Breaking News

APS ನನ್ನ ಗರ್ವ ಮತ್ತು ಹೆಮ್ಮೆ ಸೂಪರ್ ಸ್ಟಾರ್.ರಜನಿ ಕಾಂತ್

APS is my pride and pride Super Star.Rajani Kanth

ಜಾಹೀರಾತು

APS ಕಾಲೇಜಿನ “MEGA ALUMNI MEET “ ಅನ್ನು ಇದೆ 26 ಜನವರಿ 2025 ರಂದು ನಿಗದಿಪಡಿಸಲಾಗಿದೆ ಎಂದು ಕೇಳಿ ಬಹಳ ಸಂತೋಷವಾಯಿತು. ನಾನು ಚಲನಚಿತ್ರದ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ನಲ್ಲಿದ್ದೇನೆ, ನಾನು APS ನಲ್ಲಿ ಕಳೆದ ನನ್ನ ಬಾಲ್ಯದ ಸುವರ್ಣ ದಿನಗಳನ್ನು ಜ್ಞಾಪಿಸಿಕೊಳ್ಳಲು ಬಯಸುತ್ತೇನೆ.
ನಾನು ಮೊದಲು ಎಪಿಎಸ್ ಹೈಸ್ಕೂಲ್‌ಗೆ ಸೇರಿದಾಗ, ನಾನು ಈ ಹಿಂದೆ ಕನ್ನಡ ಮಾಧ್ಯಮದಲ್ಲಿ ಓದಿದ್ದೆ ಮತ್ತು ನಂತರ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದಾಗ ತುಂಬಾ ಸವಾಲಿನ ಸಂಗತಿಯಾಗಿತ್ತು. ಆದಾಗ್ಯೂ ಇಲ್ಲಿನ ನನ್ನ ಶಿಕ್ಷಕರು ನಂಬಲಾಗದಷ್ಟು ಬೆಂಬಲ ಹಾಗೂ ಪ್ರೋತ್ಸಾಹವನ್ನು ನೀಡಿದರು. ನಿರ್ದಿಷ್ಟವಾಗಿ ಹೇಳುವುದಾದರೆ, ನಾನು 10 ನೇ ತರಗತಿಯಲ್ಲಿ ರಸಾಯನಶಾಸ್ತ್ರ ವಿಷಯವು ತುಂಬಾ ಕಷ್ಟವಾಗಿತ್ತು., ಆದರೆ ನನ್ನ ರಸಾಯನಶಾಸ್ತ್ರದ ಶಿಕ್ಷಕರು ನನಗೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ಬೋಧನೆಯನ್ನು ಉಚಿತವಾಗಿ ನೀಡಿದರು. ಅವರ ಸಹಾಯದಿಂದ ನಾನು ನನ್ನ 10ನೇ ತರಗತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾದೆ. ನಂತರ APS ಕಾಲೇಜಿಗೆ ಸೇರಿಕೊಂಡೆ.
ನನ್ನ ಶಾಲಾ ದಿನಗಳಲ್ಲಿ ನನಗೆ ಹಾಡುಗಾರಿಕೆ, ನಾಟಕ ಮತ್ತು ಇತರ ಕಲೆಗಳ ಬಗ್ಗೆ ಹೆಚ್ಚು ಒಲವು ಇತ್ತು. ನಾನು ನನ್ನ ಸ್ನೇಹಿತರೊಂದಿಗೆ ಹಾಡುವುದು,ಮಿಮಿಕ್ರಿ ಮಾಡುತ್ತಿದ್ದೆ,ಅದು ನನಗೆ ಬಹಳ ಸಂತೋಷದ ವಿಷಯವಾಗಿರುತ್ತಿತ್ತು.