Breaking News

ವಡ್ಡರಹಟ್ಟಿಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಮತ್ತು ವಿಕಲಚೇತನರ ಸಮನ್ವಯ ಗ್ರಾಮಸಭೆ

Special Gram Sabha for Children’s Rights and Coordination Gram Sabha for Persons with Disabilities at Waddarahatti

ಜಾಹೀರಾತು

ಶಾಲಾ ಮಕ್ಕಳು ಓದಿನ ಆಸಕ್ತಿ ಹೆಚ್ಚಿಸಿಕೊಳ್ಳಲಿ

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಹೇಳಿಕೆ

ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾ.ಪಂ. ವತಿಯಿಂದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಮತ್ತು ವಿಕಲಚೇತನರ ಸಮನ್ವಯ ಗ್ರಾಮಸಭೆ ಬುಧವಾರ ನಡೆಯಿತು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಮಾತನಾಡಿ, ಮಕ್ಕಳಿಗೆ ಉತ್ತಮ ಮಾರ್ಗಗಳ ಮುಖಾಂತರ ಶಿಕ್ಷಣ ನೀಡಬೇಕಿದೆ. ಮಕ್ಕಳ ಜೀವನವನ್ನು ಅಜ್ಞಾನದಿಂದ ಸುಜ್ಞಾನದ ಕಡೆ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸರಕಾರಿ ಶಾಲೆಗಳ ಮಕ್ಕಳು ತಮಗೆ ಸಿಗುವ ಸರಕಾರಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಪಂ ಗ್ರಂಥಾಲಯದ ಸೌಲಭ್ಯ ಪಡೆದುಕೊಳ್ಳಬೇಕು. ಗ್ರಂಥಾಲಯದಲ್ಲಿ ದಿನ ಪತ್ರಿಕೆಗಳನ್ನು ಓದುವುದು, ಸಣ್ಣ ಕಥೆಗಳನ್ನು ಓದುವುದು ಹಾಗೂ ಕಂಪ್ಯೂಟರ್ ಕಲಿಕಾಸಕ್ತಿ ಬೆಳೆಸಿಕೊಳ್ಳಬೇಕು. ನಿತ್ಯವೂ ಶಾಲೆಗೆ ಆಗಮಿಸಿ ಉತ್ತಮ ವಿದ್ಯಾರ್ಥಿಗಳಾಗಿ ಶಾಲೆ ಮತ್ತು ಪಾಲಕರಿಗೆ ಹೆಸರು ತರಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಮತ್ತು ವಿಕಲಚೇತನರ ಸಮನ್ವಯ ಗ್ರಾಮಸಭೆಯಿಂದ ಮಕ್ಕಳು ಮತ್ತು ವಿಶೇಷ ಚೇತನರ ಸಮಸ್ಯೆ ತಿಳಿಯಲು ಸಹಕಾರಿಯಾಗುತ್ತದೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ವಿಕಲಚೇತನರು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಸರಕಾರಿ ಶಾಲೆ ಹಾಗೂ ಕಚೇರಿಗಳಲ್ಲಿ ವಿಕಲಚೇತನರಿಗೆ ‘ಅಡೆತಡೆ ರಹಿತ’ (ರ್ಯಾಂಪ್ , ರೈಲಿಂಗ್ ವ್ಯವಸ್ಥೆ) ವಾತಾವರಣ ನಿರ್ಮಾಣ ಮಾಡಲಾಗುವುದು. ಜೊತೆಗೆ ವಿಕಲಚೇತನರು ಪ್ರತ್ಯೇಕವಾಗಿ ನರೇಗಾ ಕೆಲಸಕ್ಕೆ ನಮೂನೆ 6 ಅರ್ಜಿ ಸಲ್ಲಿಸಿದರೆ ಪ್ರತ್ಯೇಕ ಎನ್ ಎಂಆರ್ ತೆಗೆದು ಕೆಲಸ ನೀಡಲಾಗುವುದು ಎಂದರು.

ಮಕ್ಕಳ ಮನವಿ: ಸರಕಾರಿ ಶಾಲೆಗಳ ಮಕ್ಕಳು “ಪರಿಸರ ನೈರ್ಮಲ್ಯ ಹಾಗೂ ಸ್ವಚ್ಚತೆ, ವಿದ್ಯುತ್ ದೀಪ್ ಹಾಗೂ ಶಾಲೆ ಗೇಟ್ ಹತ್ತಿರ ರಸ್ತೆಗೆ ಹಂಪ್ಸ್ ಅಳವಡಿಸುವಂತೆ’ ಗ್ರಾಪಂ ಆಡಳಿತ ಮಂಡಳಿಗೆ ಕೋರಿದರು.

ಗಮನಸೆಳೆದ ಮಕ್ಕಳು: ಗ್ರಾಪಂ ವ್ಯಾಪ್ತಿಯ ಶಾಲೆಗಳ ಮಕ್ಕಳು ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ಕುರಿತು ಪ್ರಬಂಧ, ಕಿರು ನಾಟಕಗಳನ್ನು ಆಡಿ ಅರಿವು ಮೂಡಿಸಿ ಎಲ್ಲರ ನಿಬ್ಬೇರಗಿಸಿದರು.

ವಡ್ಡರಹಟ್ಟಿ ಗ್ರಾಪಂ ಸದಸ್ಯರಾದ ಬಳ್ಳಾರಿ ರಾಮಣ್ಣ ನಾಯಕ, ಶಾಂತಮ್ಮ, ಫೀರ್ ಮಹ್ಮದ್, ಕಾರ್ಯದರ್ಶಿಗಳಾದ ಈಶಪ್ಪ, ಗ್ರಾಪಂ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರಾದ ವಿ. ನಾಗರತ್ನ, ಸದಾನಂದ, ಶರಣಪ್ಪ, ಶರಣಬಸಪ್ಪ, ಕನಸು ನನಸು ಚಾರಿಟೇಬಲ್ ಟ್ರಸ್ಟ್ ಫಾರ್ ದಿವ್ಯಾಂಗರ (ರಿ) ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಡಾ.ಅಶೋಕ ಡಂಬರ್, ವಿಆರ್ ಡಬ್ಲ್ಯುಗಳಾದ ಶೈಲಾಜ, ಸೋಮಶೇಖರಗೌಡ, ಗ್ರಾಪಂ ಸಿಬ್ಬಂದಿಗಳಾದ ಆಂಜನೇಯ, ರುದ್ರಸ್ವಾಮಿ, ಮಹ್ಮದ್, ಸಿಬ್ಬಂದಿ ವರ್ಗ ಮತ್ತು ಶಾಲಾ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.