Breaking News

ಬಹು ಚರ್ಚಿತ “ಸತ್ಯ ಶರಣರು ಸತ್ಯ ಶೋಧ” ಸಂಶೋಧನಾ ಗ್ರಂಥ ಬಸವ ಸಮಿತಿಯ ಭವನದಲ್ಲಿ ಬಿಡುಗಡೆ ಗೊಂಡಿತ್ತು

The much-discussed research book “Satya Sharanaru Satya Shodha” was released by the Basava Committee.

ಜಾಹೀರಾತು
IMG 20250310 WA0043 1024x576

ಬೆಂಗಳೂರು: ಜಸ್ಟೀಸ್ ಸನ್ಮಾನ್ಯ ಶ್ರೀ ಶಿವರಾಜ ಪಾಟೀಲ ಭಾರತ ದೇಶದ ಉಚ್ಚ ನ್ಯಾಯಾಲಯ ಗೌರವಾನ್ವಿತ ವಿಶ್ರಾಂತ ನ್ಯಾಯಾಧೀಶರು ಅಮೃತ ಹಸ್ತದಿಂದ ಬಿಡುಗಡೆಗೊಂಡಿತ್ತು. ಬಿಡುಗಡೆ ಗೊಳಿಸಿ ಮಾತನಾಡಿದ ಜಸ್ಟೀಸ್ ಶಿವರಾಜ ಪಾಟೀಲರು, ಈ ಸಂಶೋಧನಾ ಗ್ರಂಥ ಪೂಜ್ಯ ಬೆಲ್ದಾಳ ಶರಣರು ಒಂಬತ್ತು ವರ್ಷಗಳ ಶ್ರಮ ವಹಿಸಿದ ತಪಶ್ಚರ್ಯ ಗ್ರಂಥ, ಇಂತಹ ಗ್ರಂಥ ಎಲ್ಲರಿಗೂ ಬರೆಯಲು ಆಗಲ್ಲ ಇದಕ್ಕೆ ದೈವೀ ಶಕ್ತಿ ಬೇಕು, ಬಸವಣ್ಣನವರೆ ವಚನ ಸಾಹಿತ್ಯದ ಮೇಲೆ ಆಗುತ್ತಿರುವ ಆಕ್ರಮಗಳಿಗೆ ಉತ್ತರಿಸಲು ಪೂಜ್ಯ ಬೆಲ್ದಾಳ ಶರಣರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಮುಂದೆ ವಚನ ಸಾಹಿತ್ಯ ಸಂಶೋಧನೆ ಮಾಡುವವರಿಗೆ ಇದು ಆಕಾರ

IMG 20250310 WA0040 768x1024

ಗ್ರಂಥವಾಗಲಿದೆ. ನಾನು ನ್ಯಾಯಾಧೀಶರಾಗಿ,ಇವಾಗ ವಿಶ್ರಾಂತ ನ್ಯಾಯಾಧೀಶ ನನ್ನ ನ್ಯಾಯಕ್ಕೆ ಯಾವುದೇ ಸಾಂವಿಧಾನಿಕ ಮಾನ್ಯತೆ ಇರಲ್ಲ ಆದರೆ ನೈತಿಕ ಬೆಂಬಲ ಇರುತ್ತದೆ, ಆದರಿಂದ ನಾನು ಈ ಪುಸ್ತಕದ ನನ್ನ ಜಡ್ಜ್ಮೆಂಟ್ ಘೋಷಿಸುತ್ತೇನೆ, ಇದು ಜಗದ ಕಂಡರಿಯದ ಅಸತ್ಯದ ಮೇಲೆ ಸತ್ಯದ ಮೌಲಿಕ ಗ್ರಂಥ , ಪೂಜ್ಯರು ಶರಣರಿಗೆ ಕೊಟ್ಟ ನ್ಯಾಯ ಆಗಿದೆ, ಇದು ಕೇವಲ ಕೈತೊಳೆದುಕೊಂಡು ಓದುವ ಗ್ರಂಥ ಅಲ್ಲ ಸಂಪೂರ್ಣ ಸ್ನಾನ ಮಾಡಿ, ಹಣೆಗೆ ಒತ್ತಿಕೊಂಡು ನಮಸ್ಕರಿಸಿ, ಪ್ರಾಂಜಲ ಮನಸ್ಸಿನಿಂದ ಓದುವ ಗ್ರಂಥ, ಅದಕ್ಕಾಗಿ ಪೂಜ್ಯರಿಗೆ ನನ್ನ ವತಿಯಿಂದ ಸಮಾಜದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತಾ, ಚಿರಋಣಿ

