Farmers insist on development of Singapore Sri Lakshmi Narayan Lake under Tungabhadra Left Bank Canal grant

ಗಂಗಾವತಿ: ತಾಲೂಕಿನ ಸಂಗಾಪುರ ಗ್ರಾಮದ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವೇ ನಂ: ೪೮, ವಿಸ್ತೀರ್ಣ ೪೨-೨೧ ಎ-ಗುಂ ವಿಸ್ತೀರ್ಣದ ವಿಜಯನಗರ ಪುರಾತನ ಕಾಲದ ಶ್ರೀ ಲಕ್ಷ್ಮಿ ನಾರಾಯಣ ಕೆರೆಯು ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಪಡದ ಡಿರುತ್ತದೆ. ಈ ಕೆರೆಯು ಜಲ ಸಂಗ್ರಹವಾಗದೇ ನಮ್ಮ ಹೊಲಗಳಿಗೆ ನೀರು ಸರಿಯಾದ ಪ್ರಮಾಣದಲ್ಲಿ ಹರಿಯುತ್ತಿಲ್ಲ. ಈ ನಿಟ್ಟಿನಲ್ಲಿ ಈ ಕೆರೆಯನ್ನು ತುಂಗಭದ್ರಾ ಎಡದಂಡೆ ಕಾಲುವೆಯ ಅನುದಾನದಡಿಯಲ್ಲಿ ಅಭಿವೃದ್ಧಿಪಡಿಸಲು ಶ್ರೀ ಲಕ್ಷಿö್ಮÃನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘದ ಅಧ್ಯಕ್ಷರಾದ ಖಮರಪಾಷಾ ಆಗ್ರಹಿಸಿದ್ದಾರೆ.
ಅವರು ಫೆಬ್ರವರಿ-೨೦ ಗುರುವಾರ ಸಂಗಾಪುರ ಗ್ರಾಮದ ಶ್ರೀ ಲಕ್ಷಿö್ಮನಾರಾಯಣ ಕೆರೆಯ ಎರಡೂ ಬದಿ ತೂಬುಗಳನ್ನು ಹೊಸದಾಗಿ ನಿರ್ಮಿಸಿ ಕೆರೆ ಅಭಿವೃದ್ಧಿಪಡಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ, ಕಾಡಾ ಅಧ್ಯಕ್ಷರಿಗೆ ಹಾಗೂ ಜಲಸಂಪನ್ಮೂಲ ಇಲಾಖೆಯ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಈ ಕೆರೆಯಿಂದ ವಿಪ್ರ, ವಿರುಪಾಪುರ ಭಾಗದ ಹಾಗೂ ರಾಜಾಪೂರ ಭಾಗದ ಸರ್ವೇ ನಂಬರಿನ ಭೂಮಿಗಳಿಗೆ ಶ್ರೀ ಲಕ್ಷಿö್ಮÃ ನಾರಾಯಣ ಕೆರೆ ಸುಮಾರು ೧೦೦೦ ಎಕರೆ ಭೂಮಿಗೆ ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ನೀರನ್ನು ಹರಿಸಿ ಕೆರೆಯನ್ನು ತುಂಬಿಸಿಕೊAಡು ಬೆಳೆಯನ್ನು ಬೆಳಯುತ್ತಿದ್ದೇವೆ. ಮುಂಗಾರು, ಹಿಂಗಾರು ಬೆಳೆಯ ಸಮಯದಲ್ಲಿ ನೀರು ಈ ಕೆರೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಸಂಗ್ರಹ ಆಗುತ್ತಿಲ್ಲ. ಕಾರಣ ಬೆಳೆಗಳು ಒಣಗಿ ನಷ್ಟವನ್ನು ಅನುಭವಿಸುತ್ತಿದ್ದೇವೆ. ಈ ಕೆರೆಯಲ್ಲಿರುವ ಎರಡೂ ಬದಿಯ ಟ್ಯೂಬಗಳು (ಪಿ.ಓ) ಸಂಪೂರ್ಣ ಹಾಳಾಗಿದ್ದರಿಂದ ನೀರು ಪೋಲಾಗುತ್ತಿದ್ದು ಹಾಗೂ ಈ ಕೆರೆಯು ತುಂಗಭದ್ರಾ ಎಡದಂಡೆ ಕಾಲುವೆಗೆ ಸಂಬAಧಪಟ್ಟಿದ್ದು, ಇದು ಶ್ರೀ ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿರುವುದರಿಂದ ಭಕ್ತಾದಿಗಳಿಗೆ ಹಾಗೂ ದನಗಳಿಗೆ ಕುಡಿಯುವ ನೀರಿಗೆ ಮತ್ತು ಸಾರ್ವಜನಿಕರ ಉಪಯೋಗಕ್ಕೆ ಹಾಗೂ ನಮ್ಮ ಹೊಲಗಳಿಗೆ ಸರಾಗವಾಗಿ ನೀರು ಹರಿಯಲಿಕ್ಕೆ ಈ ಕೆರೆಯಲ್ಲಿರುವ ಹೂಳು, ಮಣ್ಣು ತೆಗೆದು ಕೆರೆಯ ಎರಡೂ ಬದಿಯ ತೂಬುಗಳನ್ನು ನಿರ್ಮಿಸಿ ಕೆರೆಯ ಸುತ್ತಲೂ ರಸ್ತೆ ನಿರ್ಮಾಣ ಮಾಡಲು ೨೦೨೫-೨೬ನೇ ಸಾಲಿನ ತುಂಗಭದ್ರ ಎಡದಂಡೆ ಕಾಲುವೆಯ ಅನುದಾನದಡಿಯಲ್ಲಿ ಕೆರೆಯ ಎರಡೂ ಬದಿಯ ತೂಬುಗಳನ್ನು ಹೊಸದಾಗಿ ನಿರ್ಮಾಣ ಮಾಡಿ ಈ ಕೆರೆಯನ್ನು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಲಕ್ಷಿö್ಮÃನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘದ ಕಾರ್ಯದರ್ಶಿಯಾದ ನಾರಾಯಣ, ಸದಸ್ಯರುಗಳಾದ ಮಹಾದೇವಪ್ಪ, ಪಿ. ಕಾಂತಪ್ಪ, ಲಿಂಗಪ್ಪ, ಜಿ. ಸತ್ಯನಾರಾಯಣ, ಅಣ್ಣಪ್ಪ ಸೇರಿದಂತೆ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.