Breaking News

ಕರ್ನಾಟಕ ಜನಸೈನ್ಯ ಸಂಘಟನೆ ವತಿಯಿಂದ ಡಿವೈಎಸ್ಪಿ ಗೆ ಮನವಿ

Appeal to DySP on behalf of Karnataka Jansainya Sangathan

ಜಾಹೀರಾತು
ಜಾಹೀರಾತು



ಗಂಗಾವತಿ ಜ.07 ಕರ್ನಾಟಕ ಜನ ಸೈನ್ಯ ಸಂಘಟನೆಯ ಜಿಲ್ಲಾಧ್ಯಕ್ಷರಾದ ರಮೇಶ್ ಕಾಳಿ ಅವರ ನೇತೃತ್ವದಲ್ಲಿ ಗಂಗಾವತಿ ಪೊಲೀಸ್ ಉಪ ವಿಭಾಗ ವರಿಷ್ಠಾಧಿಕಾರಿ ಸಿದ್ದಲಿಂಗನ ಗೌಡ ಪಾಟೀಲ್.ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಾರ್ವಜನಿಕ ಪರವಾಗಿ ಗಂಗಾವತಿ ನಗರ ಹಾಗೂ ಸುತ್ತಮುತ್ತ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಕಂಕರ್, ಮರಳು, ಮರಮ್ಮು, ಡಸ್ಟ್ ಸೇರಿದಂತೆ ನೆಲ್ಲಿನ ತವಡನ್ನು ಮತ್ತು ಇಟ್ಟಂಗಿ ಸಾಗಿಸುತ್ತಿದ್ದಾರೆ. ಇವರ್ಯಾರು ರಸ್ತೆ ಸುರಕ್ಷ ನಿಯಮಗಳನ್ನು ಹಾಗೂ ಸಾಗಾಣಿಕೆ ನಿಯಮಗಳನ್ನು ಅನುಸರಿಸುತ್ತಿಲ್ಲ. ಹಾಗೂ ಓವರ್‌ಲೋಡ್ ಮಾಡಿಕೊಂಡು ಓಡಾಡುವ ವಾಹನಗಳಿಂದ ಕಂಕರ್‌ಗಳು ರಸ್ತೆಗೆ ಬಿದ್ದು ಬೈಕ್ ಸ್ಕಿಡ್ ಆಗಿ ಬಿದ್ದು ಕೈ-ಕಾಲು ಮುರಿದು ಕೊಂಡಿರುವ ಘಟನೆಗಳು ನಡೆದಿವೆ. ಮತ್ತು ಮರಂ ಡಸ್ಟ್ ಗಾಳಿಗೆ ಹಾರಿ ಬೈಕ್ ಸಾವರರ ಕಣ್ಣಿಗೆ ಬಿದ್ದು ಅಪಾಯಕ್ಕೆ ಕಾರಣವಾಗುತ್ತಿವೆ. ಈ ವಾಹನಗಳ ನಿರ್ಲಕ್ಷ್ಯದಿಂದಾಗಿ ಜನಸಾಮಾನ್ಯರು ಪ್ರಾಣ ಪಣಕ್ಕಿಟ್ಟು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅತೀ ಭಾರವಾದ ಸರಕುಗಳಿಂದಾಗಿ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ಆದ್ದರಿಂದ ಕೂಡಲೇ ಸರಕು ಸಾಗಾಣಿಕೆ ವಾಹನ ಮಾಲೀಕರ ಸಭೆ ಕರೆದು ರಸ್ತೆ ನಿಯಮ ಹಾಗೂ ಸರಕು ಸಾಗಾಣಿಕೆಯಲ್ಲಿ ಕವಚ ಹಾಕಿಕೊಳ್ಳುವಂತೆ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಬೇಕು ಮತ್ತು ನಗರ ಹೊರ ವಲಯ ಹಾಗೂ ‘ಗ್ರಾಮೀಣ ಪ್ರದೇಶದಲ್ಲಿ ನಿಧಾನವಾಗಿ ವಾಹನಗಳನ್ನು ಚಲಾಯಿಸುವಂತೆ ಸೂಚಿಸಬೇಕು ಎಂದು ಕರ್ನಾಟಕ ಜನಸೈನ್ಯವತಿಯಿಂದ ಗಂಗಾವತಿ ನಗರ ಡಿ.ವೈ.ಎಸ್.ಪಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷರಾದ ರಮೇಶ್ ಕಾಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ಗೌಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್. ಕೆ. ರಮೇಶ್, ಗಂಗಾವತಿ ತಾಲೂಕ ಕಾರ್ಮಿಕ ಅಧ್ಯಕ್ಷರಾದ ಎ. ಎಸ್. ಅಂಜಿನಪ್ಪ, ಕಾರಟಗಿ ತಾಲೂಕು ಅಧ್ಯಕ್ಷರಾದ ಮುರುಳಿಧರ್, ಗಂಗಾವತಿ ತಾಲೂಕು ಉಪಾಧ್ಯಕ್ಷರಾದ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿಯಾದ ಪರಶುರಾಮ ಕಾಳಿ, ಶಿವಕುಮಾರ್, ಸೇರಿದಂತೆ ಮಾಧ್ಯಮ ಸಲಹೆಗಾರಾರದ ನಾಗರಾಜ್ ಕೊಟ್ನೆಕಲ್ ಅವರು ಈ ಸಂದರ್ಭದಲ್ಲಿ ಉಪಸಿತರಿದ್ದರು.

About Mallikarjun

Check Also

ರೈತರ ಸಮಸ್ಯೆಗಳನ್ನು ಸಕಾಲದಲ್ಲಿಪರಿಹರಿಸಲು ರೈತಸಂಘಗಳುಪ್ರತಿಭಟನೆ

Farmers unions protest to solve the problems of farmers in time. ವರದಿ‌: ಬಂಗಾರಪ್ಪ .ಸಿ .ಹನೂರು: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.