IMG 20250310 WA0037

ಯಾಗಿರುತ್ತೇವೆ ಎಂದು ನಿಮ್ಮ ಪಾದಕ್ಕೆ ನಮಸ್ಕರಿಸಿ ಹೇಳುತ್ತೇನೆ ಎಂದು ಘೋಷಿಸಿದರು. ಮಾನ್ಯ ಸಚಿವ ಮಹಾದೇವಪ್ಪ ಅವರ ಬಗ್ಗೆ ಮಾತಾಡುತ್ತಾ ಜಸ್ಟಿಸ್ ಪಾಟೀಲರು ಹೇಳಿದ್ದು, ಮಹಾದೇವಪ್ಪ ಕೊರಳಲ್ಲಿ ಇರುವ ಚೈನ್ ಪದಕದಲ್ಲಿ ಇರುವ ಒಂದು ಕಡೆ ಬುದ್ಧ ಮತ್ತೊಂದು ಕಡೆ ಬಸವಣ್ಣನವರ ಫೋಟೋ ಕಂಡು ಬೆರಗಾದೆ, ಅವರ ಬಸವ ಅಭಿಮಾನಕ್ಕೆ ಶರಣು ಎಂದು ಹೇಳಿದ್ದಾರೆ.

ಕಾರ್ಯಕ್ರಮದ ದೀಪ ಪ್ರಜ್ವಲಿಸಿದ ಸನ್ಮಾನ್ಯ ಡಾ ಹೆಚ್ ಸಿ ಮಹಾದೇವಪ್ಪ ಮಾನ್ಯ ಸಮಾಜ ಕಲ್ಯಾಣ ಸಚಿವರು ಮಾತನಾಡುತ್ತಾ, ಪೂಜ್ಯ ಡಾ ಸಿದ್ದರಾಮ ಶರಣರು ರಚಿಸಿದ ಸಂಶೋಧನಾ ಗ್ರಂಥ ಬಸವ ತತ್ವ ಸಿದ್ದಾಂತ ಅಧ್ಯಯನ ಮಾಡುವವರಿಗೆ ಮಾರ್ಗದರ್ಶಕ ದರ್ಶಕ ಗ್ರಂಥ ಆಗಿ ಹೊರ ಹೊಮ್ಮಲಿ ಎಂದು ಹೇಳಿದರು. ಜಗತ್ತು ದೇಶದಲ್ಲಿ ನೈತಿಕತೆ ಅಧೋಗತಿಗೆ ಹೋಗುತಿದೆ , ಮೌಢ್ಯ ಮೌಢ್ಯಾಚರಣೆ ಜಾತಿಯತೆ ಇಂದ ಧರ್ಮ ನಾರುತ್ತಿದೆ, ಇಂತಹ ಸಮಯದಲ್ಲಿ ದೇಶಕ್ಕೆ ಅಲ್ಲದೆ ಜಗತ್ತಿಗೆ ಬಸವ ತತ್ವ ಸಿದ್ದಾಂತ ಅಗತ್ಯ ಆಗಿದೆ. ಬಸವಣ್ಣನವರ ವಚನ ಚಳುವಳಿಯ ಫಲಶೃತಿ ವಚನಗಳನ್ನು ಜನರ ಬಾಗಿಲಿಗೆ ಮುಟ್ಟಿಸಲು ನಾವೆಲ್ಲರೂ ಎಡವಿದೆ, ವಚನಗಳು ಜನರ ಮನೆ ಮನಗಳಿಗೆ ಮುಟ್ಟಿಸುವ ಕೆಲಸ ನಾವೆಲ್ಲರೂ ಮಾಡೋಣ, ದೇಶದಲ್ಲಿ ಸಾಮಾಜಿಕ ಸಾಮರಸ್ಯ ತರೋಣ ಎಂದು ಹೇಳಿದರು. ಸತ್ಯ ಶರಣರು ಸತ್ಯ ಶೋಧ ಸಂಶೋಧನಾ ಗ್ರಂಥ ಸರಕಾರದ ವತಿಯಿಂದ ಮುದ್ರಣ ಮಾಡಿ ಎಲ್ಲಾ ಗ್ರಂಥಾಲಯ ಶಾಲಾ ಕಾಲೇಜುಗಳಿಗೆ ಮುಟ್ಟಿಸು ಹಾಗೆ ಮಾಡಬೇಕೆಂದು ಜಸ್ಟಿಸ್ ಶಿವರಾಜ ಪಾಟೀಲ ಅವರ ಬೇಡಿಕೆಗೆ ಸಚಿವರು ಸಮ್ಮತಿ ಸೂಚಿಸಿದ್ದಾರೆ, ಹಾಗು ತ್ವರಿತಗತಿಯಲ್ಲಿ ಮುದ್ರಣ ಮಾಡುತ್ತೇವೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಡಾ ಶರದಚಂದ್ರ ಮಹಾಸ್ವಾಮೀಜಿ ಕುಂದೂರು ಮಠ ಮೈಸೂರು ಹಾಗು ಸಂಸ್ಕೃತ ವಿದ್ವಾಂಸರು ಮಾತನಾಡಿ, ಇದು ಅದ್ಭೂತ ಗ್ರಂಥ ,ಪೂಜ್ಯ ಬೆಲ್ದಾಳ ಶರಣರು ಭಾರತ ದೇಶ ತುಂಬಾ ಸುತ್ತಾಡಿ ಎಲ್ಲಾ ವೇದ ಆಗಮಗಳು ಉಪನಿಷತ್ತು ಸಂಗ್ರಹಿಸಿ ಸುಮಾರು ವರ್ಷ ಅಧ್ಯಯನ ಮಾಡಿದ ಫಲಶೃತಿ ಸಂಶೋಧನಾ ಗ್ರಂಥ ಹೊರಹೊಮ್ಮಿದೆ. ಇದು ವಚನ ಸಾಹಿತ್ಯ ಅಧ್ಯಯನಕ್ಕೆ, ಬಸವ ತತ್ವ ಸಿದ್ದಾಂತಗಳ ಮೇಲೆ ಮಾಡಿದ್ದ ಆಪಾದನೆಗಳಿಗೆ, ಲಿಂಗಾಯತ ಧರ್ಮ ದಾಖಲೆಗಳ ಮುಖಾಂತರ ಉತ್ತರ ನೀಡುತ್ತಾ, ಶರಣರ ವಚನಗಳು ಸ್ವತಂತ್ರ ಅನುಭವಗಳು , ಯಾವುದೇ ಪ್ರಾಚೀನ ಸಂಸ್ಕೃತ ಗ್ರಂಥಗಳ ಕಾಪಿ ಅಲ್ಲ, ಯಾವುದೇ ಧರ್ಮಗಳ ಆಚರಣೆ ಅನುಕರಣೆ ಅಲ್ಲ, ಇವು ಜಗತ್ತಿನ ಹೊಸ ವಿಚಾರಗಳು ಸಿದ್ಧಾಂತಗಳು ಎಂದು ಹೇಳಿದರು.

