An awareness campaign launched under Anemia Ki Baat, Communitiki Saath by the Association of Paediatricians

ಗಂಗಾವತಿ, ಭಾರತದಲ್ಲಿ ಲಕ್ಷಾಂತರ ಜನರಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು, ರಕ್ತಹೀನತೆ (ಅನೀಮಿಯಾ) ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಕಾರಣ ಅಭಿಯಾನಗಳ ಮೂಲಕ ರಕ್ತಹೀನತೆ ಕುರಿತು ಜಾಗೃತಿ ಮೂಡಿಸಿ ಸಮಸ್ಯೆಯನ್ನು ತಡೆಗಟ್ಟಲು ಭಾರತೀಯ ಮಕ್ಕಳ ವೈದ್ಯರ ಸಂಘವು ಅನೀಮಿಯಾ ಕಿ ಬಾತ್, ಕಮ್ಯೂನಿಟಿಕಿ ಸಾಥ್ ಎಂಬ ಶಿರ್ಷಿಕೆ ಅಡಿಯಲ್ಲಿ ಜಾಗೃತಿ ಅಭಿಯಾನವನ್ನ ಪ್ರಾರಂಭಿಸಿದೆ
ಈ ಜಾಗೃತಿ ಅಭಿಯಾನವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ತಾಲೂಕ ಕೇಂದ್ರಗಳಲ್ಲಿ ಪ್ರವಾಸ ಮಾಡುತ್ತ ದಿನಾಂಕ 22.02.2025 ರ ಶನಿವಾರ ಬೆಳಿಗ್ಗೆ 9 ಗಂಟೆಗೆ ನಗರದ ಜೂನಿಯರ್ ಮೈದಾನದಲ್ಲಿರುವ, ಎಂ.ಎನ್.ಎಮ್ ಶಾಲೆಗೆ ಆಗಮಿಸಲಿದೆ.
ಅಭಿಯಾನದಲ್ಲಿ ರಕ್ತಹೀನತೆ ಕುರಿತು ಅರಿವು ಮೂಡಿಸುವುದರ ಜೊತೆಗೆ, ರಕ್ತ ಹೀನತೆ ತಡೆಗಟ್ಟುವ ಮಾರ್ಗಗಳನ್ನುಶಾಲಾಮಕ್ಕಳಿಗೆಪರಿಚಯಿಸುವುದಾಗಿದೆ.
ಶಾಲಾ ಮಕ್ಕಳಿಗೆ ರಕ್ತಹೀನತೆಯ ಹಾನಿಕಾರಕ ಪರಿಣಾಮಗಳ ಕುರಿತು ತಿಳಿಸುವುದು, ತಡೆಗಟ್ಟಲು ಅಗತ್ಯವಿರುವ ಕ್ರಮಗಳನ್ನು ವಿವರಿಸುವುದು ಮತ್ತು ಸರಿಯಾದ ಆಹಾರ, ಜೀವನ ಶೈಲಿಯ ಕುರಿತು ಮಾರ್ಗದರ್ಶನ ನೀಡುವುದಾಗಿದೆ.
ಈ ಕಾರ್ಯಕ್ರಮ:
ಉಚಿತ ಆರೋಗ್ಯ ತಪಾಸಣೆ: ಶಾಲಾ ಮಕ್ಕಳಿಗೆ ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಸುವುದು.
ಪೌಷ್ಠಿಕ ಆಹಾರದ ಮಹತ್ವದ ಕುರಿತು ಉಪನ್ಯಾಸಗಳನ್ನ ನೀಡುವುದು.
ಆರೋಗ್ಯ ತಜ್ಞರಿಂದ ಉಚಿತವಾಗಿ ಸಲಹೆ ನೀಡುವುದು.
ಈ ಜಾಗೃತಿ ಅಭಿಯಾನದ ಯಶಸ್ಸಿಗೆ ನಿಮ್ಮ ಸಹಕಾರ ಅತ್ಯವಶ್ಯಕವಾಗಿದೆ. ಕಾರಣ ಈ ಜಾಗೃತಿ ಅಭಿಯಾನದಲ್ಲಿ ತಾವುಗಳು ಪರಿಣಾಮಕಾರಿಯಾಗಿ ಭಾಗವಹಿಸುವ ಮೂಲಕ ಮತ್ತು ಬೆಂಬಲಿಸುವ ಮೂಲಕ ಅಭಿಯಾನದ ಯಶಸ್ಸಿಗೆ ಕಾರಣರಾಗಲು ತಮ್ಮಲ್ಲಿ ವಿನಮ್ರ ಪೂರ್ವಕ ಮನವಿ.
ಪೌಷ್ಠಿಕ ಆಹಾರ ಸೇವನೆ ಮತ್ತು ಉತ್ತಮ ಆರೋಗ್ಯಕರ ಜೀವನ ನಡೆಸುವ ಮೂಲಕ, ರಕ್ತಹೀನತೆಯ ವಿರುದ್ಧ ಹೊರಾಡೋಣ.
ಡಾ. ಅಮರೇಶ್ ಪಾಟೀಲ್
ಮಕ್ಕಳ ತಜ್ಞರು ಹಾಗೂ ಅಧ್ಯಕ್ಷರು IAP ವಿಜಯನಗರ ಶಾಖೆ ಗಂಗಾವತಿ.