Dharani Satyagraha to get work bill

ಕೊಟ್ಟೂರು ತಾಲ್ಲೂಕು ಅಂಬಳಿ ಗ್ರಾಮ ಪಂಚಾಯಿತಿ ಸದಸ್ಯಣಿಗೆ ಹಸ್ತಕ್ಷೇಪ ಮಾಡಿ, ಅನುದಾನದಲ್ಲಿ ಕಾಮಗಾರಿ ನಡೆಸಿರುವ ಬಿಲ್ ರೂ. ೩೯,೦೦೦ ಗಳನ್ನು ಕೊಡದೆ ತಾರತಮ್ಯ ಮಾಡುತ್ತಿದ್ದಾರೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ಸದಸ್ಯರಾದ ಲಲಿತಾ ಕಾಳಾಚಾರಿ ಅವರು ಸೋಮವಾರದಂದು ತಾಲ್ಲೂಕು ಪಂಚಾಯಿತಿ ಎದುರಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಕಾರ್ಯನಿರ್ವಾಹಕ ಅಧಿಕಾರಿ ಬಿ.ಆನಂದ್‌ಕುಮಾರ್ ರವರು ಧರಣಿ ಸ್ಥಳಕ್ಕೆ ಬಂದು, ಸ್ಪಂದಿಸಿ ಸಂಬಂಧಿಸಿದ ಅಂಬಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಕರೆಸಿ, ಸಮಸ್ಯೆಯನ್ನು ಆಲಿಸಿ, ಕಾಮಗಾರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒದಗಿಸಿ, ತುರ್ತಾಗಿ ನಿಯಮಾನುಸಾರ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಸೂಚಿಸಿದರು. ಗ್ರಾಮ ಪಂಚಾಯಿತಿ ಸದಸ್ಯರು ತಾವು ಮಾಡಿದ ಕೆಲಸದ ಬಿಲ್ ಪಡೆಯಲು ಧರಣಿ ಸತ್ಯಾಗ್ರಹ ಹಮ್ಮಿಕೊಂಡದ್ದು ವಿಪರ್ಯಾಸದ ಸಂಗತಿ ಎಂದು ಗ್ರಾಮಸ್ಥರು ಮಾತಾಡಿಕೊಂಡರು. ಸದಸ್ಯರು ಜನರ ಸಮಸ್ಯೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ಧರಣಿ ಮಾಡದೇ ತಮ್ಮ ಬಿಲ್ ಪಾವತಿಗೆ ಈ ಧರಣಿ ಹಮ್ಮಿಕೊಂಡದ್ದು ಎಷ್ಟು ಸರಿ? ಗ್ರಾಮ ಪಂಚಾಯಿತಿ ಸದಸ್ಯರುಗಳು ಕಾಂಟ್ರಾಕ್ಟ್ ಮತ್ತು ಇತರೆ ಕೆಲಸಗಳನ್ನು ಮಾಡಲು ಯಾವುದೇ ನಿಯಮಾವಳಿಗಳು ಇಲ್ಲದಿದ್ದರೂ, ತಮ್ಮ ಸ್ವಾರ್ಥಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು ಸರಿಯೇ? ಎಂದು ಗ್ರಾಮಸ್ಥರಾದ ಹೆಚ್ ಕೊಟ್ರೇಶ್ , ರಮೇಶ್ ಮಾರುತಿ ಹೇಳಿದರು
ಈ ಧರಣಿ ಸಂದರ್ಭದಲ್ಲಿ ಲಲಿತಾ ಕಾಳಾಚಾರಿ, ವಕೀಲರಾದ ಹನುಮಂತಪ್ಪ, ಸುರೇಶ, ಜಿ.ಮಲ್ಲಿಕಾರ್ಜುನ, ಕಾಳಾಚಾರಿ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಸದಸ್ಯರ ಹೊರತು ಕುಟುಂಬಸ್ಥರು ಹಸ್ತಕ್ಷೇಪ ವಾದಲ್ಲಿ ಅಂತಹವರ ವಿರುದ್ಧ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇಓ ಅವರು ಸೂಚಿಸಿದರು
ಅಂಬಳಿ ಗ್ರಾಮ ಪಂಚಾಯಿತಿಯಲ್ಲಿ ಎಲ್ಲ ಸದಸ್ಯರನ್ನು ಒಂದೇ ರೀತಿಯಾಗಿ ಕಾಣುತ್ತೇವೆ. ಯಾರಿಗೂ ಯಾವುದೇ ರೀತಿಯಾಗಿ ತಾರತಮ್ಯ ಎಸಗಿರುವುದಿಲ್ಲ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿಯೇ ಸಮರ್ಪಕವಾಗಿ ಎಲ್ಲರಿಗೂ ಸಮನಾಗಿ ಅನುದಾನ ಮೀಸಲಿಡಲು ತೀರ್ಮಾನಿಸಲಾಗುತ್ತಿದೆ.
ಶ್ರೀಮತಿ ಹೊಳಲಮ್ಮ, ಅಧ್ಯಕ್ಷರು, ಅಂಬಳಿ ಗ್ರಾಮ ಪಂಚಾಯಿತಿ
ಜನರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ಧರಣಿ ಮಾಡದೇ ,ತಾವು ಮಾಡಿದ
ಕೆಲಸದ ಬಿಲ್ ಪಡೆಯಲು ಧರಣಿ ಸತ್ಯಾಗ್ರಹ ಮಾಡಿರಿವುದು ವಿಪರ್ಯಾಸವಾಗಿದೆ ಎಂದು ಪ್ರಜ್ಞಾವಂತ ಗ್ರಾಮಸ್ಥರು ಹೆಚ್ ಕೊಟ್ರೇಶ್ ಹೇಳಿದರು