Breaking News

ಉಜ್ಜಿನಿ,ಕಾಳಪುರ,ನಿಂಬಳಗೇರಿಯಲ್ಲಿಅಸ್ಪೃಶ್ಯತಾ ನಿವಾರಣೆಯ ಜನ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ

Ujjini, Kalapura, Nimbhalgeri – Street drama performance to raise public awareness of untouchability.

ಜಾಹೀರಾತು

ಸರ್ಕಾರದ ಆದೇಶ ಮೇರೆಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮಗಳು


ಮತ್ತು ಕಾಯ೯ಗಾರ, ಬೀದಿ ನಾಟಕ ಪ್ರದರ್ಶನ, ವಿವಿಧ ಕಾಯ೯ಕ್ರಮ ಮಾಡುವ ಮೂಲಕ ಜನ ಜಾಗೃತಿ ಹರಿವು ಸೋಮವಾರ ಮೂಡಿಸಲಾಯಿತು

ಕೊಟ್ಟೂರು : ತಾಲೂಕಿನ ಕಾಳಾಪುರ, ಉಜ್ಜಿನಿ, ನಿಂಬಳಗೇರೆ  ಗ್ರಾಮ ಪಂಚಾಯತಿಯಲ್ಲಿ ಅಸ್ಪೃಶ್ಯತಾ ನಿವಾರಣಾ ಜಾಗೃತಿ ಕಾರ್ಯಕ್ರಮ ಬೀದಿ ನಾಟಕ ಪ್ರದರ್ಶನವನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಆದೇಶದ ಮೇರೆಗೆ ದಲಿತ ಮತ್ತು ಇತರೇ ಸಂಘಟನೆಗಳ ಪದಾಧಿಕಾರಿಗಳು, ತಾಲ್ಲೂಕು ಆಡಳಿತ ಸಮಾಜ ಕಲ್ಯಾಣ ಇಲಾಖೆ ಹಾಗೂ ಪೋಲೀಸ್ ಇಲಾಖೆ ಇವರ ಸಹಯೋಗದಲ್ಲಿ  ಉಜ್ಜಿನಿ ಗ್ರಾಮದಲ್ಲಿ ಶ್ರೀ ಜನನಿ ಪುಷ್ಪಕಲಾ ಯುವಕ ಸಂಘ‌ ಹ್ಯಾರಡ ತಾ.ಹೂವಿನಹಡಗಲಿ ಕಲಾ ತಂಡದಿಂದ ಅಸ್ಪೃಶ್ಯತೆ ನಿವರಣಾ ಸಪ್ತಾಹದ ಅಂಗವಾಗಿ ಬೀದಿ ನಾಟಕ ಹಾಗೂ ಹಾಡುಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಯಿತು.

ಈ ಕಲಾ ತಂಡದವರು ಜನ ಜಾಗೃತಿ ಮೂಡಿಸುವಲ್ಲಿ ಮತ್ತು ಹಾಡು ಹೇಳುವುದು ,ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಜನಜಾಗೃತಿ ಗೋಳಿಸಿದರು.ಈ ಕಲಾ ತಂಡದವರು ಚಮನ್ ಸಾಬ್ ರವರ ನೇತೃತ್ವದಲ್ಲಿ ನೇರವೇರಿಸಿದರು.ಈ ಕಾಯ೯ಕ್ರಮ ಯಶಸ್ವಿಯಾಗುವ ಮೂಲಕ ಸಾರ್ವಜನಿಕರಿಗೆ ಮೆಚ್ಚುಗೆ ವ್ಯಕ್ತವಾಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಶ್ರೀಮತಿ ಶಾಹೀಖಾ ಅಹ್ಮದಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೂಡ್ಲಿಗಿ, ವ್ಯವಸ್ಥಾಪಕರು ಎಸ್.ಪಕ್ಕೀರಪ್ಪ, ವಿರೇಶ್ ತುಪ್ಪದ್, ಸದಾನಂದಯ್ಯ , ಆಶಾ ಪಾಟೀಲ್ , ಶಿಲ್ಪಾ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳು ,ಗ್ರಾಮ ಪಂಚಾಯ್ತಿ ಅಧ್ಯಕ್ಷರು ,ಸದಸ್ಯರು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.