Rescue of 15 more children in Devadurga Taluk

ರಾಯಚೂರು ಜನವರಿ 17 (ಕ.ವಾ.): ದೇವದುರ್ಗ ತಾಲೂಕಿನ ಕಾರ್ಮಿಕ ನಿರೀಕ್ಷಕರು, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಮಕ್ಕಳ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗೆ ಕರೆದೊಯ್ಯುತ್ತಿದ್ದ 5 ಸರಕು ಸಾಗಣೆ ವಾಹನಗಳನ್ನು ಜನವರಿ 17ರಂದು ಜಪ್ತಿ ಮಾಡಿ ವಾಹನಗಳಲ್ಲಿ ಒಟ್ಟು 15 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಸಂಬಂಧಪಟ್ಟ ಶಾಲೆಗಳಲ್ಲಿ ಪುನಃ ದಾಖಲಿಸಲಾಯಿತು.
ಮಾಲೀಕರು, ಚಾಲಕರ ಮೇಲೆ ಕ್ರಮ: ಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ
ವಾಹನ ಮಾಲೀಕರು ಚಾಲಕರ ವಿರುದ್ಧ ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮವಹಿಸಿದರು.
ಕಾರ್ಯಾಚರಣೆಯಲ್ಲಿ
ಕಾರ್ಮಿಕ ನಿರೀಕ್ಷಕರಾದ ಮಲ್ಲಪ್ಪ, ರಾಯಚೂರ ಮೋಟಾರ್ ವಾಹನ ನಿರೀಕ್ಷಕರಾದ ರಾಕೇಶ್ ಎಮ್., ಟ್ರಾಫಿಕ್ ಪೊಲೀಸ್ ಠಾಣೆ ಪಿಎಸ್ಐ ನಾರಾಯಣ, ಇ.ಸಿ.ಓ ರಾಜನಗೌಡ, ಬಿ.ಆರ್.ಪಿ ಮನೋಹರ ಶಾಸ್ತ್ರಿ, ಸಿ.ಆರ್.ಪಿಗಳಾದ ದಾಕ್ಷಾಯಿಣಿ, ಬಸವರಾಜ ಸಾತಾಲ್, ಮಹಾದೇವ, ವೆಂಕಟಾಂಜನೇಯ, ರಘು.ಎನ್., ಬಿ.ಎಸ್. ಕೇಶಾಪೂರ, ಟ್ರಾಫಿಕ್ ಪೊಲೀಸ್ ಠಾಣೆ ಸಿಬ್ಬಂದಿ ರಾಜಾಸಾಬ್, ಸಂಗಪ್ಪ ಹಾಗೂ ಹುಸೇನ್ ನಾಯ್ಕ ಅಕೌಂಟೆಂಟ್ ಇದ್ದರು.