Breaking News

ಜಿಲ್ಲಾಡಳಿತದಿಂದ ಶ್ರೀ ಶಿವಯೋಗಿಸಿದ್ಧರಾಮೇಶ್ವರ ಜಯಂತಿ ಆಚರಣೆ

Sri Shivayogi Siddharameshwar Jayanti Celebration by District Administration

ಜಾಹೀರಾತು
ಜಾಹೀರಾತು

ರಾಯಚೂರು; ಜ,17 (ಕ.ವಾ.): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ಜನವರಿ 17ರಂದು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ನಡೆಯಿತು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ
ತಹಸೀಲ್ದಾರ ಭೀಮರಾವ್ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೆ ವೇಳೆ ಶ್ರೀ
ಶಿವಯೋಗಿ ಸಿದ್ಧರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ತಹಸೀಲ್ದಾರ ಅವರು, ಹಸಿದವನಿಗೆ ಅನ್ನ ನೀಡಬೇಕೇ ವಿನಃ ಅವನಿಗೆ ವೇದಾಂತ ಹೇಳಬಾರದು ಎಂಬ ಶರಣರ ವಿಚಾರವನ್ನು ಅರಿಯಬೇಕು. ಬಸವಾದಿ ಶರಣರ ವಿಚಾರಧಾರೆಯನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.
ಜಗಜ್ಯೋತಿ ಬಸವೇಶ್ವರರ
ತತ್ವಗಳಲ್ಲಿ ಸಾಗಿ ಬಂದ ಶ್ರೀ ಸಿದ್ಧರಾಮೇಶ್ವರರು ತಮ್ಮ ಪ್ರಖರವಾದ ವಿಚಾರಧಾರೆಯ ಮೂಲಕ ಸಮಾಜದ ವ್ಯವಸ್ಥೆಯನ್ನು ಸರಿ ಮಾಡಲು ಪ್ರಯತ್ನಿಸಿದರು ಎಂದು ತಿಳಿಸಿದರು.
ತುರಕನಡೋಣಿ ಶಿಕ್ಷಕರಾದ ಆಂಜನೇಯ ಅವರು
ವಿಶೇಷ ಉಪನ್ಯಾಸ ನೀಡಿ,
ದೇವರಲ್ಲಿ ನಂಬಿಕೆ ಇಟ್ಟು ಜೊತೆಗೆ ಶರಣರ ತತ್ವಗಳನ್ನು ಅರಿತು ನಡೆದಲ್ಲಿ ಸುಖ ಶಾಂತಿ ಲಭಿಸಲಿದೆ ಎಂದರು.
ಶರಣರ ಭಕ್ತಿಯಲ್ಲಿ ಮುಕ್ತಿ ಪಡೆಯಬಹುದಾಗಿದೆ ಎಂಬುದನ್ನು ತಿಳಿಯಬೇಕು.
ನಮ್ಮ ಸಂಸ್ಕೃತಿ, ಆಚಾರ ಮತ್ತು ವಿಚಾರಗಳನ್ನು ಎಂದಿಗೂ ಮರೆಯಬಾರದು ಎಂದರು.
ವಿದ್ಯೆ ಇಲ್ಲದೆ ಏನನ್ನೂ ಮಾಡಲು ಸಾಧ್ಯವಾಗದು ಎಂಬ ಸರಳ ಸತ್ಯವನ್ನು ಅರಿಯಬೇಕು. ಪ್ರತಿಯೊಂದು ಮಗುವಿಗೂ ಉತ್ತಮವಾದ ವಿದ್ಯಾಭ್ಯಾಸ ನೀಡಬೇಕು ಎಂದು ಸಲಹೆ ಮಾಡಿದರು.
ಸಮಾರಂಭದಲ್ಲಿ ಭೋವಿ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ತಾಲೂಕಾಧ್ಯಕ್ಷರು ಮತ್ತು ಭೋವಿ ಸಮಾಜದ ಎಲ್ಲ ಮುಖಂಡರು ಉಪಸ್ಥಿತರಿದ್ದರು.

About Mallikarjun

Check Also

ಶ್ರೀ ಶಂಕರ ಮಠದ ಶಾರದಾಂಬೆಗೆ ಏಳನೇ ವರ್ಷದ ಸಂಭ್ರಮ.

Sharadamba of Sri Shankara Math celebrates its seventh anniversary. ಧಾರ್ಮಿಕತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ ಬದ್ಧ: ನಾರಾಯಣರಾವ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.