This is how Adiyogi Jakanur’s Shiva idol was seen on the occasion of Shivratri!

ವರದಿ:ಸಚೀನ ಆರ್ ಜಾಧವ
ಕಲ್ಯಾಣಸಿರಿ, ಸಾವಳಗಿ: ಜಮಖಂಡಿ ತಾಲೂಕಿನ ಸಮೀಪದ ಕೃಷ್ಣಾನದಿ ತಟದಲ್ಲಿರುವ ಜಕನೂರ ಎಂಬ ಪುಟ್ಟ ಗ್ರಾಮದಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವ ಆದಿಯೋಗಿ ಶಿವನ ಬೃಹತ್ ಮೂತಿ೯ ಈ ಭಾಗದ ಶಿವಭಕ್ತರ ಆಕರ್ಷಣೆ ಭಕ್ತಿರಸ ಭಾವದ ಕೇಂದ್ರ ಬಿಂದುವಾಗಿದೆ.
ಜಮಖಂಡಿ ತಾಲೂಕು ಜಕನೂರ ಗ್ರಾಮದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಬೃಹತ್ ಶಿವನಮೂತಿ೯ ಆಕರ್ಷಣೆ ಸ್ಪೂರ್ತಿ- 71 ಅಡಿ ಎತ್ತರ, 4 ಕೋಟಿ ₹ ವೆಚ್ಚದಲ್ಲಿ 1 ಎಕರೆ ವಿಶಾಲ ಪ್ರದೇಶದಲ್ಲಿ ಶಿವನ ಅವತಾರ ಮಿನುಗು- ದರ್ಶನಕ್ಕೆ ಭಕ್ತರ ದಂಡು-ಪೂಜೆ ಪುರಸ್ಕಾರ ಸಲ್ಲಿಕೆ- ಧಾಮಿ೯ಕ ತೃಷೆ ಜೋರು ! ಶಿವನ ರೂಪ ಲಾವಣ್ಯ ಕಣ್ತುಂಬಿಸಿಕೊಂಡ ಭಕ್ತಗಣ ! ಕೃಷ್ಣೆ ತೀರದ ದಡದಲ್ಲಿ ಮೈದೇಳಿರುವ ಈ ಶಿವನಮೂತಿ೯ಯ ರೂಪಾಲಂಕಾರದ ಲಾವಣ್ಯ ಕಣ್ತುಂಬಿಸಿಕೊಳ್ಳಲು ಶಿವರಾತ್ರಿ ಹಬ್ಬದಂದು ಅಸಂಖ್ಯಾತ ಶಿವಭಕ್ತರು ಇತ್ತ ಲಗ್ಗೆಯಿರಿಸಿ ಭಕ್ತಿ ನಮನ ಪೂಜಾ ಸಲ್ಲಿಸಿದರು.
ಜಕನೂರ ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಅಂಗಳದಲ್ಲಿ ತಲೆಯತ್ತಿರುವ ಬೃಹತ್ ಶಿವನಮೂತಿ೯ 71 ಅಡಿ ಎತ್ತರದಲ್ಲಿದೆ. ಸುಮಾರು ನಾಲ್ಕು ಕೋಟಿ ರೂ,ವೆಚ್ಚದಲ್ಲಿ ನಿಮಾ೯ಣಗೊಂಡಿರುವ ಶಿವ ಪರಮಾತ್ಮನ ಮೂತಿ೯ ಒಂದು ಎಕರೆ ವಿಶಾಲ ಜಾಗದಲ್ಲಿ ಶಿವಮನಗಳ ಕಣ್ಮನ ಸೆಳೆಯುತ್ತಿದೆ.ಬಹು ಅತ್ಯಾಕರ್ಷಕವಾಗಿ ರಾರಾಜಿಸಿ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.
ಶಿವರಾತ್ರಿ ಹಬ್ಬದಂದು ರಾತ್ರಿ ಕಲರಫೂಲ್ ಬಗೆಬಗೆಯ ಬಣ್ಣದ ಚಿತ್ತಾರದಲ್ಲಿ ಕಂಗೊಳಿಸಿ ಭಕ್ತರನ್ನು ತನ್ನತ್ತ ಸೆಳೆದಿದೆ. ಮನಃಪೂರ್ವಕವಾಗಿ ಆಕರ್ಷಿಸಿಸಿ ಭಕ್ತಿಭಾವದಲ್ಲಿ ತೇಲುವಂತೆ ಮಾಡಿದೆ. ಶಿವರಾತ್ರಿ ಸಂಭ್ರಮ, ಸಡಗರ ಭಾವಲೋಕದ ವೈಭವಕ್ಕೆ ಜಕನೂರ ಗ್ರಾಮದ ಈ ವೈವಿಧ್ಯಮಯ ಶಿವನಮೂತಿ೯ ಸಾಕ್ಷಿಯಾಗಿದೆ. ಅಂದು ಮುಂಜಾನೆಯಿಂದಲೇ ಅಪಾರ ಭಕ್ತರು ಆಗಮಿಸಿ ಶಿವನಿಗೆ ವಿಶೇಷ ಪೂಜೆ,ಪುರಸ್ಕಾರಗಳನ್ನು ನೆರವೇರಿಸಿದರು.
