Savitri Bai Phule’s birth anniversary celebration at Congress office
ಶಿಕ್ಷಣದ ಕಾಂತ್ರಿ ಮೂಡಿಸಿದಸಾವಿತ್ರಿಬಾಯಿಯವರ ಕೊಡುಗೆ ಅನನ್ಯ : ಕರಿಬಸಪ್ಪ ನಿಡಗುಂದಿ ಅಭಿಮತ
ವರದಿ : ಪಂಚಯ್ಯ ಹಿರೇಮಠ,,
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಯಲಬುರ್ಗಾ : ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕರಿಬಸಪ್ಪ ನಿಡಗುಂದಿ ಮಾತನಾಡಿ ಅವರು, ದೇಶದಲ್ಲಿ ಶಿಕ್ಷಣ ಕಾಂತ್ರಿ ಮೂಡಿಸಿದ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಅಪಾರವಾಗಿದೆ. ದೇಶದ ಮೊದಲ ಶಿಕ್ಷಕಿಯಾಗಿ ಅಕ್ಷರದ ಅರಿವನ್ನು ಮೂಡಿಸಿದ ಮಹಾನ್ ತಾಯಿ ಅವರ ತತ್ವ ಆದರ್ಶವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು.
ದೇಶದ ಪ್ರತಿಯೊಬ್ಬರಿಗೂ ಅಕ್ಷರ ಕಲಿಸುವ ಕೆಲಸ ಮಾಡುವ ಮೂಲಕ ಶಿಕ್ಷಣದ ಮಹತ್ವವನ್ನು ಸಾರಿದ್ದಾರೆ. ಇಂತಹ ಶ್ರೇಷ್ಠ ಚಿಂತನೆಗಳ ವಿಚಾರಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಶಿವನಗೌಡ ದಾನರೆಡ್ಡಿ, ವಕ್ತಾರ ಆನಂದ ಉಳ್ಳಾಗಡ್ಡಿ, ಜಿ.ಪ. ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಭೂ ನ್ಯಾಯ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ಜಕ್ಕಲಿ, ಮುಖಂಡರಾದ ಹಂಪಯ್ಯಸ್ವಾಮಿ ಹಿರೇಮಠ, ಶರಣಗೌಡ ಬಸಾಪೂರು, ಸಿದ್ದು ಪೋ.ಪಾಟೀಲ, ನಾಗರಾಜ ತಲ್ಲೂರು, ನಿಂಗಪ್ಪ ಕಮತರ, ಸುರೇಶ್ ಧನಕಾಯಿ, ಪುನೀತ್ ಕೊಪ್ಪಳ, ಸಂಗಮೇಶ ಚಿಕ್ಕಮ್ಯಾಗೇರಿ ಇದ್ದರು.