Breaking News

ತಿಂಗಳುಗಳು ಕಳೆಯುತ್ತಾ ಬಂದರೂ ಸಂಘಟನೆಯವರ ದೂರಿಗೆ ಸ್ಪಂದಿಸದ ಗಂಗಾವತಿ ನಗರಸಭೆಯ ಪೌರಾಯುಕ್ತರು.

The Gangavathi Municipal Commissioner has not responded to the organization’s complaint even after months have passed.

ಜಾಹೀರಾತು

ಗಂಗಾವತಿ: ಗಂಗಾವತಿ ನಗರದಲ್ಲಿ ಅನೇಕ ಜಾಗಗಳು ನಗರಸಭೆ ವ್ಯಾಪ್ತಿಗೆ ಒಳಪಡುತ್ತಿದ್ದು ಅಂತಹ ಜಾಗಗಳನ್ನು ಪ್ರಬಲ ವ್ಯಕ್ತಿಗಳು ತಮ್ಮ ಸ್ವಂತಕ್ಕಾಗಿ ಮತ್ತು ಖಾಸಗಿ ವ್ಯಾಪಾರಕ್ಕಾಗಿ ತಮ್ಮ ಸ್ವಾಧೀನದಲ್ಲಿ ತೆಗೆದುಕೊಂಡು ವ್ಯಾಪಾರ ವ್ಯವಹಾರ ನಡೆಸುತ್ತಿದ್ದು ನಗರಸಭೆಗೆ ಬರುವಂತಹ ದುಡ್ಡನ್ನು ತಮ್ಮ ಸ್ವಂತಕ್ಕೆ ಬಳಸುತ್ತಿದ್ದು ಇದಕ್ಕೆ ನಗರಸಭೆಗೆ ತುಂಬಾ ನಷ್ಟ ಉಂಟಾಗುತ್ತಿದೆ ಎಂದು ದಲಿತ ಸಂಘಟನಾ ಸಮಿತಿ ಭೀಮಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅಜಯಕುಮಾರ ಚಲುವಾದಿ ಆಕ್ರೋಶ ವ್ಯಕ್ತಪಡಿಸಿದರು.
ಗಂಗಾವತಿ ನಗರದಲ್ಲಿ ನಗರಸಭೆಗೆ ಒಳಪಡುವಂತಹ ಜಾಗಗಳು ಮತ್ತು ನಗರದಲ್ಲಿ ನಡೆಯುವ ಕೆಲವೊಂದು ದುರ್ಘಟನೆಗಳ ಬಗ್ಗೆ ನಮ್ಮ ದಲಿತ ಸಂಘಟನಾ ಸಮಿತಿ ಭೀಮಘರ್ಜನೆ ವತಿಯಿಂದ ಪೌರಾಯುಕ್ತರಿಗೆ ಅನೇಕ ಬಾರಿ ದೂರು ಸಲ್ಲಿಸಿದರೂ ಯಾವುದೇ ದೂರಿಗೆ ಸ್ಪಂದಿಸದೆ ಮತ್ತು ಯಾವುದೇ ಒಂದು ಹಿಂಬರಹವನ್ನು ನೀಡುತ್ತಿಲ್ಲ. ಗಂಗಾವತಿ ನಗರಸಭೆಗೆ ನಷ್ಟ ಉಂಟಾಗುತ್ತಿರುವ ಬಗ್ಗೆ ಪೌರಾಯುಕ್ತರ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಜರುಗಿಸದೆ ಸುಮ್ಮನಿರುವುದು ಕೆಲವೊಂದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಸಂಘಟನೆ ನೀಡಿದ ದೂರುಗಳಿಗೆ ಇನ್ನು ಒಂದು ವಾರದಲ್ಲಿ ಸ್ಪಂದಿಸದೆ ಹೋದಲ್ಲಿ ಗಂಗಾವತಿಯ ನಗರಸಭೆಯ ಪೌರಾಯುಕ್ತರ ವಿರುದ್ಧ ನಗರಸಭೆಯ ಮುಂದೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ದಲಿತ ಸಂಘಟನಾ ಸಮಿತಿ ಒತ್ತಾಯಿಸುತ್ತದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.