದಿಸಿದ ಅಧಿಕಾರಿಗಳ ಬೇಜಾವ್ಭಾದಿರಿ ತನದಿಂದ ಹಲವಾರು ಲೋಪದೋಷಗಳನ್ನು ಕಾಣಬಹುದು .
ಹನೂರು ಪಟ್ಟಣ ಖಾಸಗಿ ಬಸ್ ನಿಲ್ದಾಣದಲ್ಲಿ ಅಯೋಜಿಸಿದ ಮಹಿಳೆಯರೆ ತಯಾರಿಸಿ ಮಾರಾಟ ಮಾಡುವ ವಸ್ತುಗಳ ಗ್ರಾಮ ಸಂತೆಯಲ್ಲಿ ಕೇವಲ ಬೆರಳೆಣಿಕೆ ವಸ್ತುಗಳಿದ್ದು ಅದರಲ್ಲಿ ನುಗ್ಗೆಕಾಯಿಯು ಸಹ ಒಂದಾಗಿದೆ ಎನ್ನಬಹುದು ,ಅಸಲಿಗೆ ಇದು ಮಹಿಳೆಯರ ಉತ್ತೆಜನಕ್ಕಾಗಿ ಮಾಡಿರುವ ಸಂತೆಯೊ ಅಥವಾ ನುಗ್ಗೆ ಮರದಲ್ಲಿ ಬೆಳೆದ ನುಗ್ಗೆ ಕಾಯಿ ಮಾರುವ ಸಂತೆಯೋ ಗೊತ್ತಿಲ್ಲ ಎನ್ನಲಾಗಿದೆ ..
ಸಂತೆಯನ್ನು ಅಯೋಜನೆ ಮಾಡಿರುವುದೆ ಕಿರಿದಾದ ಜಾಗ ದಲ್ಲಿ . : ಹನೂರು ಖಾಸಗಿ ಬಸ್ ನಿಲ್ದಾಣದ ಒಂದು ಬದಿಯಲ್ಲಿ ಬಸ್ ನಿಲ್ಲಬೇಕು ಇನ್ನೋಂದು ಬದಿಯಲ್ಲಿ ಬಸ್ ಗಳು ಹಾದುಹೋಗಬೇಕಿತ್ತು ಆದರೆ ಇಲ್ಲಿ ನೋಡಿದರೆ ವಾಹನಗಳು ನಿಲ್ಲುವ ಜಾಗದಲ್ಲೆ ಸಂತೆ ಪ್ರಾರಂಬಿಸಿ ಅದರಲ್ಲಿಯು ಸಹ ನಗೆಪಾಟಲಿಗಿಡಾದ ಸಂಗಾತಿ ನಡೆದಿದೆ . ಒಟ್ಟಿನಲ್ಲಿ ಹೇಳುವುದಾದರೆ ಚಾಮರಾಜನಗರ ಜಿಲ್ಲೆಯಲ್ಲಿ ಮಹಿಳ ಸ್ವಸಹಾಯ ಸಂಘದಿಂದ ತಯಾರಾಗುವ ಹಲವಾರು ಉತ್ಪನ್ನಗಳು ಕೇವಲ ಒಂದು ದಿನಕ್ಕೆ ಸೀಮಿತವೆ ಎಂನ ಅನುಮಾನ ಮೇಲ್ನೋಟಕ್ಕೆ ಕಾಣುತ್ತದೆ ಇನ್ನಾದರೂ ಅಯಾ ಸಂಬಂದ ಪಟ್ಟ ಅಧಿಕಾರಿಗಳು ನೀಜವಾದ. ಫಲಾನುಭವಿಗಳಿಗೆ ಸಹಾಯ ಮಾಡುವರೆ ಕಾದು ನೋಡಬೇಕಿದೆ .