The insistence of the villagers to entrust the management of the lake to the village

ಗಂಗಾವತಿ: ಕಳೆದ ಹಲವು ದಶಕಗಳಿಂದ ಸಂಗಾಪುರ ಗ್ರಾಮದ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಕೆರೆ ಇದ್ದು, ಸಂಗಾಪುರ ಗ್ರಾಮದ ನಾಗರಿಕರ ಹಾಗೂ ಜಾನುವಾರುಗಳ ಕುಡಿಯುವ ನೀರಿಗಾಗಿ ಅನಾದಿ ಕಾಲದಿಂದಲೂ ಕೆರೆಯ ಬಳಕೆ ಮಾಡುತ್ತಿದ್ದು, ಈ ಕೆರೆಯ ನಿರ್ವಹಣೆಯನ್ನು ಗ್ರಾಮ ಪಂಚಾಯತಿಗೆ ವಹಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅವರು ಸದರಿ ಕೆರೆ ನಿರ್ವಹಣೆ ಗ್ರಾ.ಪಂ ಗೆ ನೀಡಲು ಫೆಬ್ರವರಿ-೧೧ ರಂದು ಬೆಳಗ್ಗೆ ೯:೩೦ ಕ್ಕೆ ತಹಶೀಲ್ದಾರರಿಗೆ, ಕ.ನೀ.ನಿ.ನಿ ವಡ್ಡರಹಟ್ಟಿ ನಂ: ೦೨ ಕಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಹಾಗೂ ಮದ್ಯಾಹ್ನ ೧೨:೩೦ ಕ್ಕೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿ ಗ್ರಾಮಸ್ಥರು ಒಕ್ಕೋರಲಿನಿಂದ ಒತ್ತಾಯಿಸಿದ್ದಾರೆ.
ಈಗಾಗಲೇ ಸಂಗಾಪುರ ಗ್ರಾಮ ಪಂಚಾಯತಿಯು ನಾಗರಿಕರ ಅನುಕೂಲಕ್ಕಾಗಿ ನರೇಗಾ ಯೋಜನೆಯಡಿಯಲ್ಲಿ ಸಾಕಷ್ಟು ಅನುದಾನವನ್ನು ೨೦೨೩ ರಲ್ಲಿ ರೂ. ೪೧,೩೨,೦೦೦/- ಹಾಗೂ ೨೦೨೪ ರಲ್ಲಿ ರೂ. ೧೧,೬೫,೮೦೦/- ಗಳನ್ನು ಕೆರೆ ಹೂಳೆತ್ತುವ ಕಾರ್ಯಕ್ಕಾಗಿ ಬಳಕೆ ಮಾಡಿರುತ್ತದೆ. ಇತ್ತೀಚೆಗೆ ಹಲವರು ಕೂಡಿಕೊಂಡು ಕೆರೆ ಅಭಿವೃದ್ಧಿ ಸಂಘದ ಹೆಸರಿನಲ್ಲಿ ಅನಧಿಕೃತವಾಗಿ ಕೆರೆಯ ಮಾಲಿಕತ್ವ ಪಡೆಯುವ ಹುನ್ನಾರ ನಡೆಸಿದ್ದು, ಅದರಿಂದ ತಮ್ಮ ವೈಯಕ್ತಿಕ ಲಾಭಕ್ಕಾಗಿ ಕೆರೆಯ ನೀರು, ಕೆರೆಯ ಮಣ್ಣನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇರುತ್ತಾರೆ. ಈ ಸರ್ಕಾರದ ಆಸ್ತಿ ಅನ್ಯ ಜನರ ಕೈವಶವಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ಸದರಿ ಕೆರೆಯನ್ನು ಈಗಾಗಲೇ ಸಾಕಷ್ಟು ಹಣ ವ್ಯಯಿಸಿ ನಿರ್ವಹಣೆ ಮಾಡುತ್ತಿರುವ ಗ್ರಾಮ ಪಂಚಾಯತಿಗೆ ನೀಡಿದಲ್ಲಿ ಅದನ್ನು ಇನ್ನೂ ಸುಸ್ಥಿರವಾಗಿ ಅಭಿವೃದ್ಧಿ ಮಾಡಲು ಸಾಧ್ಯವಾಗಲಿದೆ. ಇದೇ ಪ್ರದೇಶದ ಅಂಜನಾದ್ರಿ ಬೆಟ್ಟವು ಪ್ರವಾಸೋಧ್ಯಮದ ದೃಷ್ಟಿಯಿಂದ ಅಭಿವೃದ್ಧಿ ಹೊಂದುತ್ತಿರುವುದರಿAದ ಗ್ರಾಮ ಪಂಚಾಯತಿಯು ಪ್ರವಾಸೋಧ್ಯಮದ ದೃಷ್ಟಿಯಿಂದ ಈ ಕೆರೆಯನ್ನು ಅಭಿವೃದ್ಧಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೀನು ಸಾಕಾಣಿಕೆ, ಬೋಟಿಂಗ್ ವ್ಯವಸ್ಥೆ, ವಾಕಿಂಗ್ ಟ್ರಾö್ಯಕ್, ಮಕ್ಕಳಿಗೆ ಮನೋರಂಜನಾ ಉಪಕರಣಗಳನ್ನು ಅಳವಡಿಸುವ ಮೂಲಕ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಸಾರ್ವಜನಿಕರಿಗೆ ಹಾಗೂ ಈ ಭಾಗದಲ್ಲಿ ಸಂಚರಿಸುವ ಪ್ರವಾಸಿಗಳಿಗೆ ಅನುಕೂಲವಾಗುತ್ತದೆ. ಒಂದುವೇಳೆ ಯಾವುದಾದರೂ ಒಂದು ಗುಂಪಿನ ಸಂಘ-ಸAಸ್ಥೆ, ಟ್ರಸ್ಟ್ಗಳಿಗೆ ಕೆರೆಯ ನಿರ್ವಹಣೆಯನ್ನು ನೀಡಿದಲ್ಲಿ ಸರ್ಕಾರಿ ಆಸ್ತಿಯು ದುರ್ಬಳಕೆಯಾಗುವ ಸಂಭವವಿರುತ್ತದೆ. ಸದರಿ ಕೆರೆಯನ್ನು ಕಂದಾಯ ಇಲಾಖೆಯವರು ಈಗಾಗಲೇ ಕಳೆದ ಸಾಲಿನಲ್ಲಿ ಸರ್ವೇ ಮಾಡಿ ಹದ್ದುಬಸ್ತು ಮಾಡಿ ೨೦ ಅಡಿ ಅಗಲದ ರಸ್ತೆಯನ್ನೂ ಕೂಡಾ ಗ್ರಾಮ ಪಂಚಾಯತಿವತಿಯಿAದ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ. ಕಾರಣ ಸಂಗಾಪುರ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಒತ್ತಾಸೆಯೇನೆಂದರೆ, ಸಂಗಾಪುರ ವ್ಯಾಪ್ತಿಯ ಸರ್ವೆ ನಂ: ೪೮// ವಿಸ್ತೀರ್ಣ ೪೨-೨೧ ಎ-ಗುಂ ಕೆರೆಯನ್ನು ನೀರಾವರಿ ಇಲಾಖೆಯ ಆಡಳಿತದಿಂದ ಸಂಗಾಪುರ ಗ್ರಾಮ ಪಂಚಾಯತಿಗೆ ನಿರ್ವಹಣೆಗೆ ವಹಿಸಿಕೊಡುವುದಾಗಿದೆ.
ಈ ಸಂದರ್ಭದಲ್ಲಿ ಸಂಗಾಪುರ ಗ್ರಾಮದ ನಾಗರಿಕರುಗಳಾದ ಉಪ್ಪಾರ್ ಕೃಷ್ಣಪ್ಪ, ರವಿ ನಾಯಕ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರಾಘು, ಯಮನೂರು ಅಗಸರ, ಮರಿಯಪ್ಪ, ಕೃಷ್ಣ ನಾಯಕ್, ರಾಚಯ್ಯ ಸ್ವಾಮಿ, ಗೋವಿಂದ ಲಮಾಣಿ, ನಾಗರಾಜ್ ಗದ್ವಾಲ್ ಸೇರಿದಂತೆ ಗ್ರಾಮದ ಹಲವು ಮುಖಂಡರು ಉಪಸ್ಥಿತರಿದ್ದರು.