Mahaguru Sant Sri Sewalal, who showed the right path to the Lambani community who was in dire poverty: Former GIP member K.M. Shanthappa.

ತಿಪಟೂರು: ಕಡು ಬಡತನದಲ್ಲಿದ್ದ ಲಂಬಾಣಿ ಸಮುದಾಯಕ್ಕೆ ಸನ್ಮಾರ್ಗದ ದಾರಿ ತೋರಿದ ಮಹಾ ಗುರು ಸಂತ ಶ್ರೀ ಸೇವಾಲಾಲ್ ರವರು. ದೇಶದ ಹಲವಾರು ಭಾಗಗಳಲ್ಲಿ ಹಂಚಿಹೋಗಿರುವ ಲಂಬಾಣಿ ಜನಾಂಗಕ್ಕೆ ಶಿಕ್ಷಣದ ಮಾರ್ಗ ನೀಡಿದ ಮಹಾನ್ ಪವಾಡ ಪುರುಷ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಕೆ.ಎಂ. ಶಾಂತಪ್ಪ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ತಾಲೂಕು ಶ್ರೀ ಸೇವಾಲಾಲ್ ಲಂಬಾಣಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ, ಲಂಬಾಣಿ ಜನಾಂಗದ ಸದ್ಗುರು ಸಂತ ಶ್ರೀ ಸೇವಾಲಾಲ್ ರವರ 286ನೇ ಜಯಂತೋತ್ಸವದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ,ಮಾತನಾಡಿದ ಶಾಂತಪ್ಪನವರು,ಡಾ.ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನದಲ್ಲಿ ಪ್ರತಿಯೊಂದು ಜನಾಂಗಕ್ಕೂ ಸಮಾನವಾಗಿ ಬದುಕುವ ಹಕ್ಕು ನೀಡಿದ್ದಾರೆ.ಎಲ್ಲರೂ ಸಮಾಜದಲ್ಲಿ ಉತ್ತಮ ಶಿಕ್ಷಣ ಪಡೆದು,ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಬೇಕು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಎಂ.ಆರ್. ಸೋಮಶೇಖರ್ ಮಾತನಾಡಿ, ಸಂತ ಶ್ರೀ ಸೇವಾಲಾಲ್ ದೇವ ಮಾನವರಾಗಿ,ಸಮಾಜಕ್ಕೆ ದಾರಿ ತೋರಿದ್ದಾರೆ.ಗುರಿ ಇಲ್ಲದ ಜನಾಂಗಕ್ಕೆ ಗುರುವಾಗಿ ದಾರಿ ತೋರಿದರು. ತಮ್ಮ ತತ್ವ ಚಿಂತನೆ ಸರ್ವ ಸಮಾಜದ ಅಭ್ಯದಯಕ್ಕೆ ದಾರಿಯಾಗಿದ್ದು, ಲಂಬಾಣಿ ಸಮಾಜ ಹೆಚ್ಚು ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿಯಲ್ಲಿ ಬದುಕಬೇಕು ಎಂದು ತಿಳಿಸಿದರು.
ತಾ.ಶ್ರೀ ಸೇವಾಲಾಲ್ ಲಂಬಾಣಿ ಸಂಘದ ಅಧ್ಯಕ್ಷ ಮತ್ತು ಆಯೋಜಕ ಬಿ.ಟಿ.ಕುಮಾರ್ ಮಾತನಾಡಿ, ಲಂಬಾಣಿ ಸಮಾಜದ ಗುರುಗಳಾದ ಸಂತ ಶ್ರೀ ಸೇವಾಲಾಲ್ ಮಹಾರಾಜರು ತಮ್ಮ ಚಿಕ್ಕ ವಯಸ್ಸಿನಲ್ಲಿ ದೇಶಪರ್ಯಟನೆ ಮಾಡಿ,ಸಮಾಜಕ್ಕೆ ಉಪದೇಶ ನೀಡಿ ಸಮಾಜದ ಸನ್ಮಾರ್ಗಕ್ಕೆ ದಾರಿಯಾಗಿದ್ದಾರೆ. ಎಲ್ಲರೂ ಶ್ರೀ ಸೇವಾಲಾಲ್ ರವರ ದಾರಿಯಲ್ಲಿ ನಡೆಯೋಣ. ಸಮಾಜವನ್ನ ಕಟ್ಟಿ ಬೆಳೆಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಸ್ವಾಮಿ ಮತ್ತು ಡಾ. ರಕ್ಷಿತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕುಮಾರಸ್ವಾಮಿ,ಮಾಜಿ ನಗರಸಭಾ ಸದಸ್ಯ ತರಕಾರಿ ಗಂಗಾಧರ್, ಮಡಿವಾಳ ಸಮಾಜದ ಶಂಕರಪ್ಪ,ಸವಿತಾ ಸಮಾಜದ ಗೋವಿಂದರಾಜ್,ಗ್ರಾಪಂ ಸದಸ್ಯ ಹರೀಶ್ ಗೌಡ,ಡಿಎಸ್ಎಸ್ ತಾ. ಅಧ್ಯಕ್ಷ ರಾಜು ಬೆಣ್ಣೆನಹಳ್ಳಿ,ಕೊರಚ ಸಮಾಜದ ಅಧ್ಯಕ್ಷ ಸತೀಶ್, ಯುವ ಮುಖಂಡರಾದ ಧರಣೇಶ್,ತಿಲಕ್ ಕುಮಾರ್,ಸಮಾಜದ ಮುಖಂಡರಾದ ನಾಗನಾಯ್ಕ್, ಜಿತೇಂದ್ರ,ಮಂಜು ನಾಯ್ಕ,ಉದಯ್, ಡಿಎಸ್ಎಸ್ ನ ಮಾರನಗೆರೆ ರಮೇಶ್ ಮತ್ತು ಕೃಷ್ಣಮೂರ್ತಿ ಕಂಚಾಘಟ್ಟ ಸೇರಿದಂತೆ ವಿವಿಧ ಸಮಾಜದ ಮುಖಂಡರುಗಳು, ಅಧ್ಯಕ್ಷರುಗಳು,ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ ಮಂಜು ಗುರುಗದಹಳ್ಳಿ