ಗ್ರಂಥ ರಚಿಸಿದ ಪೂಜ್ಯ ಬೆಲ್ದಾಳ ಶರಣರು ಮಾತಾಡುತ್ತಾ, ಈ ಗ್ರಂಥ ನನ್ನ 75 ವರ್ಷದ ಅಧ್ಯಯನದ ಶ್ರಮದ ಗ್ರಂಥ. ಈ ಗ್ರಂಥದಲ್ಲಿ ಎಲ್ಲಾ ಪುರಾವೆ ಸಮೇತ ಸತ್ಯ ಹೊರಹಾಕಿದ್ದು, ಬಸವಾದಿ ಶರಣರ ಅನುಭಾವದ ವಚನಗಳು ಸ್ವತಂತ್ರ, ಬಸವಣ್ಣನವರಿಗೆ ಗುರು ಯಾರು ಇದ್ದಿಲ್ಲ, ಜಾತವೆದ ಮುನಿ ಅನ್ನುವ ವ್ಯಕ್ತಿ ಹುಟ್ಟೆ ಇಲ್ಲ, ಬಸವಣ್ಣನವರ ಗುರು ದೇವರು ಪರಮಾತ್ಮ ಶ್ರೀಗುರುವೆ ಗುರು. ವೇದ ಉಪನಿಷತ್ತು ಆಗಮಗಳಲ್ಲಿ ಬಸವ ತತ್ವ ಸಿದ್ದಾಂತ ಯಾವುದೇ ಕುರುಹು ಇಲ್ಲ, ಇದೆ ಎಂದು ಹೇಳುವವರು ಶುದ್ಧ ಸುಳ್ಳು ಹೇಳುತ್ತಿದ್ದಾರೆ ಅದಕ್ಕೆ ಪುರಾವೆ ಇಲ್ಲ. ವೀರಶೈವ ಆಗಮಗಳೂ ಖೊಟ್ಟಿ ಎಂದು ಸಾಬೀತಾಗಿದೆ, ಶೈವ ಆಗಮಗಳು ಕೂಡ ಬಸವಣ್ಣನವರ ನಂತರದಲ್ಲಿ ಬರೆದಿದ್ದು, ವೀರಶೈವ ಆಗಮಗಳು ಸೃಷ್ಟಿ ಮಾಡಿ ಅದರಲ್ಲಿ ಶರಣರ ಪಂಚಾಚಾರ, ಶಟಸ್ಥಲ, ಅಷ್ಟಾವರಣ ಸೇರಿಸಿ, ಇವೆಲ್ಲ ಶರಣರ ಮೊದಲೇ ಇದ್ದವು ಎಂದು ತೋರಿಸಲು ಕುತಂತ್ರ ಮಾಡಿದ್ದಾರೆ ಎಂದು ನುಡಿದರು. ಸಿದ್ಧಾಂತ ಶಿಖಾಮಣಿ ಗ್ರಂಥ ಕೂಡ ಬಸವಾದಿ ಶರಣರ ಕಾಲ ನಂತರ ಸೃಷ್ಟಿ ಮಾಡಿದ್ದ ಸಂಸ್ಕೃತ ಗ್ರಂಥ, ನಾನು ಮೂಲ ಸಿದ್ದಾಂತ ಶಿಖಾಮಣಿ ಹುಡುಕಿ ತೆಗೆದಿದ್ದೇನೆ, ಗ್ರಂಥ ಬಸವ ಸ್ತೋತ್ರದಿಂದ ಅಂದರೆ ” ಓಂ ಶ್ರೀಗುರು ಬಸವ ಲಿಂಗಾಯ ನಮಃ” ಎಂದು ಬರೆದು ಪ್ರಾರಂಭ ಮಾಡುತ್ತಾರೆ, ಆದರಿಂದ ಸಿದ್ಧಾಂತ ಶಿಖಾಮಣಿ ಬಸವ ಪೂರ್ವ ಗ್ರಂಥ ಅಲ್ಲ. ಬಸವಣ್ಣನವರಿಗೆ ದೀಕ್ಷೆ ಕೊಟ್ಟಿದ್ದವರು ವೀರಶೈವ ಗುರುಗಳು ಅನ್ನೋದು ಶುದ್ಧ ಸುಳ್ಳು, ಇಷ್ಟಲಿಂಗ ಸಂಶೋಧನೆ ಮಾಡಿದ್ದೇ ಬಸವಣ್ಣನವರು. ಜಗತ್ತಿನಲ್ಲಿ ಪ್ರಥಮ ಇಷ್ಟಲಿಂಗ ದೀಕ್ಷೆ ನೀಡಿದ್ದು ಮಹಿಳೆಗೆ ತನ್ನ ಹಿರಿಯ ಸಹೋದರಿ ಅಕ್ಕ ನಾಗಾಂಬಿಕೆ ದೇವಿಯವರಿಗೆ. ಆದರಿಂದ ಇಷ್ಟಲಿಂಗ ಜನಕ ಬಸವಣ್ಣ. ಈ ಗ್ರಂಥ ಓದಿ ಯಾರಾದರೂ ಪುರಾವೆ ಸಹಿತ ಚರ್ಚೆಗೆ ಬಂದರೆ ಮನಪೂರ್ವಕ ಸ್ವಾಗತ್ತಿಸುತ್ತೇನೆ, ಸುಳ್ಳು ಮಾತುಗಳಿಗೆ ಒಪ್ಪುವುದಿಲ್ಲ ಎಂದು ಮನ ಬಿಚ್ಚಿ ಮಾತನಾಡಿದರು.

