It is condemnable that Gangavati holy Durgamma’s pond is becoming a waste plant: VS Prakash Bhovi

ಗಂಗಾವತಿ: ನಗರದ ಮಧ್ಯಭಾಗದಲ್ಲಿ ದುರ್ಗಮ್ಮ ಹಳ್ಳವು ಹರಿಯುತ್ತಿದ್ದು, ಸುಮಾರು ವರ್ಷಗಳ ಹಿಂದೆ ಹಳ್ಳವು ತುಂಬಾ ಪಾವಿತ್ರö್ಯತೆಯಿಂದ ಸ್ವಚ್ಚಂದವಾಗಿ ಹರಿಯುತ್ತಿತ್ತು. ಆದರೆ ನಗರಾಡಳಿತದ ನಿರ್ಲಕ್ಷö್ಯ ಹಾಗೂ ಸಾರ್ವನಿಕರ ಬೇಜವಾಬ್ದಾರಿತನದಿಂದಾಗಿ ಈಗ ದುರ್ಗಮ್ಮನ ಹಳ್ಳ ತ್ಯಾಜ್ಯ ವಿಲೇವಾರಿ ಘಟಕದಂತಾಗಿದೆ ಎಂದು ಕರವೇ ನಾರಾಯಣಗೌಡ ಬಣದ ಗಂಗಾವತಿ ತಾಲೂಕು ಉಪಾಧ್ಯಕ್ಷರಾದ ವಿ.ಎಸ್.ಪ್ರಕಾಶ ಭೋವಿ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದರು.
ಅವರು ದುರ್ಗಮ್ಮನ ಹಳ್ಳ ದಿನೇದಿನೇ

ಘನತ್ಯಾಜ್ಯದಿಂದ ಭರ್ತಿಯಾಗುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡಿದರು. ಸದರಿ ಹಳ್ಳದ ಪಕ್ಕದಲ್ಲಿ ಕಸಾಯಿ ಖಾನೆಗಳಿದ್ದು, ಸದರಿ ಕಸಾಯಿ ಖಾನೆಯವರು ಪ್ರಾಣಿ, ಪಶುಗಳ ತ್ಯಾಜ್ಯಗಳನ್ನು ಹಳ್ಳಕ್ಕೆ ಎಸೆಯುತ್ತಿದ್ದು, ಅಲ್ಲದೇ ಹಣ್ಣಿನ ಅಂಗಡಿಯವರು ಕೊಳೆತ ಹಣ್ಣು ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಹಳ್ಳಕ್ಕೆ ಎಸೆಯುತ್ತಿದ್ದು, ಇದರಿಂದ ಹಳ್ಳವು ಸಂಪೂರ್ಣ ದುರ್ನಾಥ ಹೊಂದುತ್ತಿದೆ. ಈ ಹಳ್ಳದ ಸ್ವಚ್ಛತೆ ಬಗ್ಗೆ ನಗರಸಭೆ ತೀವ್ರ ನಿರ್ಲಕ್ಷö್ಯವಹಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗಂಗಾವತಿ ನಗರ ಘಟಕ ಅಧ್ಯಕ್ಷರಾದ ನಾಗರಾಜ ಐಲಿ ಮಾತನಾಡಿ, ಇತ್ತೀಚೆಗೆ ೨-೩ ವರ್ಷಗಳ ಹಿಂದೆ ಹಳ್ಳವನ್ನು ಸ್ವಚ್ಛಗೊಳಿಸಲಾಗಿದ್ದು, ಶಾಸಕರು ಹಳ್ಳವನ್ನು ಅಭಿವೃದ್ಧಿಪಡಿಸಲು ನೀಲನಕ್ಷೆ ತಯಾರಿಸಿ, ಹಳ್ಳಕ್ಕೆ ತಂತಿಬೇಲಿಯನ್ನು ಅಳವಡಿಸಿದ್ದರೂ, ಮಾಂಸ ಹಾಗೂ ಹಣ್ಣಿನ ವ್ಯಾಪಾರಿಗಳ ಬೇಜವಾಬ್ದಾರಿತನದಿಂದ ಹಳ್ಳವು ಗಲೀಜು ಆಗುತ್ತಿದೆ. ಇದರಿಂದ ಹಳ್ಳದ ಪಕ್ಕದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿ, ಸಾರ್ವಜನಿಕರ ಓಡಾಡಕ್ಕೆ ತೀವ್ರ ತೊಂದರೆಯುಂಟಾಗುತ್ತಿದೆ. ಅಲ್ಲದೇ ಹಳ್ಳದ ಅಕ್ಕಪಕ್ಕದಲ್ಲಿ ಕಸ ಹಾಗೂ ಮುಳ್ಳಿನ ಕಂಟಿಗಳು ಬೆಳೆಯುತ್ತಿದ್ದು, ಸಾರ್ವಜನಿಕರು ಇಲ್ಲಿಯೇ ಮಲಮೂತ್ರ ಮಾಡುತ್ತಾ ಹಳ್ಳವನ್ನು ಇನ್ನೂ ಹೊಲಸು ಮಾಡುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಈ ಹಳ್ಳವು ಮುಂದೆ ಕಂಪ್ಲಿ ಹೊಳೆಯನ್ನು ಸೇರುತ್ತಿದ್ದು, ಈ ಹೊಲಸು ನೀರು ಮುಂದಿನ ಗ್ರಾಮ ಹಾಗೂ ಪಟ್ಟಣಗಳ ಕುಡಿಯುವ ನೀರು ಆಗಿದೆ. ಈ ರೀತಿಯ ಹೊಲಸು ನೀರು ಸೇವನೆಯಿಂದ ಮಾರಕ ರೋಗಗಳು ಆವರಿಸುವ ಭೀತಿ ಇರುತ್ತದೆ. ಕೂಡಲೇ ನಗರಸಭೆ ಹಾಗೂ ಶಾಸಕರು ಎಚ್ಚೆತ್ತುಕೊಂಡು ಹಳ್ಳಕ್ಕೆ ವಿಲೇ ಮಾಡಲಾಗುತ್ತಿರುವ ತ್ಯಾಜ್ಯವನ್ನು ತಪ್ಪಿಸಿ, ಹಳ್ಳದ ಸೌಂದರೀಕರಣ ಹೆಚ್ಚಿಸಿ, ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕೆಂದು ಆಗ್ರಹಿಸಿದರು.