Application invited from eligible to start unit
ರಾಯಚೂರು ಜ.16 (ಕರ್ನಾಟಕ ವಾರ್ತೆ): ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2024-25ನೇ ಸಾಲಿನ ನೇಕಾರರ ಪ್ಯಾಕೇಜ್ ಯೋಜನೆ–ಎಸ್.ಸಿ.ಎಸ್.ಪಿ-ಟಿ.ಎಸ್.ಪಿ ಎಸ್‌ಎಮ್‌ಇ ಯೋಜನೆಯಡಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ವೈಯಕ್ತಿಕ ಫಲಾನುಭವಿ, ಪಾಲುದಾರಿಕೆ ಸಂಸ್ಥೆ, ಕಂಪನಿ, ಜವಳಿ ಸಹಕಾರಿ ಸಂಘ, ಸಂಸ್ಥೆಗಳು ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿಸಣ್ಣ (ಎಸ್.ಎಮ್.ಇ) ಘಟಕಗಳನ್ನು ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯಂತ್ರೋಪಕರಣಗಳೊಂದಿಗೆ ಸ್ಥಾಪಿಸುವ ಜವಳಿ ಘಟಕಗಳಿಗೆ ಸರ್ಕಾರದಿಂದ ಶೇ.75ರಷ್ಟು ಬಂಡವಾಳ ಹೂಡಿಕೆ ಸಹಾಯಧನ ಹಾಗೂ ವಾರ್ಷಿಕ ಶೇ.15ರಷ್ಟು ಬಡ್ಡಿ ಸಹಾಯಧನ ಒದಗಿಸುವ ಯೋಜನೆಯನ್ನು ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ಜಿಲ್ಲೆಗೆ 2024-25ನೇ ಸಾಲಿಗೆ ವಿಶೇಷ ಘಟಕ ಯೋಜನೆಯಡಿ ಭೌತಿಕ 03 ಹಾಗೂ ಗಿರಿಜನ ಉಪ ಯೋಜನೆಯಡಿ ಭೌತಿಕ 02 ಸೇರಿದಂತೆ ಒಟ್ಟು 05 ಭೌತಿಕ ಗುರಿ ನಿಗದಿಪಡಿಸಲಾಗಿದ್ದು, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ವೈಯಕ್ತಿಕ ಫಲಾನುಭವಿ, ಪಾಲುದಾರಿಕೆ ಸಂಸ್ಥೆ, ಕಂಪನಿ, ಜವಳಿ ಸಹಕಾರಿ ಸಂಘ, ಸಂಸ್ಥೆಯ ವತಿಯಿಂದ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿಸಣ್ಣ (ಎಸ್.ಎಮ್.ಇ) ಘಟಕಗಳನ್ನು ಸ್ಥಾಪಿಸಲು ಆಸಕ್ತ ಉದ್ದಿಮೆದಾರರಿಂದ ಪೂರ್ಣ ಪ್ರಮಾಣದ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ಜನವರಿ 31ರೊಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರವರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಉರ್ದು ಶಾಲೆಯ ಹತ್ತಿರ,ಅರಬ್ ಮೊಹಲ್ಲಾ ರಾಯಚೂರು ದೂರವಾಣಿ ಸಂಖ್ಯೆ:08532-233429ಗೆ ಕಚೇರಿಯ ಸಮಯದಲ್ಲಿ ಸಂಪರ್ಕ ಮಾಡಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.