ಸ್ವಾಗತ ಭಾಷಣ ಶ್ರೀಕಾಂತ ಸ್ವಾಮಿ ಬೀದರ ಮಾಡಿದರು, ನಿರೂಪಣೆ ಪೂಜ್ಯ ಮಾತೆ ಸತ್ಯದೇವಿ ಮಾತಾಜಿ ಬಸವ ಮಹಾಮನೆ ನೆರವೇರಿಸಿದ್ದರು, ವೇದಿಕೆ ಮೇಲೆ ಪೂಜ್ಯ ಜಗದ್ಗುರು ಡಾ ಚನ್ನಬಸವಾನಂದ ಮಹಾಸ್ವಾಮೀಜಿ ಕುಂಬಳಗೋಡು ಪೀಠ ಬೆಂಗಳೂರು, ಪೂಜ್ಯ ಡಾ ಗಂಗಾಂಬಿಕೆ ಅಕ್ಕ, ಸನ್ಮಾನ್ಯ ಶ್ರೀ ಅರವಿಂದ ಜತ್ತಿ ಅಧ್ಯಕ್ಷರು ಬಸವ ಸಮಿತಿ ಬೆಂಗಳೂರು, ಶ್ರೀ ಕೃಷ್ಣಪ್ಪ ಮಾಲಿಕರು ಬಸವ ಟಿವಿ ಬೆಂಗಳೂರು ಉಪಸ್ಥಿತರಿದ್ದರು.

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.