ಭಕ್ತ ಸಮೂಹ ಶಿವನ ಅಂಗಳದಲ್ಲಿ ಶ್ರದ್ಧಾ, ಭಕ್ತಿಯಿಂದ ನಡೆದುಕೊಂಡು ಶಿವನ ಕೃಪೆಗೆ ಪಾತ್ರರಾದರು. ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಭಕ್ತರ ದಂಡು ಆಗಮಿಸಿ ಶಿವನಮೂತಿ೯ ದರ್ಶನ ಪಡೆದು ಪುನೀತರಾದರು.ಭಕ್ತಿ ನಮನದಿಂದ ಧನ್ಯತಾಭಾವ ಮೆರೆದರು.ವಿವಿಧ ಬಗೆಯ ಪೂಜಾ ಕೈಂಕರ್ಯ ಕೈಗೊಂಡರು.ಶಿವನ ನೆಲ ಭಕ್ತಿ ಪರಾಕಾಷ್ಠೆಯಲ್ಲಿ ನಿಂತಿತು. ಶಿವರಾತ್ರಿ ಸಡಗರ ಮನಮನಗಳಲ್ಲಿ ಮನೆ ಮಾಡಿತ್ತು. ಶಿವನಮೂತಿ೯ ದರ್ಶನಕ್ಕೆ ಬಂದ ಭಕ್ತರಿಗಾಗಿ ಡಾ.ಮಾದುಲಿಂಗ ಮಹಾರಾಜರು ಪ್ರಸಾದ ವ್ಯವಸ್ಥೆ ಕಲ್ಪಿಸಿದರು. ರಾಗಿ ಅಂಬ್ಲಿ ,ಸಾಬೂದಾಣಿ,ಬಾಳೆಹಣ್ಣು, ದ್ರಾಕ್ಷಿ, ,ಶರಬತ್ ಪಾನೀಯ ವ್ಯವಸ್ಥೆ ಮಾಡಲಾಯಿತು. ಭಾಗಶಃ ಭಕ್ತರು ಉಪವಾಸ ವೃತದೊಂದಿಗೆ ಇಲ್ಲಿಗೆ ಆಗಮಿಸಿ ತಮ್ಮ ಮನಭಾವದ ಭಕ್ತಿ ಸಮಪಿ೯ಸಿದರು.
ಪ್ರತಿ ಭಾನುವಾರದಂದು ಇಲ್ಲಿಗೆ ಆಗಮಿಸುವ ಭಕ್ತರಿಗೆ ಪ್ರಸಾದ್ ವ್ಯವಸ್ಥೆ ಮಾಡಲಾಗುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ನಿತ್ಯ ಭಕ್ತರು ಶಿವನ ದರ್ಶನಕ್ಕೆ ಬರುತ್ತಾರೆ.ಅದರಲ್ಲೂ ರವಿವಾರದಂದು ಭಕ್ತರ ಸಂಖ್ಯೆ ಇಮ್ಮಡಿಯಾಗಿರುತ್ತದೆ. ಸಿದ್ಧಾಶ್ರಮದ ಡಾ. ಮಾದುಲಿಂಗ ಮಹಾರಾಜರ ಕೃಪಾಭಾವದಿ ನೇತೃತ್ವದಲ್ಲಿ ಇವೆಲ್ಲವೂ ಸಾಂಗವಾಗಿ ನೆರವೇರಿದವು.
ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಪ್ರಮುಖರಾದ ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ, ಓಯಪ್ಪ ಬ್ಯಾಕೋಡ, ಮಹಾದೇವ ಮಿಜಿ೯, ಹಣಮಂತ ಅಮರಿ,ಮಹಾದೇವ ಶಿರೋಳ,ಗಂಗಪ್ಪ ಮಂಟೂರ ಮಹಾದೇವ ಗುಡದಾರ, ಶಿವಪ್ಪ ಹುಣಶಿಕಟ್ಟಿ, ಮಲ್ಲಿಕಾರ್ಜುನ ಒಡೆಯರ,, ಮರೆಗುದ್ದಿಯ ಗುರುಪಾದಪ್ಪ ಮಠಪತಿ, ಕುಂಚನೂರಿನ ಹನಮು ಸಾಹುಕಾರ ಮೊದಲಾದವರ ಉಸ್ತುವಾರಿ ಸಹಕಾರದಿಂದ ಡಾ,ಮಾದುಲಿಂಗ ಮಹಾರಾಜರು ಅಚ್ಚುಕಟ್ಟಾಗಿ ಭಕ್ತರಗೆ ವ್ಯವಸ್ಥೆ ರೂಪಿಸಿ ಜನಭಾವದಲ್ಲಿ ಮಿನುಗಿದರು.