ಜೊತೆಗೆ ನನ್ನ ಶಿಕ್ಷಕರು ನನ್ನ ಕಲೆಯನ್ನು ಗುರುತಿಸಿದರು. ನನ್ನ ಶಾಲಾ ಜೀವನದ ಮುಖ್ಯ ಘಟ್ಟ ಅದು ಒಂದು ಅಂತರ -ಶಾಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಲ್ಲಿ ಸುಮಾರು 15 ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ನಾನು ಈ ಸ್ಪರ್ಧೆಯಲ್ಲಿ ಆದಿ ಶಂಕರ ನಾಟಕದಲ್ಲಿ “ಚಂಡಾಲ” ಪಾತ್ರವನ್ನು ಮಾಡಿದ್ದೇನೆ, ಇದರಲ್ಲಿ ಶಿವನು ಆತ್ಮವನ್ನು ಭೇಟಿಯಾಗುವ ದೃಶ್ಯದಲ್ಲಿ ಅಭಿನಯಿಸಿದ್ದೇ ಅಲ್ಲಿ ನನಗೆ, “ಅತ್ಯುತ್ತಮ ನಟ ಪ್ರಶಸ್ತಿ” ಬಂದಿತು,ಇದು ನನಗೆ ಬಹಳ ಆಶ್ಚರ್ಯ ಹಾಗೂ ಸಂತೋಷವನ್ನು ತಂದಿತ್ತು.ಇದು ನನ್ನ ಮೊದಲ ನಟನೆಯ ನಾಟಕವಾಗಿತ್ತು.ಅಂದು ನನಗೆ ವೇದಿಕೆ ಕಲ್ಪಿಸಿದ್ದು APS ಸಂಸ್ಥೆ,ಈ ಅನುಭವವು ನನ್ನ ನಟನಾ ವೃತ್ತಿಜೀವನದ ಕಡೆಗೆ ಬರಲು ಮತ್ತು ನನಗೆ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.ಹಾಗಾಗಿ APS ನನ್ನ ಜೀವನದ ಪ್ರಮುಖ ಭಾಗವಾಗಿದೆ.ವಿಶಾಲವಾದ ಆ APS ಶಾಲಾ ಮೈದಾನದಲ್ಲಿ ಸಾಕಷ್ಟು ಆಟಗಳನ್ನು ಆಡಿದ್ದೇನೆ.
ಕ್ರಿಕೆಟ್, ಫುಟ್ಬಾಲ್, ಖೋ-ಖೋ ಆಡುತ್ತಿದ್ದೆ. ಎಪಿಎಸ್ಆಟದ ಮೈದಾನ, ಕಲ್ಲಿನ ಕಟ್ಟಡ, ಪ್ರೌಢಶಾಲೆ ಆವರಣ ಈ ಎಲ್ಲಾ ಸವಿನೆನಪುಗಳೂ ಇಂದಿಗೂ ಹಚ್ಚ ಹಸಿರಾಗಿ ಇವೆ.
ನನ್ನ ಮನೆ ಹನುಮಂತನಗರದ ಬಳಿ ಇತ್ತು, ಆ ಸಂತಸದ ದಿನಗಳಲ್ಲಿ ನ ನೋಡಿದ ದೊಡ್ಡ ಬಸಣ್ಣ ದೇವಸ್ಥಾನ ಮತ್ತು ದೊಡ್ಡ ಗಣಪತಿ ದೇವಸ್ಥಾನವನ್ನು ನಾನು ಇಂದಿಗೂ ನೆನಪಿಸಿಕೊಳ್ಳುತ್ತೇನೆ.
APS ಸಂಸ್ಥೆ ನನಗೆ ಯಾವಾಗಲೂ ಹೆಮ್ಮೆಯಾಗಿರುತ್ತದೆ.ಮತ್ತು ನಾನು ಇಲ್ಲಿ ಕಳೆದ ಸುವರ್ಣ ದಿನಗಳ ಸವಿ ನೆನಪುಗಳನ್ನು ಶಾಶ್ವತವಾಗಿ ನೆನಪಿಟ್ಟುಕೊಳ್ಳುತ್ತೇನೆ.ಮುಂದಿನ ದಿನಗಳಲ್ಲಿ ನಾ ಕಾಲೇಜಿಗೆ ಭೇಟಿ ನೀಡುತ್ತೇನೆ.

ಹೃತ್ಪೂರ್ವಕ ವಂದನೆಗಳು,
ಶ್ರೀ. ರಜನಿ ಕಾಂತ್

About Mallikarjun

Check Also

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆಸಾರ್ವಜನಿಕರ ಸಹಕಾರ ಅಗತ್ಯ: ಸಂತೋಷ‌ ಲಾಡ್

Public’s cooperation is needed to eradicate child labour: Santosh Lad ರಾಯಚೂರು ಜ.20 (ಕರ್ನಾಟಕ ವಾರ್ತೆ): ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.