Linga yoga achieved by the Sarans is the best yoga: Pujya Sri Dr. Siddharameshwar surrendered to Belda

ಬಸವಕಲ್ಯಾಣ: “ಹನ್ನೆರಡನೇ ಶತಮಾನದಲ್ಲಿ ಗುರು ಬಸವಾದಿ ಶರಣರು ಸಾಧಿಸಿದ ಲಿಂಗಯೋಗ ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಯೋಗವಾಗಿದೆ” ಎಂದು ಪೂಜ್ಯ ಶ್ರೀ ಡಾ. ಸಿದ್ಧರಾಮೇಶ್ವರ ಬೆಲ್ದಾಳ ಶರಣರು ಅಭಿಮತ ವ್ಯಕ್ತಪಡಿಸಿದ್ದಾರೆ.
ಅವರು ಬಸವ ಮಹಾಮನೆ ಟ್ರಸ್ಟ್ ಬಸವಕಲ್ಯಾಣದ ವತಿಯಿಂದ ಹಮ್ಮಿಕೊಂಡ ಅನುಭವ ಮಂಟಪ ಸಂಸತ್ತು 7ನೇ ಅದಿವೇಶನದ ಮೊದಲನೇ ಗೋಷ್ಟಿಯಲ್ಲಿ ಮಾತನಾಡುತ್ತಾ. “ಲಿಂಗಯೋಗವೆಂದರೆ ಕೇವಲ ಆಧ್ಯಾತ್ಮಿಕ ಸಾಧನೆಗೆ ಮಾತ್ರ ಸೀಮಿತವಲ್ಲ. ಇದು ಜೀವನ ಪರಿವರ್ತನೆಯ ಶಕ್ತಿ ಹೊಂದಿರುವ ಪ್ರಾತ್ಯಕ್ಷಿಕ ಯೋಗವಾಗಿದೆ” ಎಂದು ಅವರು ವಿದ್ವತ್ತಿನಿಂದ ವಿವರಿಸಿದರು.
ಶರಣರು ವಚನಸಾಹಿತ್ಯದಲ್ಲಿ ಬೋಧಿಸಿದ ಷಟಸ್ಥಲವು ಅಂಗ ಲಿಂಗರ ಸಾಮರಸ್ಯಕ್ಕೆ ಭದ್ರ ಬುನಾದಿಯಾಗಿದೆಯಲ್ಲದೆ ಇದರಲ್ಲಿ ವಿಜ್ಞಾನ ಅಡಗಿದೆ. ಪ್ರತಿಯೊಬ್ಬ ಸಾಧಕರು ಶಿವಯೋಗ ಮಾರ್ಗವನ್ನು ಅನುಸರಿಸಿದರೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದೆಂದರು.
ಇಷ್ಟಲಿಂಗ ಸಾಧನೆಯಿಂದ ದೇಹ ಶುದ್ಧಿಯಾಗುತ್ತದೆ. ಪ್ರಾಣಲಿಂಗ ಸಾಧನೆಯಿಂದ ಮನ ಶುದ್ಧಿಯಾಗುತ್ತದೆ. ಭಾವಲಿಂಗ ಸಾಧನೆಯಿಂದ ಆತ್ಮಶುದ್ಧಿಯಾಗಿ ಸಾಧಕನ ಇಡೀ ದೇಹ ಸರ್ವಾಂಗ ಲಿಂಗವಾಗಲು ಸಹಕಾರಿಯಾಗಿದೆ ಪ್ರತಿಯೊಬ್ಬರು ಸಾಧಿಸಲು ಮುಂದಾಗಬೇಕು ಎಂದರು.
ಕೇವಲ ಧಾರ್ಮಿಕ ಕ್ರಿಯೆಗೆ ಸೀಮಿತರಾಗಬಾರದು ಎಂದು ಕಿವಿ ಮಾತು ಹೇಳಿದರಲ್ಲದೆ ಶಿವಯೋಗ ಸಾಧಿಸುವ ಸಾಧಕರಿಗೆ ವಿಶೇಷ ತರಬೇತಿ ನೀಡಲು ನಾವು ಕಾರ್ಯಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಶರಣರು ಮಠ ಸಂಸ್ಕೃತಿ ಹುಟ್ಟು ಹಾಕಿಲ್ಲ, ಜಗದ್ಗುರು ಪದವಿ ಹುಟ್ಟು ಹಾಕಿಲ್ಲ. ಶರಣರದು ಮಹಾಮನೆ ಕಲ್ಪನೆ ಇದೆ. ಮಹಾಮನೆ ಎಂಬುದು ವಿಶಾಲವಾಗಿತ್ತು, ಅದರೊಳಗೆ ಅನುಭವ ಮಂಟಪ ಚಿಂತನೆ ನಡೆಯುತ್ತಿತ್ತು ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಗುಣತೀರ್ಥ ವಾಡಿ ಕಲ್ಯಾಣ ಮಹಾಮನೆಯ ಪೂಜ್ಯಶ್ರೀ ಬಸವ ಪ್ರಭು ಸ್ವಾಮೀಜಿ ಮಾತನಾಡಿ “ಇಂದಿನ ಯುಗದಲ್ಲಿ ಮಾನವನಿಗೆ ಶಾಂತಿ, ಸಮಾನತೆ ಮತ್ತು ನೈತಿಕತೆಯ ಅವಶ್ಯಕತೆ ಇದೆ. ಶರಣರ ಲಿಂಗಯೋಗವೇ ಅದಕ್ಕೆ ಮೂಲ ಪರಿಹಾರ” ಎಂದು ಅವರು ಅಭಿಪ್ರಾಯಪಟ್ಟರು.
ಅನುಭವ ಮಂಟಪದ ಆಶಯವು ಸಂಸ್ಕಾರ, ಸಹೋದರ, ಸಮಾನತೆ, ಸಂಘಟನೆಯಿಂದ ಕೂಡಿತ್ತು. ಬಸವಣ್ಣನವರು ಒಬ್ಬ ಮನಃಶಾಸ್ತ್ರೀಯ ಗುಣ ಹೊಂದಿದ್ದರಿಂದಲೇ ಸರ್ವರನ್ನು ತನ್ನತ್ತ ಸೆಳೆದು ಸಮುದಾಯಿಕ ಲಿಂಗಯೋಗ ಸಾಧನೆ ಮಾಡಲು ಸಾಧ್ಯವಾಯಿತು.
ಪೂಜ್ಯ ಶ್ರೀ ಡಾ. ಸಿದ್ಧರಾಮ ಬೆಲ್ದಾಳ ಶರಣರು ಶ್ರೇಷ್ಟ ಲಿಂಗಾನುಭಾವಿಗಳಾಗಿದ್ದು ಅವರ ಜ್ಞಾನಾನುಭವನ್ನು ಸಾಧಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಭಾರತಿ ಕೆಂಪಯ್ಯ ಅವರು, ಸತ್ಯದೇವಿ ಮಾತಾಜಿ, ಗಂಗಾದಾರ ದೇವರು, ಸತ್ಯಕ್ಕ ಮಾತಾಜಿ ಬಂದವರ ಓಣಿ, ಬಸವ ದೇವರು ಸವದತ್ತಿ, ಶ್ರೀಕಾಂತ ಸ್ವಾಮಿ ಬೀದರ, ಶ್ರೀಕಉಪಸ್ಥಿತರಿದ್ದರು.